ಮಾನವೀಯತೆ ಮೆರೆದ ಸಂಚಾರಿ ಪೊಲೀಸ್​; ಪ್ರತಿಭಟನೆ ವೇಳೆ ರೋಗಿಗೆ ನೀರು ಕೊಟ್ಟು ನೆರವು

ಮಾನವೀಯತೆ ಮೆರೆದ ಸಂಚಾರಿ ಪೊಲೀಸ್​; ಪ್ರತಿಭಟನೆ ವೇಳೆ ರೋಗಿಗೆ ನೀರು ಕೊಟ್ಟು ನೆರವು

ಕೊಡಗು: ಜಿಲ್ಲೆಯ ಮಡಿಕೇರಿ ಸಮೀಪದ ಬೋಯಿಕೇರಿಯಲ್ಲಿ ಜುಲೈ 25ರಂದು ಯೋಧ ಮತ್ತು ಅವರ ಕುಟುಂಬಸ್ಥರ ಮೇಲೆ ಕೆಲ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದರು. ಯೋಧನ ಮೇಲಿನ ಹಲ್ಲೆ ಖಂಡಿಸಿ ನೂರಾರು ಮಾಜಿ ಸೈನಿಕರು ಮತ್ತು ವಿವಿಧ ಸಂಘಟನೆಗಳ ಸದಸ್ಯರು ಶುಕ್ರವಾರ ಮಡಿಕೇರಿಯ ತಿಮ್ಮಯ್ಯ ಸರ್ಕಲ್ನಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದರು.

ಸತತ ನಾಲ್ಕು ಗಂಟೆಗಳ ಕಾಲ ನಡೆದ ಪ್ರತಿಭಟನೆ ವೇಳೆ ಪ್ರತಿಭಟನಾಕಾರರು ತಿಮ್ಮಯ್ಯ ಸರ್ಕಲ್ ಬಳಿ ರಸ್ತೆ ತಡೆ ನಡೆಸಿದರು. ಮುಖ್ಯ ರಸ್ತೆ ಬಂದ್ ಆಗಿದ್ದರಿಂದ ಪರ್ಯಾಯ ಮಾರ್ಗವಿಲ್ಲದೆ ಮೈಸೂರು, ಮಂಗಳೂರು, ಮೂರ್ನಾಡು ಕಡೆಗೆ ತೆರಳಬೇಕಿದ್ದ ಹಲವು ವಾಹನ ಸವಾರರು ಗಂಟೆಗಟ್ಟಲೆ ರಸ್ತೆಯಲ್ಲಿ ತಮ್ಮ ವಾಹನಗಳಲ್ಲೇ ಕುಳಿತು ಪರದಾಡುವಂತಾಯಿತು. ಈ ವೇಳೆ ಅನಾರೋಗ್ಯ ಪೀಡಿತ ವ್ಯಕ್ತಿಯೊಬ್ಬ ತನ್ನ ಬೈಕಿನಲ್ಲೇ ಕುಳಿತು ನರಳುತ್ತಿದ್ದರು. ಇದನ್ನ ಕಂಡು ಎಚ್ಚರಗೊಂಡ ಸಂಚಾರಿ ಪೊಲೀಸರು ಕೂಡಲೇ ಆ ವ್ಯಕ್ತಿಯ ನೆರವಿಗೆ ಧಾವಿಸಿದ್ದಾರೆ. ಸುಸ್ತಾಗಿದ್ದ ವ್ಯಕ್ತಿಗೆ ಕುಡಿಯಲು ನೀರು ಕೊಟ್ಟು ಮಾನವೀಯತೆ ಮೆರೆದಿದ್ದಾರೆ. ಇಷ್ಟೇ ಅಲ್ಲದೇ ಅಲ್ಲಿದ್ದ ಬೇರೆ ವಾಹನ ಸವಾರರಿಗೆ ದಣಿವಾರಿಸಿಕೊಳ್ಳಲು ನೀರು ಮತ್ತು ಚಾಕಲೇಟ್ ನೀಡಿ ಪೊಲೀಸರು ಜನರ ಮೆಚ್ಚುಗೆಗೆ ಪಾತ್ರರಾದರು.

The post ಮಾನವೀಯತೆ ಮೆರೆದ ಸಂಚಾರಿ ಪೊಲೀಸ್​; ಪ್ರತಿಭಟನೆ ವೇಳೆ ರೋಗಿಗೆ ನೀರು ಕೊಟ್ಟು ನೆರವು appeared first on News First Kannada.

Source: newsfirstlive.com

Source link