ಮನೆ ಹೊರಗಡೆ ಬೈಕ್​ ನಿಲ್ಲಿಸ್ತಿದ್ದೀರಾ..? ಹುಷಾರ್​.. ಕ್ಷಣ ಮಾತ್ರದಲ್ಲಿ ಎಗರಿಸ್ತಾರೆ ಖದೀಮರು

ಮನೆ ಹೊರಗಡೆ ಬೈಕ್​ ನಿಲ್ಲಿಸ್ತಿದ್ದೀರಾ..? ಹುಷಾರ್​.. ಕ್ಷಣ ಮಾತ್ರದಲ್ಲಿ ಎಗರಿಸ್ತಾರೆ ಖದೀಮರು

ಬೆಂಗಳೂರು: ನೀವು ನಿಮ್ಮ ಬೈಕ್​ನ್ನ ಮನೆ ಹೊರಗಡೆ ನಿಲ್ಲಿಸ್ತಿದ್ದೀರಾ..? ಹಾಗಾದ್ರೆ ಹುಷಾರ್​ ಆಗಿರಿ. ಮನೆ ಮುಂದೆ ನಿಲ್ಲಿಸಿದ ಬೈಕ್​ಗಳನ್ನು ಕ್ಷಣಮಾತ್ರದಲ್ಲಿ ದರೋಡೆ ಮಾಡುವ ಚಾಲಾಕಿ ಗ್ಯಾಂಗ್​ ಒಂದು ಈಗ ನಗರದಲ್ಲಿ ಸಕ್ರಿಯವಾಗಿದೆ.

ವೀರಣ್ಣ ಪಾಳ್ಯದಲ್ಲಿ ವ್ಯಕ್ತಿಯೊಬ್ಬರು ತಮ್ಮ ಬೈಕ್​ನ್ನು ಮನೆಯ ಹೊರಗೆ ನಿಲ್ಲಿಸಿ ತಮ್ಮ ಅಪಾರ್ಟ್​ಮೆಂಟ್​ಗೆ ಹೋಗಿ ಬರೋದ್ರೊಳಗಾಗಿ ನಿಲ್ಲಿಸಿದ ಬೈಕ್​ ನಾಪತ್ತೆಯಾಗಿದೆ. ಒಳಗಡೆ ಹೋಗಿ ಬರೋದ್ರೊಳಗಾಗಿ ಬೈಕ್​ ಕಾಣದ್ದನ್ನ ಕಂಡು ಮಾಲೀಕ ಅರೆ ಕ್ಷಣ ಗಲಿಬಿಲಿಗೊಂಡಿದ್ದಾನೆ.

ಇದನ್ನೂ ಓದಿ:  ನೀವು I-Phone, I-Pad ಬಳಕೆದಾರರಾ? ಹಾಗಿದ್ರೆ ತಕ್ಷಣ ಹೀಗೆ ಮಾಡಿ.. ಇಲ್ಲದಿದ್ದರೆ ನಿಮಗೆ ಬಿಗ್ ಶಾಕ್..!

ತದನಂತರ ಸಿಸಿಟಿವಿ ಯ ದೃಶ್ಯಗಳನ್ನು ನೋಡಿದಾಗ ಕ್ಷಣಮಾತ್ರದಲ್ಲಿ ಖತರ್ನಾಕ್​ ಖದೀಮರು ಬೈಕ್​ ಎಗರಿಸಿದ ಪರಿಗೆ ಅಚ್ಚರಿಗೊಂಡಿದ್ದಾನೆ. ಸಿಸಿಟಿವಿ ದೃಶ್ಯಾವಳಿ ಸಮೇತ ಗೋವಿಂದಪುರ ಪೊಲೀಸ್ ಠಾಣೆಗೆ ದೌಡಾಯಿಸಿದ ಬೈಕ್​ ಮಾಲೀಕ ದೂರು ನೀಡಿದ್ದಾನೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕಳ್ಳರಿಗೆ ಬಲೆ ಬೀಸಿದ್ದಾರೆ.

ಇದನ್ನೂ ಓದಿ:  ಹೊರ ರಾಜ್ಯದಿಂದ ಬಂದು ಕರ್ನಾಟಕದಲ್ಲಿ ಹೈಫೈ ಬೈಕ್ಸ್​ ಕದೀತಿದ್ದ ಖತರ್ನಾಕ್​​ ಕಳ್ಳ ಅಂದರ್​​​…

The post ಮನೆ ಹೊರಗಡೆ ಬೈಕ್​ ನಿಲ್ಲಿಸ್ತಿದ್ದೀರಾ..? ಹುಷಾರ್​.. ಕ್ಷಣ ಮಾತ್ರದಲ್ಲಿ ಎಗರಿಸ್ತಾರೆ ಖದೀಮರು appeared first on News First Kannada.

Source: newsfirstlive.com

Source link