ಕೊನೆಗೂ ಕೊರೊನಾ ವ್ಯಾಕ್ಸಿನ್ ಪಡೆದುಕೊಂಡ ರಾಹುಲ್ ಗಾಂಧಿ; ನಿನ್ನೆ, ಇಂದು ಸಂಸತ್​​ಗೆ ಗೈರು

ಕೊನೆಗೂ ಕೊರೊನಾ ವ್ಯಾಕ್ಸಿನ್ ಪಡೆದುಕೊಂಡ ರಾಹುಲ್ ಗಾಂಧಿ; ನಿನ್ನೆ, ಇಂದು ಸಂಸತ್​​ಗೆ ಗೈರು

ನವದೆಹಲಿ: ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ನಿನ್ನೆ ಕೊರೊನಾ ವ್ಯಾಕ್ಸಿನ್ ಪಡೆದುಕೊಂಡಿದ್ದಾರೆ ಎನ್ನಲಾಗಿದೆ. ಇದೇ ಕಾರಣಕ್ಕಾಗಿ ನಿನ್ನೆ ಮತ್ತು ಇಂದು ಅವರು ಪಾರ್ಲಿಮೆಂಟ್​​ನಲ್ಲಿ ಅಧಿವೇಶನಕ್ಕೆ ಹಾಜರಾಗಲಿಲ್ಲ ಎಂದು ಹೇಳಲಾಗಿದೆ. ಆದರೆ ರಾಹುಲ್ ಗಾಂಧಿ ಯಾವ ವ್ಯಾಕ್ಸಿನ್ ತೆಗೆದುಕೊಂಡಿದ್ದಾರೆ ಎಂಬುದು ಇನ್ನೂ ಬಹಿರಂಗವಾಗಿಲ್ಲ.

ವ್ಯಾಕ್ಸಿನ್ ವಿಚಾರವಾಗಿ ಹಲವು ಊಹಾಪೋಹಗಳು ಕೇಳಿಬಂದಾಗ ರಾಹುಲ್ ಗಾಂಧಿಯವರೂ ಸಹ ವ್ಯಾಕ್ಸಿನ್ ಕುರಿತು ಜನರಲ್ಲಿ ಭಯ ಹುಟ್ಟಿಸುತ್ತಿದ್ದಾರೆಂದು ಬಿಜೆಪಿ ನಾಯಕರು ವಾಗ್ದಾಳಿ ನಡೆಸಿದ್ದರು. ಅಲ್ಲದೇ ರಾಹುಲ್ ಗಾಂಧಿ ವ್ಯಾಕ್ಸಿನ್ ಪಡೆದುಕೊಳ್ಳದ ವಿಚಾರವಾಗಿ ಸೋಷಿಯಲ್ ಮೀಡಿಯಾಗಳಲ್ಲಿ ಆಗಾಗ್ಗೆ ಚರ್ಚೆಗಳು ನಡೆಯುತ್ತಿದ್ದವು.

ಇನ್ನು ಸೋನಿಯಾ ಗಾಂಧಿ ಈಗಾಗಲೇ ಎರಡೂ ಸುತ್ತಿನ ವ್ಯಾಕ್ಸಿನೇಷನ್ ಪಡೆದುಕೊಂಡಿದ್ದು ಪುತ್ರಿ ಪ್ರಿಯಾಂಕಾ ಗಾಂಧಿ ವಾದ್ರಾ ಮೇ ತಿಂಗಳಲ್ಲಿ ಒಂದು ಸುತ್ತಿನ ವ್ಯಾಕ್ಸಿನ್ ಪಡೆದುಕೊಂಡಿದ್ದಾರೆ ಎನ್ನಲಾಗಿದೆ.

The post ಕೊನೆಗೂ ಕೊರೊನಾ ವ್ಯಾಕ್ಸಿನ್ ಪಡೆದುಕೊಂಡ ರಾಹುಲ್ ಗಾಂಧಿ; ನಿನ್ನೆ, ಇಂದು ಸಂಸತ್​​ಗೆ ಗೈರು appeared first on News First Kannada.

Source: newsfirstlive.com

Source link