ಮೊಟ್ಟೆ ಡೀಲ್ ಕೇಸ್; ಶಶಿಕಲಾ ಜೊಲ್ಲೆ ವಿರುದ್ಧ ಕ್ರಮದ ಬಗ್ಗೆ ಸಿಎಂ ಬೊಮ್ಮಾಯಿ ‘ನೋ ಕಮೆಂಟ್ಸ್’

ಮೊಟ್ಟೆ ಡೀಲ್ ಕೇಸ್; ಶಶಿಕಲಾ ಜೊಲ್ಲೆ ವಿರುದ್ಧ ಕ್ರಮದ ಬಗ್ಗೆ ಸಿಎಂ ಬೊಮ್ಮಾಯಿ ‘ನೋ ಕಮೆಂಟ್ಸ್’

ನವದೆಹಲಿ: ಸಿಎಂ ಆದ ನಂತರ ಇದೇ ಮೊದಲ ಬಾರಿಗೆ ದೆಹಲಿಗೆ ತೆರಳಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸುದ್ದಿಗೋಷ್ಠಿ ನಡೆಸಿದರು. ಸುದ್ದಿಗೋಷ್ಠಿಯಲ್ಲಿ ಕೇಂದ್ರದ ನಾಯಕರ ಜೊತೆ ತಾವು ನಡೆಸಿದ ಚರ್ಚೆಯ ವಿಷಯಗಳನ್ನ ಉಲ್ಲೇಖಿಸಿದ ಬೊಮ್ಮಾಯಿಯವರು ಕೇಂದ್ರ ನಾಯಕರಿಂದ ಸಹಕಾರದ ಭರವಸೆ ಸಿಕ್ಕಿದೆ ಎಂದರು.

ಇನ್ನು ಇದೇ ವೇಳೆ ಶಶಿಕಲಾ ಜೊಲ್ಲೆ ಮೊಟ್ಟೆ ಕೇಸ್​ಗೆ ಸಂಬಂಧಿಸಿದಂತೆ ಪತ್ರಕರ್ತರು ಕೆಲವು ಪ್ರಶ್ನೆಗಳನ್ನು ಕೇಳಿದರು. ಮುಂದಿನ ಸಚಿವ ಸಂಪುಟದಲ್ಲಿ ಶಶಿಕಲಾ ಜೊಲ್ಲೆಯವರಿಗೆ ಸಚಿವ ಸ್ಥಾನ ನೀಡಲಿದ್ದೀರಾ ಎಂದು ಕೇಳಿದ್ದಕ್ಕೆ ಈ ವಿಚಾರವಾಗಿ ನಾನು ಯಾವ ನಿರ್ಧಾರವನ್ನೂ ಮಾಡಿಲ್ಲ ಎಂದರು. ಪತ್ರಕರ್ತರು ಜೊಲ್ಲೆಯವರ ವಿರುದ್ಧ ಕ್ರಮ ತೆಗೆದುಕೊಳ್ತೀರಾ ಎಂದು ಪ್ರಶ್ನಿಸಿದಾಗ ಈ ವಿಷಯವಾಗಿ ನನ್ನದು ನೋ ಕಮೆಂಟ್ಸ್ ಎಂದು ಹೇಳಿದ್ರು.

The post ಮೊಟ್ಟೆ ಡೀಲ್ ಕೇಸ್; ಶಶಿಕಲಾ ಜೊಲ್ಲೆ ವಿರುದ್ಧ ಕ್ರಮದ ಬಗ್ಗೆ ಸಿಎಂ ಬೊಮ್ಮಾಯಿ ‘ನೋ ಕಮೆಂಟ್ಸ್’ appeared first on News First Kannada.

Source: newsfirstlive.com

Source link