ಆಟವಾಡುತ್ತಿದ್ದ ಎರಡು ವರ್ಷದ ಮಗು ನೀರಿನ ಸಂಪ್​ನಲ್ಲಿ ಬಿದ್ದು ದಾರುಣ ಸಾವು

ಆಟವಾಡುತ್ತಿದ್ದ ಎರಡು ವರ್ಷದ ಮಗು ನೀರಿನ ಸಂಪ್​ನಲ್ಲಿ ಬಿದ್ದು ದಾರುಣ ಸಾವು

ಹಾವೇರಿ: ಆಟವಾಡುತ್ತಾ ಇದ್ದ ಎರಡು ವರ್ಷದ ಗಂಡು ಮಗು ನೀರಿನ ಸಂಪ್​ನಲ್ಲಿ ಬಿದ್ದು ಮಗು ಸಾವನ್ನಪ್ಪಿರೋ ಘಟನೆ ಜಿಲ್ಲೆಯ ಹಾನಗಲ್ ಪಟ್ಟಣದ ನವನಗರದಲ್ಲಿ ನಡೆದಿದೆ.

ಚರಣ್ ಎಂಬ ಎರಡು ವರ್ಷದ ಮಗು ನೀರಿನ ಸಂಪಿನಲ್ಲಿ ಬಿದ್ದು ಸಾವನ್ನಪ್ಪಿದೆ. ದುರಗಪ್ಪ ವಿಭೂತಿ ಎಂಬುವ ದಂಪತಿಗೆ ಶಾಶ್ವತ ಸೂರು ಇಲ್ಲದಿರುವುದೇ ಈ ಅವಘಡಕ್ಕೆ ಕಾರಣ ಎನ್ನಲಾಗಿದೆ. ಕಳೆದ ಹಲವು ವರ್ಷಗಳಿಂದ ಮನೆಗಳಿಲ್ಲದೇ ಶೆಡ್​ಗಳಲ್ಲಿ ವಾಸಿಸುತ್ತಿದ್ದರು. ಮನೆ ನಿರ್ಮಿಸಿ ಕೊಡುವಂತೆ ಹಲವು ಬಾರಿ ಜನ ಪ್ರತಿನಿಧಿಗಳಿಗೆ ಮನವಿ ಮಾಡಿದರೂ ಅಧಿಕಾರಿಗಳು ಕ್ಯಾರೆ ಎನ್ನಲಿಲ್ಲವಂತೆ.

The post ಆಟವಾಡುತ್ತಿದ್ದ ಎರಡು ವರ್ಷದ ಮಗು ನೀರಿನ ಸಂಪ್​ನಲ್ಲಿ ಬಿದ್ದು ದಾರುಣ ಸಾವು appeared first on News First Kannada.

Source: newsfirstlive.com

Source link