ಬೆಳ್ಳಂಬೆಳಗ್ಗೆ ರೌಡಿಗಳ ನಿದ್ದೆ ಕೆಡಿಸಿದ ಪೊಲೀಸ್​​​- ರೌಡಿಶೀಟರ್ ಮನೆಗಳ ಮೇಲೆ ದಿಢೀರ್ ದಾಳಿ

ಬೆಳ್ಳಂಬೆಳಗ್ಗೆ ರೌಡಿಗಳ ನಿದ್ದೆ ಕೆಡಿಸಿದ ಪೊಲೀಸ್​​​- ರೌಡಿಶೀಟರ್ ಮನೆಗಳ ಮೇಲೆ ದಿಢೀರ್ ದಾಳಿ

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಹಾಡಹಗಲೇ ಕೊಲೆಗಳು ನಡೆಯುತ್ತಿದ್ದು, ಬೆಂಗಳೂರು ಜನರು ಬೆಚ್ಚಿಬಿದ್ದಿದ್ದಾರೆ. ಈ ನಡುವೇ ನಗರದ ವಿವಿಧ ಪ್ರದೇಶಗಳಲ್ಲಿ ರೌಡಿಶೀಟರ್​​ಗಳ ಮನೆ ಮೇಲೆ ಪೊಲೀಸರು ದಿಢೀರ್ ದಾಳಿ ನಡೆಸಿ ಬಿಸಿ ಮುಟ್ಟಿಸುತ್ತಿದ್ದಾರೆ.

blank

ಇಂದು ಬೆಳ್ಳಂ ಬೆಳಗ್ಗೆ ಆಗ್ನೇಯ ವಿಭಾಗ ಡಿಸಿಪಿ ಶ್ರೀನಾಥ್ ಮಹದೇವ್ ಜೋಶಿ, ಎಸಿಪಿ ಸುದೀರ್ ಹೆಗ್ಗಡೆ ಅವರು ರೌಡಿ ಶೀಟರ್​ ಮನೆಗಳ ಮೇಲೆ ಖುದ್ದು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಆಡುಗೋಡಿ ಠಾಣಾ ವ್ಯಾಪ್ತಿಯಲ್ಲಿ ರೌಡಿಗಳ ಮನೆಗಳ ಮೇಲೆ ದಾಳಿ ಮಾಡಲಾಗಿದ್ದು, ಮುಂಜಾನೆಯ ಸುಖ ನಿದ್ದೆಯಲ್ಲಿದ್ದ ರೌಡಿಗಳಿಗೆ ಬಿಸಿ ಮುಟ್ಟಿಸಿ ವಾರ್ನಿಂಗ್​ ನೀಡಿದ್ದಾರೆ.

blank

ಸುಳ್ಳು ಸಿಕ್ಕಿ ಬಿದ್ದ ರೌಡಿ ಪ್ರವೀಣ್..
ಇತ್ತೀಚಿನ ಕೃತ್ಯಗಳನ್ನ ಮೆಲುಕು ಹಾಕಿ ರೌಡಿಗಳಿಗೆ ವಾರ್ನಿಂಗ್ ನೀಡುವ ವೇಳೆ ಡಿಸಿಪಿ ಶ್ರೀನಾಥ್ ಅವರಿಗೆ ರೌಡಿ ಪ್ರವೀಣ್ ವಿಚಾರಣೆ ವೇಳೆ ಸುಳ್ಳು ಹೇಳಿ ಸಿಕ್ಕಿ ಬಿದ್ದ ಘಟನೆಯೂ ನಡೆಯಿತು. ಈ ವೇಳ ಆತನಿಗೆ ವಾರ್ನ್​ ಮಾಡಿದ ಡಿಸಿಪಿ, ಇದೆಲ್ಲಾ ಗಾಂಚಾಲಿ ಬಿಟ್ಬಿಡು ಕರೆಕ್ಟಾಗಿ ನಿಜ ಹೇಳು.. ಎಂದು ದಬಾಯಿಸಿದರು. ಈ ವೇಳೆ ಅದು ರೋಡ್ ಗಲಾಟೆ ಸರ್.. ಜೊತೆಯಲ್ಲಿ ಹೋಗಿದ್ದೆ ಎಂದು ಪ್ರವೀಣ್ ಒಪ್ಪಿಕೊಂಡಿದ್ದ. ಕೂಡಲೇ ಪೊಲೀಸರಿಗೆ ಸೂಚನೆ ನೀಡಿದ ಡಿಸಿಪಿ ಅವರು, ಆತನನ್ನು ವಶಕ್ಕೆ ಪಡೆದು ಸ್ಟೇಷನ್ ಕರೆದುಕೊಂಡು ಹೋಗುವಂಎ ಸೂಚನೆ ನೀಡಿದ್ರು.

ಇದನ್ನೂ ಓದಿ: ಬೆಳ್ಳಂಬೆಳಗ್ಗೆ ರೌಡಿಗಳ ನಿದ್ದೆ ಕೆಡಿಸಿದ ಪೊಲೀಸ್​​​- ರೌಡಿಶೀಟರ್ ಮನೆಗಳ ಮೇಲೆ ದಿಢೀರ್ ದಾಳಿ

blank

blank

The post ಬೆಳ್ಳಂಬೆಳಗ್ಗೆ ರೌಡಿಗಳ ನಿದ್ದೆ ಕೆಡಿಸಿದ ಪೊಲೀಸ್​​​- ರೌಡಿಶೀಟರ್ ಮನೆಗಳ ಮೇಲೆ ದಿಢೀರ್ ದಾಳಿ appeared first on News First Kannada.

Source: newsfirstlive.com

Source link