ವ್ಯಾಕ್ಸಿನೇಷನ್​ಗೆ ಬಿಡೆನ್ ಹೊಸ ಪ್ಲಾನ್: ಹೊಸದಾಗಿ ಲಸಿಕೆ ಪಡೆದವರಿಗೆ 7,400 ರೂ ಪ್ರೋತ್ಸಾಹ ಧನ

ವ್ಯಾಕ್ಸಿನೇಷನ್​ಗೆ ಬಿಡೆನ್ ಹೊಸ ಪ್ಲಾನ್: ಹೊಸದಾಗಿ ಲಸಿಕೆ ಪಡೆದವರಿಗೆ 7,400 ರೂ ಪ್ರೋತ್ಸಾಹ ಧನ

ಜನರನ್ನ ಕೊರೊನಾ ಲಸಿಕೆ ಪಡೆದುಕೊಳ್ಳುವಂತೆ ಉತ್ತೇಜಿಸಲು ಅಮೆರಿಕಾದ ಜೋ ಬಿಡೆನ್ ಸರ್ಕಾರ ಹೊಸ ಯೋಜನೆಯೊಂದನ್ನು ಹಾಕಿಕೊಂಡಿದೆ. ಸಂಪೂರ್ಣ ವ್ಯಾಕ್ಸಿನೇಷನ್ ಪಡೆದ ಜನರಿಗೆ ತಲಾ 100 ಡಾಲರ್ ಹಣ ಹಂಚಲು ನಿರ್ಧರಿಸಿದೆ. 100 ಡಾಲರ್ ಅಂದ್ರೆ ಲಸಿಕೆ ಪಡೆದ ಪ್ರತಿ ವ್ಯಕ್ತಿ 7,400 ಕ್ಕೂ ಹೆಚ್ಚು ಹಣ ಪಡೆಯಲಿದ್ದಾರೆ.

ರಾಜ್ಯಗಳಿಗೆ ರೆಸ್ಕ್ಯೂ ಪ್ಲಾನ್ ಅಡಿಯಲ್ಲಿ ಹಂಚಲಾದ ಹಣವನ್ನ ಲಸಿಕೆ ಪಡೆದ ಜನರಿಗೆ ಹಂಚುವಂತೆ ರಾಜ್ಯಾಡಳಿತಗಳಿಗೆ ಜೋ ಬಿಡೆನ್ ಕರೆ ನೀಡಿದ್ದಾರೆ. ಅಷ್ಟೇ ಅಲ್ಲದೆ ಉದ್ಯೋಗಿಗಳಿಗೆ ತಮ್ಮ ಮನೆಯ ಸದಸ್ಯರಿಗೆ ಕೊರೊನಾ ವ್ಯಾಕ್ಸಿನ್ ಹಾಕಿಸಲು ವೇತನ ಸಹಿತ ರಜೆಗಳನ್ನು ನೀಡಬೇಕೆಂದು ಬಿಡೆನ್ ಸರ್ಕಾರ ಹೇಳಿದೆ. ಇನ್ನು ಅಮೆರಿಕಾದಲ್ಲಿ ಈವರೆಗೆ 16 ಕೋಟಿ ಜನರಿಗೆ ಸಂಪೂರ್ಣ ವ್ಯಾಕ್ಸಿನೇಷನ್ ನೀಡಲಾಗಿದೆ.

The post ವ್ಯಾಕ್ಸಿನೇಷನ್​ಗೆ ಬಿಡೆನ್ ಹೊಸ ಪ್ಲಾನ್: ಹೊಸದಾಗಿ ಲಸಿಕೆ ಪಡೆದವರಿಗೆ 7,400 ರೂ ಪ್ರೋತ್ಸಾಹ ಧನ appeared first on News First Kannada.

Source: newsfirstlive.com

Source link