ಕೊರೊನಾ ವಿರುದ್ಧ ಮತ್ತೊಂದು ಅಸ್ತ್ರ: ಮಾಡೆರ್ನಾ ವ್ಯಾಕ್ಸಿನ್​​ ಬಳಕೆಗೆ ಡಿಸಿಜಿಐ ಅನುಮೋದನೆ

ಕೊರೊನಾ ವಿರುದ್ಧ ಮತ್ತೊಂದು ಅಸ್ತ್ರ: ಮಾಡೆರ್ನಾ ವ್ಯಾಕ್ಸಿನ್​​ ಬಳಕೆಗೆ ಡಿಸಿಜಿಐ ಅನುಮೋದನೆ

ನವದೆಹಲಿ: ಭಾರತದಲ್ಲಿ ಮಾಡೆರ್ನಾ ಕೋವಿಡ್‌ ಲಸಿಕೆ ಬಳಕೆಗೆ ಭಾರತೀಯ ಔಷಧ ನಿಯಂತ್ರಣ ಪ್ರಾಧಿಕಾರ ಅನುಮತಿ ನೀಡಿದೆ. ಇದರ ಪರಿಣಾಮ ಈಗ ನಿರೀಕ್ಷೆಯಂತೆಯೇ ಭಾರತಕ್ಕೆ ಮತ್ತೊಂದು ಕೋವಿಡ್ ಲಸಿಕೆ ಲಭ್ಯವಾಗಿದೆ.

ಕೇಂದ್ರ ಸರ್ಕಾರದ ಈ ನಿರ್ಧಾರದಿಂದ ಭಾರತಕ್ಕೆ ನಾಲ್ಕನೇ ಕೋವಿಡ್ ಲಸಿಕೆ ಸಿಕ್ಕಂತಾಗಿದೆ. ದೇಶದಲ್ಲಿ ಸದ್ಯ ಕೋವಿಶೀಲ್ಡ್, ಕೊವ್ಯಾಕ್ಸಿನ್‌ ಮತ್ತು ಸ್ಪುಟ್ನಿಕ್-ವಿ ಲಸಿಕೆಗಳನ್ನು ನೀಡಲಾಗುತ್ತಿತ್ತು. ಇದರ ಸಾಲಿಗೆ ಮಾಡೆರ್ನಾ ಸೇರ್ಪಡೆಯಾಗಿದ್ದು, ಕೆಲವೇ ದಿನಗಳಲ್ಲಿ ಲಸಿಕೆ ನೀಡುವ ಕಾರ್ಯ ಹೆಚ್ಚಾಗಲಿದೆ.

ಇತ್ತೀಚೆಗೆ ಭಾರತದಲ್ಲಿ ತುರ್ತು ಬಳಕೆಗಾಗಿ ಮಾಡೆರ್ನಾ ಸಂಸ್ಥೆಯ ಕೋವಿಡ್-19 ಲಸಿಕೆಯನ್ನು ಆಮದು ಮಾಡಿಕೊಳ್ಳಲು ಸಿಪ್ಲಾ ಕಂಪನಿ ಕೇಂದ್ರಕ್ಕೆ ಮನವಿ ಮಾಡಿತ್ತು. ಈಗ ಸಿಪ್ಲಾ ಮನವಿಗೆ ಸ್ಪಂದಿಸಿರುವ ಭಾರತೀಯ ಔಷಧ ನಿಯಂತ್ರಣ ಪ್ರಾಧಿಕಾರ(ಡಿಸಿಜಿಐ) ಅನುಮತಿ ನೀಡಿದೆ.

18 ವರ್ಷ ಮೇಲ್ಪಟ್ಟವರಲ್ಲಿ ಮಾಡೆರ್ನಾ ಲಸಿಕೆಯನ್ನು ತುರ್ತು ಸಂದರ್ಭಗಳಲ್ಲಿ ಬಳಸಲಾಗುತ್ತದೆ. ಕೊವ್ಯಾಕ್ಸ್‌ ಮೂಲಕ ಭಾರತಕ್ಕೆ ಸ್ವಲ್ಪ ಪ್ರಮಾಣದ ಮಾಡೆರ್ನಾ ಕೋವಿಡ್‌–19 ಲಸಿಕೆ ಡೋಸ್‌ಗಳನ್ನು ಪೂರೈಸಲು ಅಮೆರಿಕ ಸರ್ಕಾರ ಸಮ್ಮತಿಸಿದೆ.

The post ಕೊರೊನಾ ವಿರುದ್ಧ ಮತ್ತೊಂದು ಅಸ್ತ್ರ: ಮಾಡೆರ್ನಾ ವ್ಯಾಕ್ಸಿನ್​​ ಬಳಕೆಗೆ ಡಿಸಿಜಿಐ ಅನುಮೋದನೆ appeared first on News First Kannada.

Source: newsfirstlive.com

Source link