ಶಿವಮೊಗ್ಗದಲ್ಲಿ ಕೆರೆಗೆ ಉರುಳಿದ ಕೆಎಸ್ಆರ್​ಟಿಸಿ ಬಸ್; ಗಾಯಗೊಂಡ ಬೈಕ್ ಸವಾರ ಸಾವು

ಶಿವಮೊಗ್ಗದಲ್ಲಿ ಕೆರೆಗೆ ಉರುಳಿದ ಕೆಎಸ್ಆರ್​ಟಿಸಿ ಬಸ್; ಗಾಯಗೊಂಡ ಬೈಕ್ ಸವಾರ ಸಾವು

ಶಿವಮೊಗ್ಗ: ಸಾಗರದ ಕಾಸ್ಪಾಡಿ ಬಳಿ ಸಂಭವಿಸಿದ ಕೆಎಸ್ಆರ್​​ಟಿಸಿ ಬಸ್ ಭೀಕರ ಅಪಘಾತದಲ್ಲಿ ಬೈಕ್​​ ಸವಾರ ಸಾವನ್ನಪ್ಪಿದ್ದಾರೆ. ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಬೈಕ್ ಸವಾರ ದೀಪು (28) ಚಿಕಿತ್ಸೆ ಫಲಿಸದೆ ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಇಂದು ಕೆಎಸ್​ಆರ್​ಟಿಸಿ ಬಸ್ ಸಾಗರದಿಂದ ಶಿವಮೊಗ್ಗದತ್ತ ಹೋಗುತ್ತಿತ್ತು. ಈ ವೇಳೆ ಎದುರಿಗೆ ಬಂದ ಬೈಕ್​​​ ಡಿಕ್ಕಿ ಹೊಡೆಯದಂತೆ ತಪ್ಪಿಸಲು ಹೋಗಿ ಕೆಎಸ್​ಆರ್​ಟಿಸಿ ಬಸ್ ಕಾಸ್ಪಾಡಿ ಕೆರೆಗೆ ಉರುಳಿದೆ.

ಇದನ್ನೂ ಓದಿ: ಕೆರೆಗೆ ಉರುಳಿದ KSRTC ಬಸ್​​​- ತಪ್ಪಿದ ಭಾರೀ ದುರಂತ

ಇನ್ನು, ಭೀಕರ ಅಪಘಾತದಲ್ಲಿ ಅದೃಷ್ಟವಾಶಾತ್​​​ ಬಸ್ಸಿನಲ್ಲಿದ್ದ 27 ಮಂದಿ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ, ಬೈಕ್​​ ಸವಾರ ಮಾತ್ರ ಚಿಕಿತ್ಸೆ ಫಲಿಸದೇ ಅಸುನೀಗಿದ್ದಾರೆ.

The post ಶಿವಮೊಗ್ಗದಲ್ಲಿ ಕೆರೆಗೆ ಉರುಳಿದ ಕೆಎಸ್ಆರ್​ಟಿಸಿ ಬಸ್; ಗಾಯಗೊಂಡ ಬೈಕ್ ಸವಾರ ಸಾವು appeared first on News First Kannada.

Source: newsfirstlive.com

Source link