ಇವರು ಕದ್ದಿದ್ದೆಲ್ಲಾ ಕಾಸ್ಟ್​ಲೀ ಬೈಕ್​ಗಳೇ.. ಕೊನೆಗೂ ಅಂದರ್ ಆದ್ರು ಖತರ್ನಾಕ್​​​​ ಕಳ್ಳರು

ಇವರು ಕದ್ದಿದ್ದೆಲ್ಲಾ ಕಾಸ್ಟ್​ಲೀ ಬೈಕ್​ಗಳೇ.. ಕೊನೆಗೂ ಅಂದರ್ ಆದ್ರು ಖತರ್ನಾಕ್​​​​ ಕಳ್ಳರು

ಬೆಂಗಳೂರು: ಹೈಫೈ ಬೈಕ್ಸ್​ ಕದಿಯುತ್ತಿದ್ದ ಖತರ್ನಾಕ್​​ ಕಳ್ಳರ ಗ್ಯಾಗೊಂದು ಕಾಟನ್​​ ಪೇಟೆ ಪೊಲೀಸರ ಬಲೆಗೆ ಸಿಕ್ಕಿಬಿದ್ದಿದೆ. ಕಾಟನ್​​ ಪೇಟೆ ಪೊಲೀಸರು ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ ಸಿಕ್ಕಿಬಿದ್ದ ಈ ಖತರ್ನಾಕ್​​​ ಕಳ್ಳರ ಗ್ಯಾಂಗ್​​ನಿಂದ 10 ಲಕ್ಷ ರೂಪಾಯಿ ಬೆಲೆ ಬಾಳುವ 5 ಬೈಕ್ ವಶಕ್ಕೆ ಪಡೆದಿದ್ದಾರೆ.

ಅಬ್ದುಲ್ ರೆಹಮಾನ್, ಶಾಬುದ್ದೀನ್​​ ಕಾಟನ್​​ ಪೇಟೆ ಪೊಲೀಸರಿಂದ ಬಂಧನಕ್ಕೀಡಾದ ಆರೋಪಿಗಳು. ಇವರು ಮನೆ ಮುಂದೆ ನಿಲ್ಲಿಸಿದ್ದ ಬೈಕ್​​​ ಕದಿಯುತ್ತಿದ್ದರು. ಸಿಟಿ ಮಾರ್ಕೆಟ್, ಇಂದಿರಾನಗರ, ಹೈಗ್ರೌಂಡ್ಸ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ಮಾಡಿದ್ದರು ಎನ್ನಲಾಗಿದೆ.

blank

ಇನ್ನು, ಇತ್ತೀಚೆಗೆ ಕಾಟನ್ ಪೇಟೆ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಮನೆ ಮುಂದೆ ನಿಲ್ಲಿಸಿದ್ದ ದ್ವಿಚಕ್ರ ವಾಹನ ಕಳ್ಳತನವಾಗಿತ್ತು. ಈ ಬಗ್ಗೆ ಬೈಕ್​​ ಮಾಲೀಕರು ದೂರು ದಾಖಲಿಸಿದ್ದರು. ದೂರಿನ ಆಧಾರದ ಮೇರೆಗೆ ಶೋಧಕಾರ್ಯ ಮುಂದುವರಿಸಿದ ಪೊಲೀಸರ ಕೈಗೆ ಖತರ್ನಾಕ್​​ ಕಳ್ಳರು ಸಿಕ್ಕಿಬಿದ್ದಿದ್ದಾರೆ.

ಇದನ್ನೂ ಓದಿ: ಹೊರ ರಾಜ್ಯದಿಂದ ಬಂದು ಕರ್ನಾಟಕದಲ್ಲಿ ಹೈಫೈ ಬೈಕ್ಸ್​ ಕದೀತಿದ್ದ ಖತರ್ನಾಕ್​​ ಕಳ್ಳ ಅಂದರ್​​​…

ಕಾಟನ್​​ ಪೇಟೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದು ವಿಚಾರಣೆ ಮುಂದುವರಿಸಿದ್ದಾರೆ. ತಾವೇ ಈ ಎಲ್ಲಾ ಕಳ್ಳತನಗಳ ಮಾಡಿರುವುದಾಗಿ ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾರೆ.

The post ಇವರು ಕದ್ದಿದ್ದೆಲ್ಲಾ ಕಾಸ್ಟ್​ಲೀ ಬೈಕ್​ಗಳೇ.. ಕೊನೆಗೂ ಅಂದರ್ ಆದ್ರು ಖತರ್ನಾಕ್​​​​ ಕಳ್ಳರು appeared first on News First Kannada.

Source: newsfirstlive.com

Source link