ಈಜು ಕಲಿಯಲು ಹೋಗಿದ್ದ ಬಾಲಕ, ಯುವಕ ನೀರು ಪಾಲು

ಚಿಕ್ಕೋಡಿ/ಬೆಳಗಾವಿ: ಈಜು ಕಲಿಯಲು ಹೋಗಿ ಬಾಲಕ ಹಾಗೂ ಯುವಕ ಸಾವನ್ನಪ್ಪಿರುವ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕಬ್ಬೂರ ಪಟ್ಟಣದ ನಾವಿ ತೋಟದಲ್ಲಿ ನಡೆದಿದೆ.

ಮಹಾಂತೇಶ ಶ್ರೀಕಾಂತ ನಾವಿ(25) ಹಾಗೂ ಶ್ರೀಶೈಲ ಬಸವರಾಜ್ ನಾವಲಗೇರ(10) ಮೃತ ದುರ್ದೈವಿಗಳು. ಇಂದು ಮಧ್ಯಾಹ್ನ ಈಜು ಕಲಿಯಲು ಬಾವಿಗೆ ಹೋಗಿದ್ದ ಸಂದರ್ಭದಲ್ಲಿ ಬಾಲಕನನ್ನು ರಕ್ಷಿಸಲು ಹೋಗಿ ಯುವಕ ಕೂಡ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ.

ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಪೊಲೀಸರು ಭೇಟಿ ನೀಡಿ, ಬಾವಿಯಿಂದ ಮೃತ ಬಾಲಕನ ಶವ ಹೊರಕ್ಕೆ ತೆಗೆದು, ಬಳಿಕ ಯುವಕನ ಶವವನ್ನ ಹೊರತೆಗೆದಿದ್ದಾರೆ. ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

The post ಈಜು ಕಲಿಯಲು ಹೋಗಿದ್ದ ಬಾಲಕ, ಯುವಕ ನೀರು ಪಾಲು appeared first on Public TV.

Source: publictv.in

Source link