CD ಹೆಸ್ರಲ್ಲಿ ಕೆಲವರು ನನ್ನ ಬ್ಲಾಕ್​ಮೇಲ್ ಮಾಡ್ತಿದ್ದಾರೆ- ರೇಣುಕಾಚಾರ್ಯ

CD ಹೆಸ್ರಲ್ಲಿ ಕೆಲವರು ನನ್ನ ಬ್ಲಾಕ್​ಮೇಲ್ ಮಾಡ್ತಿದ್ದಾರೆ- ರೇಣುಕಾಚಾರ್ಯ

ಬೆಂಗಳೂರು: ರಾಜ್ಯದಲ್ಲಿ ಎಲ್ಲೋ ಒಂದು ಕಡೆ ಸಿಡಿ ರಾಜಕಾರಣ ಪ್ರಾರಂಭವಾಗಿದೆಯಾ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಹೊನ್ನಾಳಿ ಶಾಸಕ ರೇಣುಕಾಚಾರ್ಯ.. ಕೆಲವರು ಏನು ಬೇಕಾದ್ರೂ ಗ್ರಾಫಿಕ್ಸ್ ಮಾಡಬಹುದು.. ಯಾರದ್ದೋ ದೇಹ, ಮುಖ, ಕಾಲು ಕೈ ಎಲ್ಲಾ ಎಡಿಟ್ ಮಾಡಬಹುದು.. ಇಂಥದ್ದಕ್ಕೆ ಮಾನ್ಯತೆ ಇಲ್ಲ ಎಂದಿದ್ದಾರೆ.

ನಾನು ಯಾವುದೇ ಅಪರಾಧ ಮಾಡಿಲ್ಲ.. ನನ್ನನ್ನ ಬ್ಲಾಕ್ ಮೇಲ್ ಮಾಡಲು ಕೆಲವರು ಮುಂದಾಗ್ತಾರೆ. ನಾನು ಜಗ್ಗಲ್ಲ.. ನಾನು ಯಾವುದೇ ತಪ್ಪು ಮಾಡಿಲ್ಲ.. ಆದ್ರೆ ನನ್ನ ವಿರುದ್ಧ ಕೆಲವರು ಷಡ್ಯಂತ್ರ ಮಾಡ್ತಿದ್ದಾರೆ.. ಬ್ಲಾಕ್​ಮೇಲ್ ತಂತ್ರಗಾರಿಕೆಗೆ ನಾನು ಒಳಗಾಗಲ್ಲ.. ಈ ಷಡ್ಯಂತ್ರ ಮಾಡುವವರು ತಾವೇ ಆತ್ಮಾವಲೋಕನ ಮಾಡಿಕೊಳ್ಳಲಿ. ಮನುಷ್ಯ ಎಡವೋದು ಸಹಜ.. ನನಗೆ ತಪ್ಪಿನ ಅರಿವಾಗಿದೆ. ತಪ್ಪು ಮಾಡಿದ್ರೆ ಕೇಳಬೇಕಿರೋದು ನನ್ನ ಮನೆಯ ಸದಸ್ಯರು ಎಂದು ಹೇಳಿಕೆ ನೀಡಿದ್ದಾರೆ.

The post CD ಹೆಸ್ರಲ್ಲಿ ಕೆಲವರು ನನ್ನ ಬ್ಲಾಕ್​ಮೇಲ್ ಮಾಡ್ತಿದ್ದಾರೆ- ರೇಣುಕಾಚಾರ್ಯ appeared first on News First Kannada.

Source: newsfirstlive.com

Source link