ಬೆಂಗ್ಳೂರಲ್ಲಿ ಮತ್ತೆ ರಾರಾಜಿಸಲಿದೆ ಜಾಹೀರಾತು ಫಲಕಗಳು- ಸರ್ಕಾರದಿಂದ ಅಧಿಸೂಚನೆ

ಬೆಂಗಳೂರು: ಮೂರು ವರ್ಷಗಳ ಬಳಿಕ ನಗರದಲ್ಲಿ ಮತ್ತೆ ವಾಣಿಜ್ಯ ಜಾಹೀರಾತು ಪ್ರದರ್ಶನಕ್ಕೆ ಸರ್ಕಾರ ಅನುಮೋದನೆ ನೀಡಿದೆ. ರಾಜ್ಯ ಸರ್ಕಾರ ಜುಲೈ 26 ರಂದು ಎಲ್ಲಾ ಬಗೆಯ ಜಾಹೀರಾತು ಹೋಡಿರ್ಂಗ್ಸ್ ಗಳ ಅಳವಡಿಕೆಗೆ ಅನುಮತಿ ನೀಡುವ ಪ್ರಸ್ತಾವನೆಗೆ ಅಂಕಿತ ಹಾಕಿದೆ.

ಬಿಬಿಎಂಪಿ ಕಾಯಿದೆ -2020 ರನ್ನೇ ಬಳಸಿಕೊಂಡು, ಬಿಬಿಎಂಪಿ ಜಾಹೀರಾತು ನಿಯಮಗಳು-2019 ಅನ್ನು ಬದಲಾಯಿಸಿ, ಜಾಹೀರಾತು ಏಜೆನ್ಸಿಗಳ ಒತ್ತಡಕ್ಕೆ ಮಣಿದು ನಗರದಲ್ಲಿ ಮತ್ತೆ ಜಾಹೀರಾತು ಹಾವಳಿಗೆ ಅವಕಾಶ ಕಲ್ಪಿಸಿದಂತಾಗಿದೆ. ಹೊಸ ನಿಯಮದಂತೆ ಜಾಹೀರಾತು ಏಜೆನ್ಸಿಗಳು ಕಡ್ಡಾಯವಾಗಿ ಪರವಾನಗಿ ಪಡೆದು, ಮೂರು ವರ್ಷಕ್ಕೊಮ್ಮೆ ನವೀಕರಣಗೊಳಿಸಬೇಕು. ಪಾಲಿಕೆ ಮುಖ್ಯ ಆಯುಕ್ತರಿಗೆ ಅರ್ಜಿ ಸಲ್ಲಿಸಿ ಅನುಮತಿ ಪಡೆಯಬೇಕು. ಮೂರು ವರ್ಷಗಳ ಅವಧಿಯ ಪರವಾನಗಿಗೆ 50 ಸಾವಿರ ರೂ ಶುಲ್ಕ ಪಾವತಿಸಬೇಕು. ಖಾಸಗಿ ನಿವೇಶನ, ಕಟ್ಟಡ ಅಥವಾ ರಾಜ್ಯ ಮತ್ತು ಕೇಂದ್ರ ಸರ್ಕಾರದ ಜಾಗದಲ್ಲಿ ಜಾಹೀರಾತು ಪ್ರದರ್ಶಿಸಲು ನಿರಾಕ್ಷೇಪಣಾ ಪ್ರಮಾಣಪತ್ರ ಪಡೆಯುವುದು ಕಡ್ಡಾಯಗೊಳಿಸಲಾಗಿದೆ. ಇಲ್ಲವಾದಲ್ಲಿ ಶೇ.150 ರಷ್ಟು ಹೆಚ್ಚುವರಿ ಶುಲ್ಕ ಪಾವತಿಸಬೇಕಿದೆ ಎಂಬ ಹೊಸ ನಿಯಮವನ್ನು ಸರ್ಕಾರ ತಿಳಿಸಿದೆ.

ಅನುಮತಿ ಪಡೆಯದೇ ಜಾಹೀರಾತು ಪ್ರದರ್ಶಿಸಿದರೆ, ನೋಟೀಸ್ ನೀಡದೆ ಪಾಲಿಕೆ ತೆರವು ಮಾಡಬಹುದಾಗಿದೆ. 100 ಚ.ಮೀ ಕಡಿಮೆ ವಿಸ್ತೀರ್ಣವಿದ್ದರೆ 5 ಸಾವಿರ, ಇದಕ್ಕಿಂತ ಹೆಚ್ಚಿನ ವಿಸ್ತೀರ್ಣಕ್ಕೆ 7 ಸಾವಿರ ರೂ. ದಂಡ ನಿಗದಿಪಡಿಸಲಾಗಿದೆ. ನಿಯಮ ಪಾಲನೆ ಮಾಡದ ಕಂಪನಿಗಳಿಗೆ ದಿನಕ್ಕೆ ಕೇವಲ ಒಂದು ಸಾವಿರದಂತೆ ದಂಡ ವಿಧಿಸಲು ಅವಕಾಶವಿದೆ ಎಂದು ಸ್ಪಷ್ಟಪಡಿಸಿದೆ. ಇದನ್ನೂ ಓದಿ: 21 ಸಚಿವರ ಪಟ್ಟಿಗೆ ಇನ್ನೂ ಹೈಕಮಾಂಡ್‍ನಿಂದ ಸಿಕ್ಕಿಲ್ಲ ಗ್ರೀನ್‍ಸಿಗ್ನಲ್

ವಿಧಾನಸೌಧ ಸುತ್ತಮುತ್ತ ನಿರ್ಬಂಧ
ಹೊಸ ನಿಯಮದಂತೆ, ಕುಮಾರಕೃಪಾ ರಸ್ತೆ, ವಿಂಡ್ಸರ್ ಮ್ಯಾನರ್-ಶಿವಾನಂದ ವೃತ್ತ, ರಾಜಭವನ ರಸ್ತೆ, ಹೈಗ್ರೌಂಡ್ಸ್ ನಿಂದ ಮಿನ್ಸ್ಕ್ ಚೌಕ, ಸ್ಯಾಂಕಿ ರಸ್ತೆ, ಹೈಗ್ರೌಂಡ್ಸ್ ನಿಂದ ವಿಂಡ್ಸರ್‍ಸಿಗ್ನಲ್, ಅಂಬೇಡ್ಕರ್ ವೀದಿ, ಕೆ.ಆರ್ ವೃತ್ತದಿಂದ ಇನ್ ಫೆಂಟ್ರಿ ರಸ್ತೆ ಜಂಕ್ಷನ್, ಅಂಚೆ ಕಚೇರಿ ರಸ್ತೆ, ಕೆ.ಆರ್ ವೃತ್ತದಿಂದ ಮೈಸೂರು ಬ್ಯಾಂಕ್ ವೃತ್ತ, ಚಾಲುಕ್ಯ ವೃತ್ತ, ಮಹಾರಾಣಿ ಕಾಲೇಜು ರಸ್ತೆ, ಕೆ.ಆರ್ ವೃತ್ತ, ಕಬ್ಬನ್ ಪಾರ್ಕ್, ಲಾಲ್ ಭಾಗ್, ನೃಪತುಂಗ ರಸ್ತೆಗಳಲ್ಲಿ ಜಾಹೀರಾತು ಪ್ರದರ್ಶನಕ್ಕೆ ನಿಷೇಧ ಹೇರಲಾಗಿದೆ. ಇದರೊಂದಿಗೆ ದೇವಾಲಯ, ಮಸೀದಿ, ಗುರುದ್ವಾರ, ಚರ್ಚ್ ಹಾಗೂ ಧಾರ್ಮಿಕ ಸ್ಥಳಗಳಿಂದ ಐವತ್ತು ಮೀಟರ್, ವ್ಯಾಪ್ತಿಯಲ್ಲಿ ಜಾಹಿರಾತು ಪ್ರದರ್ಶನ ನಿಬರ್ಂಧಿಸಲಾಗಿದೆ.

blank

ಮೇಲ್ಸೇತುವೆ, ರೈಲ್ವೇ ಮೇಲ್ಸೇತುವೆ, ಎಲಿವೇಟೆಡ್ ಕಾರಿಡಾರ್, ಟೆಲಿಕಾಂ ಟವರ್ ನ ಅಂಚಿನಿಂದ 3.5 ಮೀಟರ್ ಪರಿಧಿ ಹಾಗೂ ಜಲಮಂಡಳಿಯ ವಾಟರ್ ಟ್ಯಾಂಕರ್ ನಿಂದ 15 ಮೀಟರ್ ವ್ಯಾಪ್ತಿಯಲ್ಲಿ ಜಾಹಿರಾತು ಪ್ರದರ್ಶನಕ್ಕೆ ಅವಕಾಶ ನಿರಾಕರಿಸಲಾಗಿದ್ದು. ಇದರೊಂದು ಜಾಹೀರಾತು ಫಲಕಗಳ ಅಳತೆಗಳ ಬಗ್ಗೆಯೂ ನಿಯಮ ಜಾರಿ ಮಾಡಿದೆ.

The post ಬೆಂಗ್ಳೂರಲ್ಲಿ ಮತ್ತೆ ರಾರಾಜಿಸಲಿದೆ ಜಾಹೀರಾತು ಫಲಕಗಳು- ಸರ್ಕಾರದಿಂದ ಅಧಿಸೂಚನೆ appeared first on Public TV.

Source: publictv.in

Source link