ವಾಕಿಂಗ್ ಕರೆದುಕೊಂಡು ಹೋಗಿ ಪತಿಯನ್ನು ಕೊಲೆಗೈದ ಪತಿ

ಕೊಪ್ಪಳ: ಮೊಬೈಲ್ ಚಾರ್ಜರ್ ವಯರ್ ನಿಂದು ಪತ್ನಿಯ ಕುತ್ತಿಗೆಗೆ ಬಿಗಿದು, ಕಲ್ಲು ಎತ್ತಿ ಹಾಕಿ ಕೊಂದು ಹಾಕಿ ಪತಿ ಅಮಾನುಷವಾಗಿ ಕೊಲೆ ಮಾಡಿರುವ ಘಟನೆ ಕೊಪ್ಪಳದ ಕುಷ್ಟಗಿಯಲ್ಲಿ ನಡೆದಿದೆ.

ಮಂಜುಳಾ ಮಂಜುನಾಥ ಕಟ್ಟಿಮನಿ(25) ಮೃತಳಾಗಿದ್ದಾಳೆ. ಈಕೆಯ ಪತಿ ಮಂಜುನಾಥ್ ಕಟ್ಟಿಮನಿಯಾಗಿದ್ದಾನೆ. ಮಂಜುಳಾ ತಾಲೂಕಿನ  ಸರ್ಕಾರಿ  ಆಸ್ಪತ್ರೆಯ ಕೋವಿಡ್ ವಿಭಾಗದಲ್ಲಿ ಲ್ಯಾಬ್ ಟೆಕ್ನಿಷಿಯನ್ ಆಗಿ ಹೊರಗುತ್ತಿಗೆಯಲ್ಲಿ ಸೇವೆಯಲ್ಲಿದ್ದಳು. ಇದನ್ನೂ ಓದಿ: ಸಚಿವ ಸಂಪುಟ ರಚನೆಯಲ್ಲಿ ಮಧ್ಯ ಪ್ರವೇಶಿಸುವುದಿಲ್ಲ: ಬಿ.ಎಸ್ ಯಡಿಯೂರಪ್ಪ

ಯಲಬುರ್ಗಾ ತಾಲೂಕಿನ ಯಡ್ಡೋಣಿ ಗ್ರಾಮದ ಮಂಜುಳಾಳನ್ನು ಕೊಪ್ಪಳ ತಾಲೂಕಾ ಮುದ್ದಾಬಳ್ಳಿಯ ಮಂಜುನಾಥ ಕಟ್ಟಿಮನಿಗೆ ವಿವಾಹ ಮಾಡಿಕೊಡಲಾಗಿತ್ತು. ಪತಿ ಮಂಜುನಾಥ ಕಟ್ಟಿಮನಿ ಕುಷ್ಟಗಿಯ ಕೆನರಾ ಬ್ಯಾಂಕಿನಲ್ಲಿ ಅಟೆಂಡರ್ ಕೆಲಸದಲ್ಲಿದ್ದನು. ಈತನಿಗೆ ಬೇರೊಂದು ಯುವತಿಯೊಂದಿಗೆ ಅನೈತಿಕ ಸಂಬಂಧ ಇತ್ತು ಎನ್ನಲಾಗಿದೆ. ಈ ಕಾರಣದಿಂದಲೇ ಮನಸ್ತಾಪದಿಂದ ದಂಪತಿ ಆಗಾಗ್ಗೆ ಜಗಳವಾಡುತ್ತಿದ್ದರು. ಇದನ್ನೂ ಓದಿ: ಬೆಂಗ್ಳೂರು ಹೋಗುವುದಾಗಿ ಹೇಳಿ 3 ದಿನದ ಹಿಂದೆ ಮನೆ ಬಿಟ್ಟವ ಶವವಾಗಿ ಪತ್ತೆ

ಗುರುವಾರ ರಾತ್ರಿ ಬೃಂದಾವನ ಹೋಟೆಲ್‍ಗೆ ಹೋಗಿ ಇಬ್ಬರೂ ಜೊತೆಗೂಡಿ ಊಟ ಮಾಡಿದ್ದಾರೆ. ನಂತರ ಫೋಟೋವನ್ನು ಸಾಮಾಜಿಕ ಜಾಲತಾಣದ ಸ್ಟೇಟಸ್‍ನಲ್ಲಿ ಹಂಚಿಕೊಂಡಿದ್ದಾರೆ. ಬೆಳಗ್ಗೆ ಇಬ್ಬರ ನಡುವೆ ಜಗಳವಾಗಿದ್ದು, ವಾಕಿಂಗ್ ಕರೆದುಕೊಂಡು ಹೋಗಿ ಪತಿ ಮಂಜುನಾಥ ಪತ್ನಿ ಮಂಜುಳಾನ್ನು ಮೊಬೈಲ್ ಚಾರ್ಜರ್ ವಯರ್ ನಿಂದ ಕುತ್ತಿಗೆಗೆ ಬಿಗಿದು ತಲೆ ಮೇಲೆ ಕಲ್ಲು ಎತ್ತಿ ಅಮಾನುಷವಾಗಿ ಕೊಂದು ಹಾಕಿದ್ದಾನೆ. ನಂತರ ಕೊಪ್ಪಳ ರಸ್ತೆಯ ಕದಳೀ ನಗರ ಬಳಿ ಸಜ್ಜೆ ಹೊಲದಲ್ಲಿ ಎಸೆದು ಪರಾರಿಯಾಗಿದ್ದಾನೆ.  ಕುಷ್ಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಮಂಜುನಾಥನನ್ನು ವಶಕ್ಕೆ ಪಡೆದುಕೊಂಡು ತನಿಖೆ ಕೈಗೊಂಡಿದ್ದಾರೆ.

The post ವಾಕಿಂಗ್ ಕರೆದುಕೊಂಡು ಹೋಗಿ ಪತಿಯನ್ನು ಕೊಲೆಗೈದ ಪತಿ appeared first on Public TV.

Source: publictv.in

Source link