ಟರ್ಕಿಯಲ್ಲಿ ಭೀಕರ ಕಾಡ್ಗಿಚ್ಚು; 50ಕ್ಕೂ ಹೆಚ್ಚು ಪ್ರಾಣಿಗಳು ಸಜೀವ ದಹನ; ನಾಲ್ವರು ಸಾವು

ಟರ್ಕಿಯಲ್ಲಿ ಭೀಕರ ಕಾಡ್ಗಿಚ್ಚು; 50ಕ್ಕೂ ಹೆಚ್ಚು ಪ್ರಾಣಿಗಳು ಸಜೀವ ದಹನ; ನಾಲ್ವರು ಸಾವು

ನವದೆಹಲಿ: ನೈರುತ್ಯ ಟರ್ಕಿಯಲ್ಲಿ ಭೀಕರ ಕಾಡ್ಗಿಚ್ಚು ಕಾಣಿಸಿಕೊಂಡ ಪರಿಣಾಮ ನಾಲ್ವರು ಸಜೀವ ದಹನವಾಗಿದ್ದಾರೆ. ಇದುವರೆಗೂ ಸುಮಾರು 20ಕ್ಕೂ ಹೆಚ್ಚು ಕಾಡ್ಗಿಚ್ಚುಗಳು ಕಾಣಿಸಿಕೊಂಡಿದ್ದು, ಇನ್ನೂ ಸುಮಾರು ಎರಡು ಡಜನ್‌ ಅರಣ್ಯ ವ್ಯಾಪ್ತಿಯಲ್ಲಿ ಬೆಂಕಿ ಉರಿಯುತ್ತಲೇ ಇದೆ.

ಹತ್ತಾರು ಅರಣ್ಯಗಳು ಹೊತ್ತಿ ಉರಿಯುತ್ತಿರುವ ಕಾರಣ ನೂರಾರು ಕಾಡು ಪ್ರಾಣಿಗಳು ಜೀವ ಉಳಿಸುವ ಸಲುವಾಗಿ ದಿಕ್ಕೇ ತೋಚದಂತೆ ಓಡುತ್ತಿವೆ. 50ಕ್ಕೂ ಹೆಚ್ಚು ಪ್ರಾಣಿಗಳು ಜೀವ ಉಳಿಸಿಕೊಳ್ಳಲಾಗದೆ ಕಾಡ್ಗಿಚ್ಚಿನ ಬೆಂಕಿಯಲ್ಲಿ ಸಾವನ್ನಪ್ಪಿವೆ.

 

ಮೆಡಿಟೆರೇನಿಯನ್, ಏಜಿಯನ್, ಮಾನ್ವಗತ್, ಅಕ್ಸೇಕಿ ಸೇರಿದಂತೆ ಹಲವು ಪ್ರದೇಶಗಳಲ್ಲಿ ಭಯಾನಕ ಕಾಡ್ಗಿಚ್ಚು ಕಾಣಿಸಿಕೊಂಡಿದೆ. ಕಾಡ್ಗಿಚ್ಚು ಸುಮಾರು 320 ಕಿಲೋ ಮೀಟರ್​​ ವ್ಯಾಪಿಸಿದೆ. ರಕ್ಷಣಾ ಸಿಬ್ಬಂದಿಯೂ ಕಾಡಿನ ಒಳಗೆ ಹೋಗಲಾಗದೆ ಪರದಾಟ ನಡೆಸುತ್ತಿದ್ದಾರೆ.

blank

ಇನ್ನು, ಈ ಭೀಕರ ಕಾಡ್ಗಿಚ್ಚಿನಿಂದ ನೂರಾನು ಮನೆಗಳು ಅಗ್ನಿಗಾಹುತಿಯಾಗಿವೆ. 25ಕ್ಕೂ ಹೆಚ್ಚು ಗ್ರಾಮಗಳಿಗೆ ಕಾಡ್ಗಿಚ್ಚು ವ್ಯಾಪಿಸಿದ ಪರಿಣಾಮ ಜನರನ್ನು ಸ್ಥಳಾಂತರ ಮಾಡಲಾಗುತ್ತಿದೆ. ಸಾವಿರಾರು ಮಂದಿ ಪ್ರಾಣಭೀತಿಯಲ್ಲಿದ್ದಾರೆ. ಸದ್ಯ ಬೆಂಕಿ ನಂದಿಸಲು ಅಗ್ನಿಶಾಮಕ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ.

The post ಟರ್ಕಿಯಲ್ಲಿ ಭೀಕರ ಕಾಡ್ಗಿಚ್ಚು; 50ಕ್ಕೂ ಹೆಚ್ಚು ಪ್ರಾಣಿಗಳು ಸಜೀವ ದಹನ; ನಾಲ್ವರು ಸಾವು appeared first on News First Kannada.

Source: newsfirstlive.com

Source link