ಆಟೋದಲ್ಲಿ ಗಾಂಜಾ ಸಾಗಾಟ; ಇಬ್ಬರು ಯುವಕರು ಅರೆಸ್ಟ್

ಆಟೋದಲ್ಲಿ ಗಾಂಜಾ ಸಾಗಾಟ; ಇಬ್ಬರು ಯುವಕರು ಅರೆಸ್ಟ್

ಚಿಕ್ಕಬಳ್ಳಾಪುರ: ಆಟೋ ಮೂಲಕ ಬೆಂಗಳೂರಿಗೆ ಗಾಂಜಾ ಸಾಗಾಟ ಮಾಡ್ತಿದ್ದ ಇಬ್ಬರು ಯುವಕರನ್ನು ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

blank

ಅಂದಹಾಗೆ ಬೆಂಗಳೂರಿನ ಡೇವಿಡ್ ಹಾಗೂ ಯೇಸುದಾಸ್ ಬಂಧಿತರು. ಬಂಧಿತ ಇಬ್ಬರು ಯುವಕರು ಶಿಡ್ಲಘಟ್ಟ ತಾಲೂಕಿನ ಮೇಲೂರು ಗ್ರಾಮದ ನಾರಾಯಣಸ್ವಾಮಿ ಎಂಬುವವರಿಂದ‌ ಗಾಂಜಾ ಖರೀದಿಸಿದ್ರು ಎನ್ನಲಾಗಿದೆ. ಸದ್ಯ ಬಂಧಿತರಿಂದ 550 ಗ್ರಾಂ ಗಾಂಜಾವನ್ನ ವಶಪಡಿಸಿಕೊಳ್ಳಲಾಗಿದೆ. ಬಂಧಿತ ಆರೋಪಿಗಳ ವಿಚಾರಣೆಯನ್ನ ನಡೆಸಿದ್ದು ಗಾಂಜಾ ಸರಬರಾಜುದಾರರ ಹೆಚ್ಚಿನ ಮಾಹಿತಿ‌ ಪತ್ತೆ ಹಚ್ಚಲಾಗುತ್ತಿದೆ. ಚಿಕ್ಕಬಳ್ಳಾಪುರ ಉಪವಿಭಾಗದ ಡಿವೈಎಸ್ಪಿ ವಾಸುದೇವ್, ವೃತ್ತ ನೀರೀಕ್ಷಕ ಪ್ರಶಾಂತ್, ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ಪಿಎಸ್ಐ ಮಂಜುನಾಥ್ ಸೇರಿ ಇತರೆ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ರು.

The post ಆಟೋದಲ್ಲಿ ಗಾಂಜಾ ಸಾಗಾಟ; ಇಬ್ಬರು ಯುವಕರು ಅರೆಸ್ಟ್ appeared first on News First Kannada.

Source: newsfirstlive.com

Source link