ಮಾಜಿ ಸಂಸದರಿಂದ ಭೂ ಒತ್ತುವರಿ ಆರೋಪ; 10 ಕೋಟಿ ಮೌಲ್ಯದ ಜಾಗ ವಶಕ್ಕೆ ಪಡೆದ ಜಿಲ್ಲಾಡಳಿತ

ಮಾಜಿ ಸಂಸದರಿಂದ ಭೂ ಒತ್ತುವರಿ ಆರೋಪ; 10 ಕೋಟಿ ಮೌಲ್ಯದ ಜಾಗ ವಶಕ್ಕೆ ಪಡೆದ ಜಿಲ್ಲಾಡಳಿತ

ಬೆಂಗಳೂರು: ಮಾಜಿ ಸಂಸದರ ಭೂ ಅತಿಕ್ರಮಣದ ವಿರುದ್ಧ ಬೆಂಗಳೂರು ಜಿಲ್ಲಾಧಿಕಾರಿ ಸಮರ ಸಾರಿದ್ದು ಒತ್ತುವರಿ ಭೂಮಿಯನ್ನ ಜಿಲ್ಲಾಡಳಿತದ ವಶಕ್ಕೆ ಪಡೆದುಕೊಂಡಿದ್ದಾರೆ. ಬೆಂಗಳೂರು ನಗರ ಜಿಲ್ಲಾಧಿಕಾರಿ ಮಂಜುನಾಥ್, ಯಲಹಂಕ ತಹಶಿಲ್ದಾರ್ ನರಸಿಂಹಮೂರ್ತಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ.

ಜೆಡಿಎಸ್ ನ ಮಾಜಿ ಸಂಸದ ಎಲ್.ಆರ್ ಶಿವರಾಮೇಗೌಡ ಮಾಲೀಕತ್ವದ ಶಾಲೆಯ ಭೂಮಿಯನ್ನ ‌ವಶಕ್ಕೆ ಪಡೆಯಲಾಗಿದೆ. ಬೇರೆಯವರಿಗೆ ಅಲಾಟ್ ಮಾಡಲಾಗಿದ್ದ ಜಾಗದಲ್ಲಿ ಶಾಲೆ ನಿರ್ಮಿಸಿದ ಆರೋಪ ಮತ್ತು ಪಕ್ಕದ ಸರ್ಕಾರಿ ಭೂಮಿಯನ್ನೂ ಕಬಳಿಸಿದ್ದರು ಎಂಬ ಆರೋಪ ಕೇಳಿಬಂದಿತ್ತು.

ಯಲಹಂಕ ಹೋಬಳಿ‌ಯಲ್ಲಿ ಇರುವ ಚಿಕ್ಕಬೆಟ್ಟಹಳ್ಳಿ ಸರ್ವೆ ನಂ 14ರ ವ್ಯಾಪ್ತಿಯ 2.20 ಎಕರೆ ಭೂಮಿ ಜಾಗವನ್ನ ಶಾರದಾ ವಿದ್ಯಾಸಂಸ್ಥೆಗೆ ಲೀಸ್​ಗೆ ನೀಡಲಾಗಿತ್ತಂತೆ.. ಜಿಲ್ಲಾಡಳಿತದ ಅನುಮತಿ ಪಡೆಯದೇ ಒಳ ಒಪ್ಪಂದ ಮಾಡಿಕೊಂಡು ಪಕ್ಕದ 2 ಎಕರೆ ಸೇರಿಸಿಕೊಂಡು ಒತ್ತುವರಿ ಮಾಡಿ ಫೆನ್ಸಿಂಗ್ ಹಾಕಿಕೊಂಡಿದ್ದರಂತೆ. ಒಟ್ಟು 10 ಕೋಟಿ ಮೌಲ್ಯದ 2 ಎಕರೆ 20 ಗುಂಟೆ ಒತ್ತುವರಿ ಮಾಡಿಕೊಳ್ಳಲಾಗಿತ್ತು ಎನ್ನಲಾಗಿತ್ತು.. ಸದ್ಯ ಒತ್ತುವರಿ ಭೂಮಿಯನ್ನು ಜಿಲ್ಲಾಡಳಿತ ವಶಕ್ಕೆ ಪಡೆದುಕೊಂಡಿದೆ.

The post ಮಾಜಿ ಸಂಸದರಿಂದ ಭೂ ಒತ್ತುವರಿ ಆರೋಪ; 10 ಕೋಟಿ ಮೌಲ್ಯದ ಜಾಗ ವಶಕ್ಕೆ ಪಡೆದ ಜಿಲ್ಲಾಡಳಿತ appeared first on News First Kannada.

Source: newsfirstlive.com

Source link