ಹೆಚ್ಚಾಯ್ತು ರೌಡಿಶೀಟರ್​​ಗಳ ಹಾವಳಿ; ಹಾಡಹಗಲೇ ನಡೆಯುವ ಕೊಲೆಗಳಿಗೆ ಬೆಚ್ಚಿಬಿದ್ದ ಬೆಂಗಳೂರು

ಹೆಚ್ಚಾಯ್ತು ರೌಡಿಶೀಟರ್​​ಗಳ ಹಾವಳಿ; ಹಾಡಹಗಲೇ ನಡೆಯುವ ಕೊಲೆಗಳಿಗೆ ಬೆಚ್ಚಿಬಿದ್ದ ಬೆಂಗಳೂರು

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಹಾಡಹಗಲೇ ಕೊಲೆಗಳು ನಡೆಯುತ್ತಿದ್ದು ಬೆಂಗಳೂರು ಬೆಚ್ಚಿಬಿದ್ದಿದೆ. ಒಂದೆಡೆ ಪೊಲೀಸರು ದಿಢೀರ್ ರೌಡಿಶೀಟರ್​​ಗಳ ಮನೆ ಮೇಲೆ ದಾಳಿ ನಡೆಸಿ, ರೌಡಿಗಳ ಪರೇಡ್ ನಡೆಸಿದ್ರೂ ಕ್ರೈಮ್​ಗಳು ಮಾತ್ರ ಕಡಿಮೆಯಾದಂತೆ ಕಾಣುತ್ತಿಲ್ಲ. ಅದ್ರಲ್ಲೂ ಲಾಕ್​ಡೌನ್ ಸಡಿಲಿಕೆಯಾಗಿ ಅನ್​ಲಾಕ್​ ಜಾರಿಯಾದ ಮೇಲೆ ಹಾಡಹಗಲೇ ಕೊಲೆಗಳು ನಡೆಯುತ್ತಿವೆ.

ಇತ್ತೀಚೆಗೆ ನಡೆದ ಕ್ರೈಂಗಳು..
1. ಜು. 19- ಯೂನಿಬ್ಯಾಂಕ್ ಒಳಗೆ ರೌಡಿಶೀಟರ್ ಬಬ್ಲಿ ಬರ್ಬರ ಹತ್ಯೆ.
2..ಜು. 2- ರಂದು ಹಾಡಹಗಲೇ ಬನಶಂಕರಿ ದೇವಾಲಯದ ಮೆಟ್ರೋ ಪಿಲ್ಲರ್ ಬಳಿ ಮಾರಕಾಸ್ತ್ರಗಳಿಂದ ಫೈನಾನ್ಶಿಯರ್ ಮದನ್ ಹತ್ಯೆ..
3. ಜೂ. 24- ಛಲವಾದಿಪಾಳ್ಯದ ಮಾಜಿ ಕಾರ್ಪೋರೇಟರ್ ರೇಖಾ ಕದಿರೇಶ್ ಭೀಕರ್ ಕೊಲೆ..
4. ಜೂ. 21- ಜೈಲಿನಲ್ಲಿರುವ ರೌಡಿಯ ಪತ್ನಿ ಜೊತೆ ಅಕ್ರಮ ಸಂಬಂಧ ಕಾರಣಕ್ಕೆ ರಶೀದ್ ಮಲಬಾರು ಬಂಟನ ಕತ್ತು ಸೀಳಿ ಹತ್ಯೆ.
5.ಮೇ. 15- ಗಾರೆ ಕೆಲಸವನಿಗೆ ಮದ್ಯಕುಡಿಸಿ ಕತ್ತು ಬಿಗಿದು ಕೊಲೆ ಮಾಡಿ ರೈಲ್ವೆ ಹಳಿ ಮೇಲೆ ಮಲಗಿಸಲು ಯತ್ನ
6.ಮೇ 5- ಪೀಣ್ಯ ಕರಿ ಬೊಮ್ಮನಹಳ್ಳಿಯಲ್ಲಿರುವ ಜಿಲ್ಲಾ ಸಂಖ್ಯಾಧಿಕಾರಿಗಳ ಕಚೇರಿಯಲ್ಲಿ ಪಾಲಕರ ಹತ್ಯೆ..
7. ಏ. 10- ಆಟೋ ಚಾಲಕನ ಪತ್ನಿಗೆ ಚೂರಿಯಿಂದ ಇರಿದು ಹತ್ಯೆ ಮಾಡಿದ ನೆರೆ ಮನೆ ನಿವಾಸಿ.
8. ಏ. 7- ಬೆಂಗಳೂರು ವಿವಿ ಪ್ರಾಧ್ಯಾಪಕನ ತಾಯಿ ಹಾಗೂ ಸ್ನೇಹಿತನ‌ ಕೊಲೆ..
9. ಏ. 7- ಡಿಜೆ ಹಳ್ಳಿಯಲ್ಲಿ ಮಸೀದಿ ಉಸ್ತುವಾರಿ ಜಗಳದಲ್ಲಿ ವ್ಯಕ್ತಿಯೊಬ್ಬನ ಹತ್ಯೆ.
10. ಏ. 23- ಬಂಡೆಪಾಳ್ಯದ ಸೋಮಸಂದ್ರಪಾಳ್ಯದಲ್ಲಿ ಪ್ರೇಯಸಿಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ ಪ್ರಿಯಕರ..
11. ಜುಲೈ 28- ರೌಡಿಶೀಟರ್ ಹರೀಶ್ ನ ಬಾಣಸವಾಡಿ ಸ್ಟೇಷನ್ ಮುಂದೆ ಹತ್ಯೆ ಮಾಡಲಾಗಿತ್ತು.
12. ಜುಲೈ 29- ಜಾಲಹಳ್ಳಿಯ ಮುತ್ಯಾಲನಗರದ ಬಳಿ ಕ್ಯಾಮ್ಸ್ ಪ್ರಧಾನ ಕಾರ್ಯದರ್ಶಿ ಮೇಲಡ ಹಲ್ಲೆಗೆ ಯತ್ನ

The post ಹೆಚ್ಚಾಯ್ತು ರೌಡಿಶೀಟರ್​​ಗಳ ಹಾವಳಿ; ಹಾಡಹಗಲೇ ನಡೆಯುವ ಕೊಲೆಗಳಿಗೆ ಬೆಚ್ಚಿಬಿದ್ದ ಬೆಂಗಳೂರು appeared first on News First Kannada.

Source: newsfirstlive.com

Source link