ಚೀನಾ-ಭಾರತ ಸೇನೆ ನಡುವೆ ನಾಳೆ 12 ನೇ ಸುತ್ತಿನ ಮಾತುಕತೆ.. ಕುತೂಹಲ ಹೆಚ್ಚಿಸಿದ ಸಭೆ

ಚೀನಾ-ಭಾರತ ಸೇನೆ ನಡುವೆ ನಾಳೆ 12 ನೇ ಸುತ್ತಿನ ಮಾತುಕತೆ.. ಕುತೂಹಲ ಹೆಚ್ಚಿಸಿದ ಸಭೆ

ನವದೆಹಲಿ: ಚೀನಾ ಭಾರತ ನಡುವಿನ ಗಡಿ ಸಮಸ್ಯೆ ಒಂದು ಮಟ್ಟಕ್ಕೆ ತಣ್ಣಗಾಗಿದ್ದರೂ ಚೀನಾ ತನ್ನ ಗಡಿ ಪ್ರದೇಶದಲ್ಲಿ ಕ್ಯಾಂಪ್​ಗಳನ್ನು ನಿರ್ಮಿಸುವುದರಿಂದ ಮಾತ್ರ ಹಿಂದೆ ಸರಿದಿಲ್ಲ. ಈ ಮಧ್ಯೆ ಹಲವು ತಿಂಗಳುಗಳಿಂದ ಬ್ರೇಕ್ ನೀಡಿದ್ದ ಮಾತುಕತೆಗೆ ಇದೀಗ ಮತ್ತೊಮ್ಮೆ ವೇದಿಕೆ ಸಿದ್ಧಪಡಿಸಲಾಗಿದೆ.

ನಾಳೆ ಬೆಳಗ್ಗೆ 10:30 ರ ಸುಮಾರಿಗೆ ಲಡಾಖ್​ ಸೆಕ್ಟರ್​ ಕುರಿತಂತೆ ಭಾರತೀಯ ಸೇನೆ ಮತ್ತು ಪೀಪಲ್ಸ್ ರಿಪಬ್ಲಿಕ್ ಆರ್ಮಿ ನಡುವೆ 12 ನೇ ಸುತ್ತಿನ ಕಮಾಂಡರ್ ಮಟ್ಟದ ಮಾತುಕತೆ ನಡೆಯಲಿದೆ.

ಚೀನಾ ಭಾಗದ ಮೋಲ್ಡೊ ಬಳಿ ಈ ಮಾತುಕತೆ ನಡೆಯಲಿದೆ ಎನ್ನಲಾಗಿದೆ. ಎರಡೂ ದೇಶಗಳು 50,000 ದಿಂದ 60,000 ಸೈನಿಕರನ್ನ ಗಡಿ ಪ್ರದೇಶದಲ್ಲಿ ನಿಯೋಜಿಸಲಾಗಿದೆ. ಕಳೆದ ಮೇ 28 ರಂದು ಸೇನಾ ಮುಖ್ಯಸ್ಥ ಜನರಲ್ ಮನೋಜ್ ಮುಕುಂದ್ ನರವಾಣೆ ಸೈನಿಕರನ್ನ ಭೇಟಿಯಾಗಿ ಯಾವುದೇ ಸಮಯದಲ್ಲಿ ಅಲರ್ಟ್​ ಆಗಿ ಇರುವಂತೆ ಹೇಳಿದ್ದನ್ನ ಇಲ್ಲಿ ನೆನೆಯಬಹುದು.

The post ಚೀನಾ-ಭಾರತ ಸೇನೆ ನಡುವೆ ನಾಳೆ 12 ನೇ ಸುತ್ತಿನ ಮಾತುಕತೆ.. ಕುತೂಹಲ ಹೆಚ್ಚಿಸಿದ ಸಭೆ appeared first on News First Kannada.

Source: newsfirstlive.com

Source link