ಚಿಕ್ಕಮಗಳೂರಿನಲ್ಲಿ ಬಾಂಗ್ಲಾ ವಲಸಿಗರ ಭೀತಿ -ಅಕ್ರಮ ವಲಸಿಗರ ಆಶ್ರಯ ತಾಣವಾಗ್ತಿದ್ಯಾ ಕಾಫಿ ನಾಡು

ಚಿಕ್ಕಮಗಳೂರಿನಲ್ಲಿ ಬಾಂಗ್ಲಾ ವಲಸಿಗರ ಭೀತಿ -ಅಕ್ರಮ ವಲಸಿಗರ ಆಶ್ರಯ ತಾಣವಾಗ್ತಿದ್ಯಾ ಕಾಫಿ ನಾಡು

ಚಿಕ್ಕಮಗಳೂರು: ಇತ್ತೀಚಿನ ದಿನಗಳಲ್ಲಿ ಕಾಫಿ ನಾಡಿಗೆ ವಲಸೆ ಕಾರ್ಮಿಕರ ದಂಡೇ ಹರಿದುಬರುತ್ತಿದೆ. ಅಸ್ಸಾಂನವರು ಅನ್ಕೊಂಡು ಕಾಫಿ ತೋಟಗಳ ಕೆಲಸಕ್ಕೆ ಸಾವಿರಾರು ಮಂದಿ ಲಗ್ಗೆ ಇಡ್ತಿದ್ದಾರೆ. ಆದರೆ ಅಸಲಿಗೆ ಅವರು ಅಸ್ಸಾಂನವರಲ್ಲಾ ಅಕ್ರಮ ಬಾಂಗ್ಲಾ ವಲಸಿಗರು. ಅವರನ್ನ ಪತ್ತೆ ಹಚ್ಚಿ ಅನ್ನೋದು ಚಿಕ್ಕಮಗಳೂರಿನ ಹಿಂದೂ ಸಂಘಟನೆಗಳು ಆಗ್ರಹವಾಗಿದೆ.

blank

ಕಾಫಿ ನಾಡಿಗೆ ಕಾಡಲಾರಂಭಿಸಿದೆ ಬಾಂಗ್ಲಾ ವಲಸಿಗರ ಭೀತಿ
ಕಾಫಿ ನಾಡು ಚಿಕ್ಕಮಗಳೂರು ಅತೀ ಹೆಚ್ಚು ಕಾಫಿ ಉತ್ಪಾದನೆಯಾಗುವ ಜಿಲ್ಲೆ. ಕಾಫಿ ತೋಟಗಳು ಅರಣ್ಯಗಳಂತೆ ಸಾವಿರಾರು ಏಕರೆಯಲ್ಲಿ ವ್ಯಾಪಿಸಿಕೊಂಡಿದೆ. ತೋಟದ ಕೆಲಸಕ್ಕೆ ಕಾರ್ಮಿಕರ ಕೊರತೆ ಕೂಡ ಇದೆ. ಹೀಗಾಗಿ ಚಿಕ್ಕಮಗಳೂರಿಗೆ ಕಾರ್ಮಿಕರು ವಲಸೆ ಬರೋದು ಸಾಮಾನ್ಯ. ಈ ಹಿಂದೆ ಉತ್ತರ ಕರ್ನಾಟಕದ ಕಾರ್ಮಿಕರೇ ಹೆಚ್ಚಾಗಿ ಜಿಲ್ಲೆಗೆ ಅಗಮಿಸ್ತಾ ಇದ್ರು. ಆದ್ರೆ ಇತ್ತೀಚಿನ ದಿನಗಳಲ್ಲಿ ಅಸ್ಸಾಂ ಕಾರ್ಮಿಕರು ಅನ್ಕೊಂಡು ಸಾವಿರಾರು ಮಂದಿ ನಿತ್ಯವೂ ಕಾಫಿ ನಾಡಿಗೆ ಬರುತ್ತಿದ್ದಾರೆ. ಆದ್ರೆ ಅವಱರೂ ಕೂಡ ಅಸ್ಸಾಂನವರು ಅಲ್ಲ, ಅವರೆಲ್ಲಾ ಅಕ್ರಮ ಬಾಂಗ್ಲಾ ನುಸುಳುಕೋರರು. ಕಾರ್ಮಿಕರ ಸೋಗಿನಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ ಅನ್ನೋದು ಹಿಂದೂ ಸಂಘಟನೆಗಳ ಆರೋಪವಾಗಿದೆ.

blank

ಕಾರ್ಮಿಕರ ಸೋಗಿನಲ್ಲಿ ಬರ್ತಿದ್ದಾರಾ ಬಾಂಗ್ಲಾ ವಲಸಿಗರು?
ಚಿಕ್ಕಮಗಳೂರಿನಲ್ಲಿ 3 ಸಾವಿರಕ್ಕೂ ಅಧಿಕ ಮಂದಿ ಅಕ್ರಮ ಬಾಂಗ್ಲಾ ವಲಸಿಗರು ಕಾರ್ಮಿಕರ ಸೋಗಿನಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿರುವ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳ, ಅವರನ್ನು ಕೂಡಲೇ ಪತ್ತೆ ಹಚ್ಚವಂತೆ ಆಗ್ರಹಿಸಿದೆ.

ಅಲ್ಲದೆ ಇತ್ತೀಚೆಗೆ ಚಿಕ್ಕಮಗಳೂರು ನಗರದಲ್ಲೇ 9 ಮಂದಿ ಅಕ್ರಮ ಬಾಂಗ್ಲಾ ವಲಸಿಗರು ಪತ್ತೆಯಾಗಿದ್ದರು. ನಗರ ಪ್ರದೇಶದಲ್ಲೇ ಹೀಗೆ ಅಕ್ರಮ ವಲಸಿಗರು ಇರುವಾಗ ಕಾಫಿ ತೋಟಗಳಲ್ಲಿ ಇನ್ನೆಷ್ಟು ಮಂದಿ ಇರಬಹುದು ಅನ್ನೋ ಅನುಮಾನವನ್ನು ಸಂಘಟನೆಗಳು ವ್ಯಕ್ತಪಡಿಸ್ತಾ ಇದ್ದು, ಈ ಬಗ್ಗೆ ಸಮಗ್ರ ತನಿಖೆಗೆ ಹಾಗೂ ಅಕ್ರಮ ವಲಸಿಗರ ಪತ್ತೆಗೆ ಆಗ್ರಹಿಸಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿವೆ.

blank

ಅಕ್ರಮ ವಲಸಿಗರು ಕಾನೂನು ಬಾಹಿರ ಕೃತ್ಯಗಳಲ್ಲಿ ತೊಡಗಿದ್ರೆ, ಅವರನ್ನು ಪತ್ತೆಹಚ್ಚಲು ಸಾಧ್ಯವಾಗುವುದಿಲ್ಲ. ಅವರ ದಾಖಲಾತಿಗಳು ಸಿಗುವುದಿಲ್ಲ. ಹೀಗಾಗಿ ಜಿಲ್ಲೆಗೆ ಬರುವ ವಲಸಿಗರ ಮೇಲೆ ಪೊಲೀಸ್ ಇಲಾಖೆ ಹದ್ದಿನ ಕಣ್ಣಿಡಬೇಕು ಹಾಗೂ ಈಗಾಗಲೇ ಜಿಲ್ಲೆಯಲ್ಲಿ ಆಶ್ರಯ ಪಡೆದಿರುವ ಅಕ್ರಮ ವಲಸಿಗರ ಸಂಪೂರ್ಣ ಮಾಹಿತಿ ಕಲೆಹಾಕುವಂತೆ ಹಿಂದೂ ಸಂಘಟನೆಗಳು ಆಗ್ರಹಿಸಿವೆ.

blank

The post ಚಿಕ್ಕಮಗಳೂರಿನಲ್ಲಿ ಬಾಂಗ್ಲಾ ವಲಸಿಗರ ಭೀತಿ -ಅಕ್ರಮ ವಲಸಿಗರ ಆಶ್ರಯ ತಾಣವಾಗ್ತಿದ್ಯಾ ಕಾಫಿ ನಾಡು appeared first on News First Kannada.

Source: newsfirstlive.com

Source link