ಸಿಎಂ ಬೊಮ್ಮಾಯಿ ಮೊದಲ ದೆಹಲಿ ಭೇಟಿ; ದೆಹಲಿ ನಾಯಕರ ಬಳಿ ಚರ್ಚಿಸಿದ್ದೇನು..?

ಸಿಎಂ ಬೊಮ್ಮಾಯಿ ಮೊದಲ ದೆಹಲಿ ಭೇಟಿ; ದೆಹಲಿ ನಾಯಕರ ಬಳಿ ಚರ್ಚಿಸಿದ್ದೇನು..?

ನವದೆಹಲಿ: ನೂತನ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ ಬೆನ್ನಲ್ಲೇ ದೆಹಲಿಗೆ ಪ್ರಯಾಣ ಬೆಳೆಸಿರುವ ಬಸವರಾಜ ಬೊಮ್ಮಾಯಿ ಇಂದು ಪ್ರಧಾನಿ ನರೇಂದ್ರ ಮೋದಿ, ಗೃಹಸಚಿವ ಅಮಿತ್ ಶಾ ಹಾಗೂ ಬಿಜೆಪಿ ರಾಷ್ಟ್ರೀಯಾಧ್ಯಕ್ಷ ಜೆ.ಪಿ. ನಡ್ಡಾ ಅವರನ್ನ ಭೇಟಿಯಾಗಿ ಮಾತುಕತೆ ನಡೆಸಿದರು.

ನಂತರ ಸುದ್ದಿಗೋಷ್ಠಿ ನಡೆಸಿದ ಅವರು ಕೆಲವು ವಿಚಾರಗಳನ್ನ ಪ್ರಸ್ತಾಪಿಸಿದರು.. ನರೇಂದ್ರ ಮೋದಿಯವರ ಜೊತೆಗೆ ಮಾತುಕತೆ ನಡೆಸಿದ್ದೇನೆ.. ರಾಜ್ಯದ ಸ್ಥಿತಿಗತಿಗಳ ಬಗ್ಗೆ ಪ್ರಧಾನಿ ಮೋದಿ ಸುದೀರ್ಘ ಚರ್ಚೆ ನಡೆಸಿದರು. ಉತ್ತಮ ಆಡಳಿತ ಕೊಡಬೇಕು.. ಇಡೀ ಪಕ್ಷ ಈ ನಿರೀಕ್ಷೆ ಮಾಡುತ್ತಿದೆ.. ಆ ನಿಟ್ಟಿನಲ್ಲಿ ನಿಮ್ಮ ನಿರ್ಧಾರಗಳು ಇರಬೇಕು ಎಂದರು. ರಾಜ್ಯದ ಬೆಳವಣಿಗೆ ವಿಷಯದಲ್ಲಿ ನೀವು ತರುವ ಬೇಡಿಕೆಗಳಿಗೆ ಸಹಾಯ ಮಾಡುತ್ತೇವೆ ಎಂದಿದ್ದಾರೆ. ಅಲ್ಲದೇ ಕೊರೊನಾ ನಿಯಂತ್ರಣ ಮಾಡಬೇಕು ಎಂದರು.. ನಾವು ತೆಗೆದುಕೊಳ್ಳುತ್ತಿರುವ ಕ್ರಮಗಳ ಬಗ್ಗೆ ಮಾಹಿತಿ ನೀಡಿದ್ದೇನೆ. ಹೆಚ್ಚಿನ ಟೆಸ್ಟ್​ಗಳನ್ನು ನಡೆಸಲು ಹೇಳಿದ್ದೇನೆ. ಗಡಿ ಜಿಲ್ಲೆಗಳಲ್ಲಿ ಎಚ್ಚರಿಕೆ ವಹಿಸಲು ಈಗಾಗಲೇ ನಾನು ಜಿಲ್ಲಾಧಿಕಾರಿಗಳಿಗೆ ಹೇಳಿದ್ದೇನೆ ಎಂದು ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯ ಮುಖ್ಯಾಂಶಗಳು..

 • ನೀವು ಬರಬಹುದು ಅಥವಾ ದೂರವಾಣಿ ಮೂಲಕ ತಿಳಿಸದರೂ ನಮ್ಮಿಂದ ಸಹಕಾರವಿರಲಿದೆ ಎಂದು ಪ್ರಧಾನಿ ಮೋದಿ ಹೇಳಿದರು. ಮೋದಿಯವರ ವಿಶ್ವಾಸ ಔದಾರ್ಯಕ್ಕೆ ಧನ್ಯವಾದಗಳನ್ನು ಹೇಳ್ತೇನೆ.
 • ಅಮಿತ್ ಶಾ ಪಾರ್ಲಿಮೆಂಟ್​ನಲ್ಲಿ ಭೇಟಿಯಾಗಿದ್ರು. ನಿಮ್ಮ ವಿಶ್ವಾಸದಂತೆ ಹಗಲು ರಾತ್ರಿ ದುಡಿಯುತ್ತೇನೆ ಎಂದು ಹೇಳಿದ್ದೇನೆ. ರಾಜಕೀಯ ಸ್ಥಿತಿಗತಿ ಮತ್ತು ಪಕ್ಷ ಬಲವರ್ಧನೆಗೆ ನಡ್ಡಾ ಸೂಚನೆ ನೀಡಿದ್ದಾರೆ. ಚುನಾವಣೆಗಳನ್ನು ಯಶಸ್ವಿಯಾಗಿ ಎದುರಿಸಲು ಹೇಳಿದರು.
 • ಇದಲ್ಲದೇ ನಮ್ಮ ಸಂಸದರ ಜೊತೆಗೂ ಚರ್ಚೆ ನಡೆಸಿದ್ದೇನೆ. ರಾಜ್ಯದ ಯೋಜನೆಗಳು ಕುಂಠಿತವಾಗಿದ್ದಲ್ಲಿ ಗುರುತಿಸಿ ಸಮಸ್ಯೆ ಪರಿಹರಿಸಲು ಮನವಿ ಮಾಡಿದ್ದೇನೆ. ಕೇಂದ್ರ ರಾಜ್ಯದ ನಡುವೆ ಇರುವ ಸಂಪರ್ಕ ಸಮಸ್ಯೆಯನ್ನ ಸರಿಪಡಿಸುವುದು.. ಜನಪರ ಯೋಜನೆಗಳು ಬಡವರಿಗೆ ರೈತರಿಗೆ ತಲುಪುವಂತೆ ವಿಶೇಷವಾದ ಪ್ರಯತ್ನ ಮಾಡೋಣ ಎಂದಿದ್ದಾರೆ.
 • ಇಂದು ಜಲಶಕ್ತಿ ಸಚಿವರನ್ನ ಭೇಟಿಯಾಗಿ ಮಾತುಕತೆ ನಡೆಸಿದೆ. ಎಂಪಿಗಳ ಸಭೆ ಕರೆದಿದ್ದೇನೆ. ನಾವು ಎಲ್ಲ ಎಂಪಿಗಳ ಡೆಲಿಗೇಷನ್ ಮಾಡಿ ಆ ಮೂಲಕ ನಾಯಕರನ್ನ ಭೇಟಿಯಾಗುವುದರಿಂದ ಪರಿಣಾಮಕಾರಿಯಾಗಲಿದೆ. ಇಂದು ಅದು ಪ್ರಾರಂಭವಾಗಿದೆ.
 • ಕೆಲವು ಯೋಜನೆಗಳ ಬಗ್ಗೆ ನೀರಾವರಿ ಸಚಿವರಿಗೆ ಚರ್ಚಿಸಿದ್ದೇವೆ. ಕೃಷ್ಣಾ ಮೇಲ್ದಂಡೆ ಯೋಜನೆ ಬಗ್ಗೆಯೂ ಚರ್ಚಿಸಿದ್ದೇವೆ. ಭದ್ರಾ ಮೇಲ್ದಂಡೆ ಯೋಜನೆಯನ್ನ ರಾಷ್ಟ್ರೀಕರಣಗೊಳಿಸಲು ಮನವಿ ಮಾಡಿದೆ. ಎತ್ತಿನ ಹೊಳೆ ಪ್ರಾಜೆಕ್ಟ್​ನ್ನೂ ರಾಷ್ಟ್ರೀಯ ಪ್ರಾಜೆಕ್ಟ್​ನ್ನಾಗಿ ಮಾಡಲು ಕೇಳಿದೆ, ಮೇಕೆದಾಟು ಯೋಜನೆಯ ಬಗ್ಗೆಯೂ ಮಾತನಾಡಿದೆ.. ಡಿಪಿಆರ್ ಅಪ್ರೂವ್ ಮಾಡಬೇಕು ಎಂದು ಕೇಳಿದೆ.
 • ಕಳಸಾ ಬಂಡೂರಿ ಬಗ್ಗೆಯೂ ಚರ್ಚೆ ಮಾಡಿದೆ. ಮುಂದಿನ ದಿನಗಳಲ್ಲಿ ಯೋಜನೆ ಆಧಾರಿತ ದಾಖಲೆ ತೆಗೆದು ಎಂಪಿಗಳನ್ನ ಭೇಟಿಯಾಗಿ ಕ್ಲಿಯರೆನ್ಸ್ ಪಡೆಯಲು ಮುಂದಾಗ್ತೇವೆ. ಬೆಂಗಳೂರಲ್ಲಿ ಸೆಂಟ್ರಲ್ ಪ್ರಾಜೆಕ್ಟ್ ಕ್ಲಿಯರೆನ್ಸ್ ಸೆಕ್ಷನ್ ತೆಗೆಯಲು ಚಿಂತಿಸಿದ್ದೇವೆ. ಅದಕ್ಕಾಗಿ ಒಂದು ವರ್ಕಿಂಗ್ ಗ್ರೂಪ್ ಮಾಡಲು ಚಿಂತಿಸಿದ್ದೇವೆ.
 • ನಾಳೆ ನಿರ್ಮಲಾ ಸೀತಾರಾಮ್ ಅವರನ್ನು ಭೇಟಿಯಾಗಲಿದ್ದೇನೆ. ರಾಜ್ಯಕ್ಕೆ ವಾಪಸ್ಸಾಗುತ್ತಲೇ ಕೋವಿಡ್ ಬಗ್ಗೆ ಗಡಿ ಜಿಲ್ಲೆಗಳಲ್ಲಿ ಡಿಸಿ ಎಸ್​ಪಿ ಡಿಹೆಚ್​ಓ ಜೊತೆಗೆ ವಿಡಿಯೋ ಕಾನ್ಫರೆನ್ಸ್ ನಡೆಸಲಿದ್ದೇನೆ. ಕೊವಿಡ್ ನಿಯಂತ್ರಣಕ್ಕೆ ಹೆಚ್ಚಿನ ಪ್ರಾಶಸ್ತ್ಯ ತೆಗೆದುಕೊಳ್ತೇನೆ.
 • ಅಧ್ಯಕ್ಷರ ಜೊತೆ ಈಗಾಗಲೇ ಶೀಘ್ರ ಸಂಪುಟ ರಚನೆ ಮಾಡುವ ಬಗ್ಗೆ ಮಾತನಾಡಿದ್ದೇನೆ. ವಾರದೊಳಗೆ ಹೈಕಮಾಂಡ್​ನಿಂದ ಗ್ರೀನ್ ಸಿಗ್ನಲ್ ಸಿಗಲಿದೆ. ಇನ್ನೊಮ್ಮೆ ದೆಹಲಿಗೆ ಬರಬೇಕಾಗಬಹುದು. ಇಂದು ಸಂಪುಟದ ರಚನೆ ಬಗ್ಗೆ ಮಾತನಾಡಿಲ್ಲ.
 • ಕೋವಿಡ್ ನಿರ್ವಹಣೆ, ವ್ಯಾಕ್ಸಿನ್ ಬೇಡಿಕೆ ಎಷ್ಟಿದೆ ಎಂಬುದನ್ನ ಮಾತನಾಡಿದ್ದೇನೆ. ನಿಮಗೆ ಬೇಕಿರುವ ವ್ಯಾಕ್ಸಿನ್ ಕಳುಹಿಸಲು ಆರೋಗ್ಯ ಸಚಿವರಿಗೆ ಹೇಳ್ತೇನೆ ಎಂದಿದ್ದಾರೆ. ಪಿಎಂ ಕೇರ್ ಅಡಿ ಕೆಲವು ವೈದ್ಯಕೀಯ ಸಲಕರಣೆಗಳನ್ನೂ ನೀಡುವುದಾಗಿ ಹೇಳಿದ್ದಾರೆ. ಮಕ್ಕಳಿಗೆ ಐಸಿಯು, ಸಪರೇಟ್ ಬೆಡ್, ಆಕ್ಸಿಜನ್ ಜನರೇಟರ್​ಗಳನ್ನ ಪ್ಲಾನ್ ಮಾಡಿದ್ದೇವೆ.. ಆ ಕೆಲಸ ನಡೀತಾ ಇದೆ.
 • ವಾತ್ಸಲ್ಯ ಯೋಜನೆಯಡಿ ಪರೀಕ್ಷೆಗಳು ನಡೆಯುತ್ತಿವೆ. ಮೂಲ ಸೌಕರ್ಯದ ಕೆಲಸವೂ ನಡೆಯುತ್ತಿದೆ. ಮೂರನೇ ಅಲೆ ಬಂದ್ರೆ ಎಲ್ಲ ಸಿದ್ಧತೆಗಳನ್ನೂ ಮಾಡಿಕೊಂಡಿದ್ದೇವೆ.
 • ಚುರುಕಾದ ಪರಿಣಾಮಕಾರಿ ಆಡಳಿತ ನೀಡುತ್ತೇವೆ. ಜನಪರ ಆಡಳಿತ ಮತ್ತು ಸ್ವಚ್ಛ ದಕ್ಷ ಆಡಳಿತ ನೀಡುತ್ತೇವೆ. ಆರ್ಥಿಕತೆ ಸಮಸ್ಯೆನ್ನೂ ತೊಂದರೆಯಾಗದಂತೆ ಎದುರಿಸುತ್ತೇವೆ. ದೀರ್ಘಕಾಲದಲ್ಲಿ ರೈತರು, ಮಕ್ಕಳು, ದೀನ ದಲಿತರ ತಲಾದಾಯ ಹೆಚ್ಚಿಸಲು ವಿಶೇಷ ಗಮನ ಹರಿಸುತ್ತಿದ್ದೇವೆ. ಇವರ ಆದಾಯ ಹೆಚ್ಚಾದ್ರೆ ರಾಜ್ಯದ ಆದಾಯವೂ ಹೆಚ್ಚುತ್ತದೆ. ವಿಶೇಷ ಕಾರ್ಯಕ್ರಮಗಳನ್ನು ರೂಪಿಸುತ್ತೇವೆ, ಪ್ರಾರಂಭಿಕವಾಗಿ ರೈತರ ಮಕ್ಕಳಿಗೆ ಸ್ಕಾಲರ್ ಶಿಪ್ ನೀಡುತ್ತಿದ್ದೇವೆ.
 • ನಮ್ಮ ಆತ್ಮೀಯ ಗೆಳೆಯರಿಗೆ ಇಷ್ಟೇ ಹೇಳ್ತೇನೆ.. ನಾನೂ ಬೆಂಗಳೂರಿಗೆ ಹೋಗ್ತಿದ್ದೇನೆ.. ನೀವೂ ಬನ್ನಿ. ನಿಮ್ಮ ಜಿಲ್ಲೆಗಳಿಗೆ ಹೋಗಿ ಕೆಲಸ ಮಾಡಿ ಅಂತಷ್ಟೇ ಹೇಳ್ತೇನೆ. ಸಿದ್ದರಾಮಯ್ಯನವರ ಆಡಳಿತ ಭ್ರಷ್ಟಾಚಾರದಲ್ಲಿ ಮುಳುಗಿ ಹೋಗಿತ್ತು. ಅವರಿಗೆ ಮಾತನಾಡುವ ಹಕ್ಕೆಲ್ಲಿದೆ. ಹೀಗೆ ಮಾತಾಡುವುದು ಅವರ ಮನಸ್ಥಿತಿಯನ್ನ ತೋರಿಸುತ್ತದೆ.
 • ರಬ್ಬರ್ ಸ್ಟಾಂಪ್ ಹೇಳಿಕೆಗೆ ಪ್ರತಿಕ್ರಿಯಿಸಿ.. ನನ್ನ ಆಡಳಿತದ ಮೇಲೆ ಯಾವುದೇ ಸ್ಟಾಂಪ್ ಇದ್ದರೆ ಅದು ಬಿಜೆಪಿ ಸ್ಟಾಂಪ್ ಇರುತ್ತದೆ. ಆ ಸ್ಟಾಂಪ್ ನಮ್ಮ ಕೇಂದ್ರ ನಾಯಕರು ಮತ್ತು ಯಡಿಯೂರಪ್ಪನವರ ಆಡಳಿತದ ಸ್ಟಾಂಪ್ ಇರುತ್ತದೆ. ಅನುಭವಿ, ಹೊಸ ಚಿಂತನೆ ಮಾಡುವ ಕ್ರಿಯೇಟಿವ್ ಟೀಮ್ ಇರುತ್ತದೆ, ಯಂಗ್ ಟೀಮ್​ಗ ವಿಚಾರವಾಗಿ ಪ್ರತಿಕ್ರಿಸಿ ವೇಯ್ಟ್ ಅಂಡ್ ಸೀ ಎಂದರು ಬೊಮ್ಮಾಯಿ.
 • ನಾನು ಆಶಾವಾದಿ. ಪ್ರತಿ ಸನ್ನಿವೇಶದಲ್ಲಿ ರಾಜ್ಯಕ್ಕೆ ಅನುಕೂಲವಾಗುವ ಅವಕಾಶ ತೆಗೆದುಕೊಳ್ಳೋದನ್ನ ನೋಡ್ತೇನೆ. ಈವರೆಗೆ ಯಾವುದೇ ಹೆಸರು ತೆಗೆದುಕೊಂಡಿಲ್ಲ.. ಅವರು ನನ್ನ ಗೆಳೆಯರು.. ಈಗಾಗಲೇ ಈ ವಿಚಾರವನ್ನ ಮಾತಾಡಿದ್ದೇನೆ.. ಅದರ ಬಗ್ಗೆ ನಾನು ಯಾವುದೇ ಕಾಮೆಂಟ್ಸ್ ಕೊಡೋದಿಲ್ಲ ಎಂದು ಎದ್ದುಹೋದರು.

The post ಸಿಎಂ ಬೊಮ್ಮಾಯಿ ಮೊದಲ ದೆಹಲಿ ಭೇಟಿ; ದೆಹಲಿ ನಾಯಕರ ಬಳಿ ಚರ್ಚಿಸಿದ್ದೇನು..? appeared first on News First Kannada.

Source: newsfirstlive.com

Source link