‘ಯಾವ ಷರತ್ತೂ ಇಲ್ಲದೆ ಸದ್ಯದಲ್ಲೇ ಬಿಜೆಪಿಗೆ ಸೇರಲಿದ್ದೇನೆ’..- ಕೊಳ್ಳೇಗಾಲ ಶಾಸಕ ಎನ್​.ಮಹೇಶ್​

‘ಯಾವ ಷರತ್ತೂ ಇಲ್ಲದೆ ಸದ್ಯದಲ್ಲೇ ಬಿಜೆಪಿಗೆ ಸೇರಲಿದ್ದೇನೆ’..- ಕೊಳ್ಳೇಗಾಲ ಶಾಸಕ ಎನ್​.ಮಹೇಶ್​

ಚಾಮರಾಜನಗರ: ಶೀಘ್ರವೇ ಬಿಜೆಪಿ ಪಕ್ಷಕ್ಕೆ ‌ಸೇರ್ಪಡೆಯಾಗುವುದಾಗಿ ಬಿಎಸ್​ಪಿಯ ಉಚ್ಛಾಟಿತ ಶಾಸಕ ಎನ್​. ಮಹೇಶ್​ ಅಧಿಕೃತವಾಗಿ ಹೇಳಿದ್ದಾರೆ. ಇಂದು ಮಾಜಿ ಸಿಎಂ. ಯಡಿಯೂರಪ್ಪನವರ ಭೇಟಿ ಮಾಡಿ ಮಾತುಕತೆ ನಡೆಸಿದ ಅವರು.. ಬಿಜೆಪಿಗೆ ಬರುವಂತೆ ಬಿ.ಎಸ್.ವೈ ಆಹ್ವಾನಿಸಿದ್ದಾರೆ.. ಶೀಘ್ರದಲ್ಲೇ ಬಿಜೆಪಿ ಸೇರುವ ದಿನಾಂಕ ನಿಗದಿಯಾಗುತ್ತದೆ ಎಂದು ನ್ಯೂಸ್​ಫಸ್ಟ್​ಗೆ ತಿಳಿಸಿದ್ದಾರೆ.

ಇದನ್ನೂ ಓದಿ: ಸಂಪುಟ ರಚನೆಯಲ್ಲಿ ಯಾವುದೇ ಹಸ್ತಕ್ಷೇಪ ಮಾಡಲ್ಲ, ಸಲಹೆಯನ್ನು ನೀಡಲ್ಲ -ಬಿಎಸ್​ವೈ

ಈ ಸಂಬಂಧ ನ್ಯೂಸ್​ಫಸ್ಟ್​ನ ಜೊತೆ ಮಾತನಾಡಿದ ಅವರು ನನ್ನ ರಾಜಕೀಯ ಅಸ್ತಿತ್ವಕ್ಕಾಗಿ, ಕಾರ್ಯಕರ್ತರ ಮನವಿ ಮೇರೆಗೆ ಬಿಜೆಪಿ ಸೇರ್ಪಡೆಯಾಗುತ್ತಿದ್ದೇನೆ. ಎರಡು ವರ್ಷದಿಂದಲೂ ಬಿಎಸ್​ವೈ ಬಿಜೆಪಿ ಸೇರುವಂತೆ ಹೇಳ್ತಿದ್ರು ಆದರೆ ಕಾರ್ಯಕರ್ತರ ಅಭಿಪ್ರಾಯ ಪಡೆಯಲು ಇಷ್ಟು ದಿನ ಬೇಕಾಯ್ತು.. ಹೀಗಾಗಿ ಯಾವುದೇ ಷರತ್ತುಗಳಿಲ್ಲದೆ ಇವಾಗ ಬಿಜೆಪಿ ಸೇರುತ್ತಿದ್ದೇನೆ ಎಂದಿದ್ದಾರೆ.

ಇದನ್ನೂ ಓದಿ: ಕೃಷ್ಣಾ ನದಿ ಅವಾಂತರ: ಗುಡಿಸಲಿಗೆ ನುಗ್ಗಿದ ನೀರು; ಹೊರಬರಲು ಪರದಾಡಿದ ಮೀನುಗಾರರು

ನಾನು ಇಪ್ಪತ್ತು ವರ್ಷದಿಂದ ಬಿಎಸ್​ಪಿಯಲ್ಲಿ ಕೆಲಸ ಮಾಡಿಕೊಂಡು ಬಂದಿದ್ದೀನಿ, ಬಿಎಸ್​ಪಿ ಪಕ್ಷದಿಂದ ಉಚ್ಛಾಟನೆ ಮಾಡಿದ್ರು, ಆದ್ರೆ ನನ್ನ ರಾಜಕೀಯ ಅಸ್ತಿತ್ವ ನೋಡಬೇಕಲ್ಲ, ನಾನೇನು ನೇಣು ಹಾಕಿಕೊಳ್ಳಬೇಕಾ? ಇನ್ನು ಮಾಜಿ ಸಿಎಂ ಯಡಿಯೂರಪ್ಪ ನಡುವಿನ ಒಡನಾಟದಲ್ಲಿ ನನ್ನ ಅಸ್ತಿತ್ವಕ್ಕೆ, ವಿಚಾರಗಳಿಗೆ ಧಕ್ಕೆ ಬರಲ್ಲ. ಸಮಾಜದಲ್ಲಿ ಸಮಾನತೆ ಬರಬೇಕು ಅನ್ನೋದು ಬಿಜೆಪಿಯಲ್ಲಿಯೂ ಇದೆ, ಬಿಜೆಪಿ ಏನು ಭಯೋತ್ಪಾದಕ ಸಂಘಟನೆನಾ? ಅಥವಾ ನಾನೇನು ಟೆರರಿಸ್ಟ್​ ನಾ? ಎಂದು ಪ್ರಶ್ನೆ ಮಾಡಿದ್ದಾರೆ.

ಇನ್ನು ನೂತನ ಸಂಪುಟದಲ್ಲಿ ಸಚಿವ ಸ್ಥಾನದ ಕುರಿತು ಪ್ರತಿಕ್ರಿಯಿಸಿದ ಅವರು ಸಂಪುಟ ವಿಸ್ತರಣೆಯಲ್ಲಿ ಸಚಿವ ಸ್ಥಾನ ನೀಡೋದು ಮುಖ್ಯಮಂತ್ರಿ ವಿವೇಚನೆಗೆ ಬಿಟ್ಟ ವಿಚಾರ ಎಂದಿದ್ದಾರೆ.

The post ‘ಯಾವ ಷರತ್ತೂ ಇಲ್ಲದೆ ಸದ್ಯದಲ್ಲೇ ಬಿಜೆಪಿಗೆ ಸೇರಲಿದ್ದೇನೆ’..- ಕೊಳ್ಳೇಗಾಲ ಶಾಸಕ ಎನ್​.ಮಹೇಶ್​ appeared first on News First Kannada.

Source: newsfirstlive.com

Source link