‘ಚಮಚೆಗಳನ್ನು ದೂರವಿಡಿ’; ನೂತನ ಸಿಎಂ ಬೊಮ್ಮಾಯಿಗೆ ನಾಗತಿಹಳ್ಳಿ ಕಿವಿಮಾತು

‘ಚಮಚೆಗಳನ್ನು ದೂರವಿಡಿ’; ನೂತನ ಸಿಎಂ ಬೊಮ್ಮಾಯಿಗೆ ನಾಗತಿಹಳ್ಳಿ ಕಿವಿಮಾತು

ಬೆಂಗಳೂರು: ಇತ್ತೀಚೆಗೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಬಸವರಾಜ ಬೊಮ್ಮಾಯಿಯವರಿಗೆ ಹಲವಾರು ಗಣ್ಯರು ಶುಭಕೋರಿದ್ದಾರೆ. ಹಲವರು ಕೆಲವು ಸಲಹೆ ಸೂಚನೆಗಳನ್ನೂ ನೀಡಿದ್ದಾರೆ. ಈ ಪೈಕಿ ಬಸವರಾಜ ಬೊಮ್ಮಾಯಿಯವರಿಗೆ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಕಿವಿಮಾತೊಂದನ್ನು ಹೇಳಿದ್ದಾರೆ. ಫೇಸ್​​ಬುಕ್​ನಲ್ಲಿ ಪೋಸ್ಟ್ ಹಾಕುವ ಮೂಲಕ ತಮ್ಮ ಮಾತುಗಳನ್ನು ಹಂಚಿಕೊಂಡಿದ್ದಾರೆ.

ನಾಗತಿಹಳ್ಳಿ ಚಂದ್ರಶೇಖರ್ ಹೇಳಿದ್ದೇನು..?

ಪ್ರೀತಿಯ ಮುಖ್ಯಮಂತ್ರಿ ಶ್ರೀ ಬಸವರಾಜ ಬೊಮ್ಮಾಯಿ, ಮನುಷ್ಯ ಪ್ರೀತಿ, ಸಾಹಿತ್ಯ ಪ್ರೀತಿ ಮತ್ತು ಪ್ರಾಣಿ ಪ್ರೀತಿ ಉಳ್ಳ ನೀವು ನನ್ನಂಥವರಿಗೆ ಆಸೆ ಹುಟ್ಟಿಸಿದ್ದೀರಿ. ನೀವು ಹೈಕಮಾಂಡ್ ಲೋಕಮಾಂಡ್ ಹಂಗು ಮೀರಿ ಅದ್ಭುತ ಕೆಲಸ ಮಾಡಿ. ಚಮಚೆಗಳನ್ನು ದೂರವಿಡಿ. ಸಮಾಜದ ಕಟ್ಟಕಡೆಯ ಜೀವದ ಬಗ್ಗೆ ನಿಮ್ಮ ಕಾಳಜಿ ಇರಲಿ. ನೆನಪಿರಲಿ; ಅಧಿಕಾರ ಅಲ್ಪಕಾಲೀನ

The post ‘ಚಮಚೆಗಳನ್ನು ದೂರವಿಡಿ’; ನೂತನ ಸಿಎಂ ಬೊಮ್ಮಾಯಿಗೆ ನಾಗತಿಹಳ್ಳಿ ಕಿವಿಮಾತು appeared first on News First Kannada.

Source: newsfirstlive.com

Source link