ರಸ್ತೆ ದಾಟುತಿದ್ದ ವೃದ್ಧನಿಗೆ ದ್ವಿಚಕ್ರ ವಾಹನ ಡಿಕ್ಕಿ.. ಸಿಸಿಟಿವಿಯಲ್ಲಿ ರೆಕಾರ್ಡ್ ಆಯ್ತು ಭಯಂಕರ ದೃಶ್ಯ

ರಸ್ತೆ ದಾಟುತಿದ್ದ ವೃದ್ಧನಿಗೆ ದ್ವಿಚಕ್ರ ವಾಹನ ಡಿಕ್ಕಿ.. ಸಿಸಿಟಿವಿಯಲ್ಲಿ ರೆಕಾರ್ಡ್ ಆಯ್ತು ಭಯಂಕರ ದೃಶ್ಯ

ಬೆಂಗಳೂರು: ದ್ವಿಚಕ್ರ ವಾಹನ ಸವಾರನ ನಿರ್ಲಕ್ಷಕ್ಕೆ‌ ವೃದ್ಧ ಬಲಿಯಾಗಿರೋ ಘಟನೆ ಶಾಂತಿನಗರದ ಬಳಿ ನಡೆದಿದೆ. 85 ವರ್ಷದ ಸುಬ್ರಮಣಿ ಸಿ ಮೃತ ಪಾದಚಾರಿ.

ಶಾಂತಿನಗರ ಬಸ್ ನಿಲ್ದಾಣದಿಂದ ರಿಚ್ಮಂಡ್ ವೃತ್ತದ ಕಡೆಗೆ ದ್ವಿಚಕ್ರ ವಾಹನ ಸವಾರ ಬರುತ್ತಿದ್ದ. ಇದೇ ವೇಳೆ KSRTC ಕೇಂದ್ರ ಕಚೇರಿ ಕಡೆಯಿಂದ ಭಾರತ್ ಬ್ಯಾಂಕ್ ಕಡೆಗೆ ಪಾದಚಾರಿ ಸುಬ್ರಮಣಿ ರಸ್ತೆ ದಾಟುತ್ತಿದ್ದರು. ವೇಗವಾಗಿ ಬರುತ್ತಿದ್ದ ಗಾಡಿ ರಸ್ತೆ ದಾಟುತ್ತಿದ್ದ ವೃದ್ಧನಿಗೆ ಡಿಕ್ಕಿ ಹೊಡೆದಿದೆ. ಗುದ್ದಿದ ರಭಸಕ್ಕೆ ವೃದ್ಧ ಹಾರಿಬಿದ್ದಿದ್ದು ಆತನ ತಲೆ ಹಾಗೂ ಕೈಕಾಲುಗಳಿಗೆ ತೀವ್ರ ಪೆಟ್ಟಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ಆಕ್ಸಿಡೆಂಟ್ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

The post ರಸ್ತೆ ದಾಟುತಿದ್ದ ವೃದ್ಧನಿಗೆ ದ್ವಿಚಕ್ರ ವಾಹನ ಡಿಕ್ಕಿ.. ಸಿಸಿಟಿವಿಯಲ್ಲಿ ರೆಕಾರ್ಡ್ ಆಯ್ತು ಭಯಂಕರ ದೃಶ್ಯ appeared first on News First Kannada.

Source: newsfirstlive.com

Source link