ನೀರಿನ ಟ್ಯಾಂಕಿಗೆ ಬಿದ್ದು ಎರಡು ವರ್ಷದ ಬಾಲಕ ಸಾವು

ಹಾವೇರಿ: ಮನೆಯ ಮುಂದೆ ಆಟವಾಡುತ್ತಿದ್ದ ವೇಳೆ ನೀರಿನ ಟ್ಯಾಂಕಿಗೆ ಬಿದ್ದು ಎರಡು ವರ್ಷದ ಬಾಲಕ ಸಾವನ್ನಪ್ಪಿರುವ ಘಟನೆ ಹಾವೇರಿ ಜಿಲ್ಲೆ ಹಾನಗಲ್ ಪಟ್ಟಣದ ನವನಗರ ಬಡಾವಣೆಯಲ್ಲಿ ನಡೆದಿದೆ.

ಮೃತ ಬಾಲಕನ್ನು ಚರಣ್ ವಿಭೂತಿ(2) ಎಂದು ಗುರುತಿಸಲಾಗಿದೆ. ಚರಣ್ ಮತ್ತು ಕೆಲ ಪುಟ್ಟ ಮಕ್ಕಳು ಪ್ರತಿನಿತ್ಯ ಆಟವಾಡುವಂತೆ ಮನೆಯ ಮುಂದೆ ಆಟವಾಡುತ್ತಿದ್ದ ವೇಳೆ ಅಲ್ಲೇ ಪಕ್ಕದಲ್ಲಿದ್ದ ತೆರೆದ ನೀರಿನ ಟ್ಯಾಂಕಿಗೆ ಬಿದ್ದು ಬಾಲಕ ಸಾವನ್ನಪ್ಪಿದ್ದಾನೆ. ಇದನ್ನೂ ಓದಿ: ಲಾಂಗ್‍ನಿಂದ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಿಕೊಂಡ ಯುವಕ ಅರೆಸ್ಟ್

ಈ ದುರ್ಘಟನೆಯಿಂದ ಬಾಲಕ ಸಾವನ್ನಪ್ಪಿರುವುದು ತಿಳಿಯುತ್ತಿದ್ದಂತೆ ಕುಟುಂಬ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿದೆ. ಸ್ಥಳಕ್ಕೆ ಹಾನಗಲ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

The post ನೀರಿನ ಟ್ಯಾಂಕಿಗೆ ಬಿದ್ದು ಎರಡು ವರ್ಷದ ಬಾಲಕ ಸಾವು appeared first on Public TV.

Source: publictv.in

Source link