ಕರ್ನಾಟಕದ ವಿರುದ್ಧ ಸಿಡಿದೆದ್ದ ಅಣ್ಣಾಮಲೈ..!

ಚೆನ್ನೈ: ಮೇಕೆದಾಟು ಡ್ಯಾಂ ವಿಚಾರದಲ್ಲಿ ಬಿಜೆಪಿ ವರ್ಸಸ್ ಬಿಜೆಪಿ ಕದನ ಎನ್ನುವಂತಾಗಿದೆ. ಈಗ ತಮಿಳುನಾಡು ಬಿಜೆಪಿ ಅಧ್ಯಕ್ಷ, ಕರ್ನಾಟಕ ಕೆಡಾರ್‍ನ ಮಾಜಿ ಐಪಿಎಸ್ ಅಧಿಕಾರಿ, ಕರ್ನಾಟಕ ಸಿಂಗಂ ಅಂತಲೇ ಹೆಸರಾಗಿದ್ದ ಅಣ್ಣಾಮಲೈ ಈಗ ಕರ್ನಾಟಕದ ವಿರುದ್ಧವೇ ತಿರುಗಿಬಿದ್ದಿದ್ದಾರೆ.

ಮೇಕೆದಾಟು ಜಲಾಶಯ ನಿರ್ಮಾಣ ಕಾಮಗಾರಿ ವಿರೋಧಿಸಿ ಕರ್ನಾಟಕದ ವಿರುದ್ಧ ಆಗಸ್ಟ್ 5ರಷ್ಟು ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಅಣ್ಣಾಮಲೈ ಘೋಷಿಸಿದ್ದಾರೆ. ಕರ್ನಾಟಕದಲ್ಲಿ ನಮ್ಮದೇ ಸರ್ಕಾರ ಇರಬಹುದು.. ಆದ್ರೆ ನಾವು ತಮಿಳುನಾಡು ಸರ್ಕಾರದ ಪರ ನಿಲ್ಲುತ್ತೇನೆ ಎಂದು ಹೇಳಿದ್ದಾರೆ. ಇದನ್ನೂ ಓದಿ: 21 ಸಚಿವರ ಪಟ್ಟಿಗೆ ಇನ್ನೂ ಹೈಕಮಾಂಡ್‍ನಿಂದ ಸಿಕ್ಕಿಲ್ಲ ಗ್ರೀನ್‍ಸಿಗ್ನಲ್

ಇದು ರಾಜ್ಯ ಬಿಜೆಪಿ ನಾಯಕರಿಗೆ ಇರಿಸುಮುರಿಸು ತಂದಿದೆ. ಆದರೂ ಎಂಎಲ್‍ಸಿ ತೇಜಸ್ವಿನಿ ಗೌಡ ಪರೋಕ್ಷವಾಗಿ ಸಮರ್ಥನೆ ಮಾಡಿಕೊಂಡಿದ್ದಾರೆ. ರಾಷ್ಟ್ರೀಯ ವಿಚಾರ ಬಂದಾಗ ನಾವೆಲ್ಲಾ ಒಂದೇ, ಪ್ರಾದೇಶಿಕ ವಿಚಾರ ಬಂದಾಗ ಮಾತ್ರ ಬೇರೆ ಬೇರೆ ಎಂದಿದ್ದಾರೆ.

The post ಕರ್ನಾಟಕದ ವಿರುದ್ಧ ಸಿಡಿದೆದ್ದ ಅಣ್ಣಾಮಲೈ..! appeared first on Public TV.

Source: publictv.in

Source link