ಮತ್ತೆ ಕೊರೊನಾ ಭೀತಿ; ಬೆಂಗಳೂರಿನ ಈ 10 ವಾರ್ಡ್​ಗಳು ಈಗ ಡೇಂಜರ್ ಝೋನ್

ಮತ್ತೆ ಕೊರೊನಾ ಭೀತಿ; ಬೆಂಗಳೂರಿನ ಈ 10 ವಾರ್ಡ್​ಗಳು ಈಗ ಡೇಂಜರ್ ಝೋನ್

ಬೆಂಗಳೂರು: ಕೊರೊನಾ ಅಟ್ಟಹಾಸ ಕಡಿಮೆಯಾಯ್ತು ಅನ್ಕೊಳ್ತಿರುವಾಗ್ಲೇ, ನಿನ್ನೆ ರಾಜ್ಯದಲ್ಲಿ 2,052 ಕೇಸ್​ಗಳು ದಾಖಲಾದ್ರೆ, ಬೆಂಗಳೂರಲ್ಲಿ 506 ಜನರಲ್ಲಿ ಸೋಂಕು ದೃಢಪಟ್ಟಿದೆ. ಸೋಂಕಿನ ಪ್ರಮಾಣದಲ್ಲಿ ದಿಢೀರ್ ಅಂತ ಏರಿಕೆಯಾಗಿದ್ದು, ಇದೀಗ ನಗರದ 10 ವಾರ್ಡ್​ಗಳನ್ನ ಡೇಂಜರ್ ಝೋನ್ ಅಂತಾ ಬಿಬಿಎಂಪಿ ಗುರುತಿಸಿದೆ. ಹಾಗಿದ್ರೆ, ಆ ಡೇಂಜರ್ ವಾರ್ಡ್​ಗಳು ಯಾವುವು? ಅಲ್ಲಿ ದಾಖಲಾದ ಪಾಸಿಟಿವ್​​​ ಕೇಸ್​ಗ​​ಳೆಷ್ಟು..?

ಹೆಮ್ಮಾರಿ ಕೊರೊನಾ ಸೋಂಕು ಇಳಿಕೆಯಾಯ್ತು ಅಂತಾ ಜನ ಕೊಂಚ ನಿಟ್ಟುಸಿರು ಬಿಡ್ತಿರುವಾಗ್ಲೇ, ಮತ್ತೆ ಪಾಸಿಟಿವ್​ ಕೇಸ್​ಗಳು ಏರಿಕೆಯಾಗ್ತಿವೆ. 198 ವಾರ್ಡ್​ಗಳ ಪೈಕಿ ಈ 10 ವಾರ್ಡ್​ಗಳು ಡೇಂಜರ್ ಝೋನ್​ ಪರಿವರ್ತನೆಯಾಗಿದ್ದು, ಬಿಬಿಎಂಪಿ ರೆಡ್​ ಝೋನ್​​ ಅಂತಾ ಗುರುತಿಸಿದೆ. ಅನ್​​ಲಾಕ್ ಆಗ್ತಿದ್ದಂತೆ ಸಿಲಿಕಾನ್ ಮಂದಿ, ಕೋವಿಡ್​ ಮಾರ್ಗಸೂಚಿ ಮರೆತು ವರ್ತಿಸ್ತಿರೋದೇ ಸೋಂಕು ಹೆಚ್ಚಳಕ್ಕೆ ಕಾರಣ ಎನ್ನಲಾಗ್ತಿದೆ.

ಇನ್ನ ಡೇಂಜರ್​ ಝೋನ್​​ನಲ್ಲಿರೋ 10 ವಾರ್ಡ್​ಗಳು ಯಾವುವು? ಮತ್ತು 10 ದಿನಗಳಲ್ಲಿ ದಾಖಲಾದ ಪಾಸಿಟಿವ್​ ಕೇಸ್​ಗಳೆಷ್ಟು ಅನ್ನೋದನ್ನ ನೋಡೋದಾದ್ರೆ.

ಯಾವ ವಾರ್ಡ್​​ನಲ್ಲಿ ಎಷ್ಟು ಕೇಸ್..?​

 1. ಬೇಗೂರು- 112
 2. ಹಗದೂರು- 80
 3. ಹೊರಮಾವು- 69
 4. ವರ್ತೂರು- 67
 5. ಹೂಡಿ- 63
 6. ಬೆಳ್ಳಂದೂರು- 62
 7. ರಾಜರಾಜೇಶ್ವರಿ ನಗರ- 56
 8. ಸಂಜಯ್ ನಗರ- 55
 9. ಕಾಡುಗೋಡಿ- 54
 10. ಉತ್ತರಹಳ್ಳಿ- 53

ಇನ್ನ, 198 ವಾರ್ಡ್​ಗಳ ಪೈಕಿ 10 ವಾರ್ಡ್​ಗಳಲ್ಲಿ ಕಳೆದ 10 ದಿನಗಳಲ್ಲಿ, 671ಕ್ಕೂ ಹೆಚ್ಚು ಪಾಸಿಟಿವ್​ ಕೇಸ್​ಗಳು ಕಾಣಿಸಿಕೊಂಡಿವೆ. ಈ 10 ವಾರ್ಡ್​ಗಳಲ್ಲಿ ಸೋಂಕು ಹೆಚ್ಚಳಕ್ಕೆ ಕಾರಣಗಳೇನು ಅನ್ನೋದನ್ನ ನೋಡೋದಾದ್ರೆ..

ಸೋಂಕು ಹೆಚ್ಚಳಕ್ಕೆ ಕಾರಣಗಳು?

 1. ಅನ್​​ಲಾಕ್ ಆಗ್ತಿದ್ದಂತೆ ಮಾಸ್ಕ್, ಸಾಮಾಜಿಕ ಅಂತರ ಮರೆತ ಜನ
 2. ಮುಂಜಾಗ್ರತಾ ಕ್ರಮಗಳು, ಜವಾಬ್ದಾರಿ ಮರೆತು ಬೇಕಾಬಿಟ್ಟಿ ಓಡಾಟ
 3. ಹೊರ ರಾಜ್ಯ & ಅಂತರ್ ಜಿಲ್ಲೆಯವರು ನಗರದಲ್ಲಿ ಹೆಚ್ಚಾಗಿ ವಾಸ್ತವ್ಯ
 4. ಐಟಿ ಬಿಟಿ, ಎಂಎನ್​ಸಿ ಕಂಪನಿಗಳು ನಗರದಲ್ಲಿ ಹೆಚ್ಚಾಗಿರೋದು
 5. ನಗರದ ಹೊರಭಾಗದ ವಾರ್ಡ್​ಗಳು ಎಂಬ ಕಾರಣಕ್ಕೆ ಕಡೆಗಣನೆ
 6. ಸೋಂಕು ಹೆಚ್ಚಾಗಿರೋ ಬಹುತೇಕ ವಾರ್ಡ್​ಗಳು ನಗರದ ಗಡಿ‌ಭಾಗದಲ್ಲಿವೆ
 7. ನಗರದ ಮಧ್ಯೆ ಭಾಗದಲ್ಲಿರೋ ವಾರ್ಡ್​ಗೆ ಸಿಕ್ಕ ಮನ್ನಣೆ ಈ ವಾರ್ಡ್​ಗಳಿಗಿಲ್ಲ
 8. ಈ ವಾರ್ಡ್​ಗಳಲ್ಲಿ ಅಪಾರ್ಟ್‌ಮೆಂಟ್​ಗಳ‌ ಸಂಖ್ಯೆ ಹೆಚ್ಚಾಗಿರೋದು
 9. ಅಪಾರ್ಟ್‌ಮೆಂಟ್​ಗಳಲ್ಲಿ ಮತ್ತೆ ಸೋಂಕು ಹೆಚ್ಚಳವಾಗ್ತಿರೋದು

ಒಟ್ನಲ್ಲಿ, ಅಕ್ಕಪಕ್ಕದ ರಾಜ್ಯಗಳಲ್ಲಿ ಸೋಂಕು ಹೆಚ್ಚಳದ ಬೆನ್ನಲ್ಲೇ, ಇದೀಗ ರಾಜ್ಯ ರಾಜಧಾನಿ ಬೆಂಗಳೂರಿನಲ್ಲೂ ಸೋಂಕು ಹೆಚ್ಚಾಗೋ ಮುನ್ಸೂಚನೆ ಸಿಕ್ಕಿದೆ. ಈಗಾಗ್ಲೇ, ಕೋವಿಡ್​ ಎರಡನೇ ಅಲೆಯಂತೆ, ವಾರ್ಡ್​ಗಳಲ್ಲಿ ಕ್ಲಸ್ಟರ್​​ ಕೇಸ್​ಗಳು ಕಾಣಿಸಿಕೊಳ್ಳಲು ಆರಂಭವಾಗಿವೆ. ಇನ್ನಾದ್ರೂ, ಜನತೆ ಬೇಕಾಬಿಟ್ಟಿಯಾಗಿ ವರ್ತಿಸದೆ, ಕೋವಿಡ್​ ಮಾರ್ಗಸೂಚಿಗಳನ್ನ ಅನುಸರಿಸಬೇಕಿದೆ

The post ಮತ್ತೆ ಕೊರೊನಾ ಭೀತಿ; ಬೆಂಗಳೂರಿನ ಈ 10 ವಾರ್ಡ್​ಗಳು ಈಗ ಡೇಂಜರ್ ಝೋನ್ appeared first on News First Kannada.

Source: newsfirstlive.com

Source link