ಐಶ್ವರ್ಯ ರೈ ಬಚ್ಚನ್ ಮತ್ತೆ ತಾಯಿಯಾಗ್ತಿದ್ದಾರಾ…? ಎಲ್ಲರದ್ದೂ ಇದೇ ಪ್ರಶ್ನೆ?

ಐಶ್ವರ್ಯ ರೈ ಬಚ್ಚನ್ ಮತ್ತೆ ತಾಯಿಯಾಗ್ತಿದ್ದಾರಾ…? ಎಲ್ಲರದ್ದೂ ಇದೇ ಪ್ರಶ್ನೆ?

ಐಶ್ವರ್ಯ ರೈ ಬಚ್ಚನ್​ ಅಂದ್ರೆ ಯಾರಿಗೆ ತಾನೆ ಇಷ್ಟ ಆಗಲ್ಲ ಹೇಳಿ? ಒಂದು ಕಾಲದಲ್ಲಿಅವರು ಬಾಲಿವುಡ್​ನಲ್ಲಿ ಆಳ್ವಿಕೆ ನಡೆಸಿದವರು.  ಬಹುಬೇಡಿಕೆಯಿದ್ದ ನಟಿ ಅನೇಕ ಸೂಪರ್​ ಹಿಟ್​ ಸಿನಿಮಾಗಳನ್ನು ಕೊಟ್ಟಿದ್ದಾರೆ. ಆದರೆ ಅಭಿಷೇಕ್​ ಬಚ್ಚನ್​ರೊಂದಿಗೆ ಮದುವೆಯಾದ ಬಳಿಕ ನಟನೆಯ ಬಗ್ಗೆ ಹೆಚ್ಚು ಆಸಕ್ತಿ ತೋರಿಸುತ್ತಿಲ್ಲ. ಮಗಳು ಆರಾಧ್ಯಾ ಬಚ್ಚನ್​ ಪಾಲನೆಯಲ್ಲಿ ಐಶ್​ ಬ್ಯುಸಿಯಾಗಿದ್ದಾರೆ. ಇಷ್ಟೆಲ್ಲಾ ಬ್ಯುಸಿ ಲೈಫ್​ನ ಮಧ್ಯ, ಅವರು ಮತ್ತೆ ಪ್ರೆಗ್ನೆಂಟ್​ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಫುಲ್​ ವೈರೆಲ್​ ಆಗ್ತಾಯಿದೆ.

ಹೌದೂ, ಸದ್ಯ ಐಶ್ವರ್ಯ ಪಾಂಡಿಚರಿಯಲ್ಲಿದ್ದಾರೆ. ಮಣಿರತ್ನಂ ನಿರ್ದೇಶನ ಮಾಡುತ್ತಿರುವ ‘ಪೊನ್ನಿಯನ್​ ಸೆಲ್ವನ್​’ ಚಿತ್ರದ ಶೂಟಿಂಗ್​ನಲ್ಲಿ ಅವರು ಭಾಗವಹಿಸುತ್ತಿದ್ದಾರೆ. ಬಹುದಿನಗಳ ಬಳಿಕ ಅವರು ಇಂಥ ಒಂದು ಮೆಗಾ ಪ್ರಾಜೆಕ್ಟ್​ನಲ್ಲಿ ಌಕ್ಟ್ ಮಾಡ್ತಿದ್ದಾರೆ. ಅದರ ನಡುವೆ ಐಶ್​ ಎರಡನೇ ಮಗುವಿನ ನಿರೀಕ್ಷೆಯಲ್ಲಿ ಇದ್ದಾರಾ? ಎಂಬ ಅನುಮಾನ ಇದೀಗ ಸೋಶಿಯಲ್​ ಮೀಡಿಯಾದಲ್ಲಿ ಹರಿದಾಡುತ್ತಿದೆ.

ಐಶ್ವರ್ಯಾ ಅವರನ್ನು ನಟಿ ವರಲಕ್ಷ್ಮೀ ಶರತ್​ಕುಮಾರ್ ಅವರು ಭೇಟಿ ನೀಡಿ ಕೆಲವು ಫೋಟೋಗಳನ್ನು ಕ್ಲಿಕ್ಕಿಸಿದ್ದು, ಅದನ್ನ ಅವ್ರು ತಮ್ಮ ಟ್ವಿಟರ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅದರಲ್ಲಿ ಒಂದು ಫೋಟೋ ಗಮನಿಸಿದರೆ ಐಶ್​ ಗರ್ಭಿಣಿ ಆಗಿರಬಹುದು ಎಂಬ ಅನುಮಾನ ಎಲ್ಲರಿಗೂ ಮೂಡುತ್ತಿದೆ. ಅಲ್ಲದೇ, ಅಭಿಮಾನಿಗಳೆಲ್ಲಾ ಕಮೆಂಟ್​ ಬಾಕ್ಸ್​ನಲ್ಲಿ ಐಶ್ವರ್ಯ ಪ್ರೆಗ್ನೆಂಟಾ? ಅಂತ ತಮ್ಮ ಪ್ರಶ್ನೆಗಳನ್ನ ಕೇಳ್ತಿದ್ದಾರೆ.

 

The post ಐಶ್ವರ್ಯ ರೈ ಬಚ್ಚನ್ ಮತ್ತೆ ತಾಯಿಯಾಗ್ತಿದ್ದಾರಾ…? ಎಲ್ಲರದ್ದೂ ಇದೇ ಪ್ರಶ್ನೆ? appeared first on News First Kannada.

Source: newsfirstlive.com

Source link