ಟೋಕಿಯೋ ಒಲಿಂಪಿಕ್ಸ್‌: ಕಾಂಡೋಮ್​​​ ಬಳಸಿ ಚಿನ್ನ ಗೆದ್ದ ಆಸ್ಟ್ರೇಲಿಯಾ ಕ್ರೀಡಾಪಟು ಜೆಸ್ಸಿಕಾ

ಟೋಕಿಯೋ ಒಲಿಂಪಿಕ್ಸ್‌: ಕಾಂಡೋಮ್​​​ ಬಳಸಿ ಚಿನ್ನ ಗೆದ್ದ ಆಸ್ಟ್ರೇಲಿಯಾ ಕ್ರೀಡಾಪಟು ಜೆಸ್ಸಿಕಾ

ಟೋಕಿಯೋ ಒಲಿಂಪಿಕ್ಸ್​​ ಕ್ರೀಡಾಕೂಟದಲ್ಲಿ ಆಸ್ಟ್ರೇಲಿಯಾದ ಕೆನೋಯ್ ಮತ್ತು ಕಯಾಕ್ ಕ್ರೀಡಾಪಟು ಜೆಸ್ಸಿಕಾ ಫಾಕ್ಸ್‌ ಕಾಂಡೋಮ್ ಬಳಕೆ ಮಾಡಿ ಚಿನ್ನದ ಪದಕ ಗೆಲ್ಲುವ ಮೂಲಕ ಭಾರೀ ಸುದ್ದಿಯಲ್ಲಿದ್ದಾರೆ.

ಮೊದಲಿಗೆ ಮಹಿಳೆಯರ ಸಿ1 ಕೆನೋಯ್ ಸ್ಲಾಲೊಮ್‌ ಸ್ಪರ್ಧೆಯಲ್ಲಿ ಜೆಸ್ಸಿಕಾ ಫಾಕ್ಸ್‌ ಚಿನ್ನ ಗೆದ್ದರು. ಬಳಿಕ ಕೆನೋಯ್‌ ಸ್ಲಾಲೊಮ್ ಕೆ1 ಫೈನಲ್‌ನಲ್ಲಿ ಕಂಚಿನ ಪದಕ ತಮ್ಮದಾಗಿಸಿಕೊಳ್ಳುವ ಮೂಲಕ ದಾಖಲೆ ಸೃಷ್ಟಿಸಿದ್ದಾರೆ.

ಇನ್ನು, ಕೆನೋಯ್ ಸ್ಲಾಲೊಮ್‌ ಸ್ಪರ್ಧೆ ವೇಳೆ ಹಾನಿಗೊಂಡ ಕಯಾಕ್‌ ಸಾಧನವನ್ನು ಸರಿಪಡಿಸಲು ಜೆಸ್ಸಿಕಾ ಕಾಂಡೋಮ್‌ ಬಳಕೆ ಮಾಡಿದ್ದರು. ಈ ಸಾಧನದ ಮೂಲಕವೇ ಚಿನ್ನ ಗೆದ್ದರು.

ಜೆಸ್ಸಿಕಾ ಫಾಕ್ಸ್‌ ಹಾನಿಗೊಂಡಿದ್ದ ಕಯಾಕ್‌ ಸಾಧನವನ್ನು ಸರಿಪಡಿಸಲು ಕಾಂಡೋಮ್‌ ತೊಡಿಸಿದ ವಿಡಿಯೋ ಈಗ ಸೋಷಿಯಲ್‌ ಮೀಡಿಯಾಗಳಲ್ಲಿ ಭಾರೀ ವೈರಲ್​​ ಆಗಿದೆ.

ಈ ಸಂಬಂಧ ಟ್ವೀಟ್​ ಮಾಡಿರುವ ಜೆಸಿಕಾ ಫಾಕ್ಸ್‌, “ಕಾಂಡೋಮ್‌ ಬಳಸಿ ಕಯಾಕ್‌ ರಿಪೇರಿ ಮಾಡಬಹುದು ಎಂದು ಗೊತ್ತಿರಲಿಲ್ಲ ಎಂದು ಬರೆದುಕೊಂಡಿದ್ದಾರೆ.

The post ಟೋಕಿಯೋ ಒಲಿಂಪಿಕ್ಸ್‌: ಕಾಂಡೋಮ್​​​ ಬಳಸಿ ಚಿನ್ನ ಗೆದ್ದ ಆಸ್ಟ್ರೇಲಿಯಾ ಕ್ರೀಡಾಪಟು ಜೆಸ್ಸಿಕಾ appeared first on News First Kannada.

Source: newsfirstlive.com

Source link