ಮತ್ತೆ ಬಣ್ಣದ ಲೋಕದತ್ತ ಹೊರಳಿದ ಕೌರವ -ರಾಜಕಾರಣದಿಂದ ಸದ್ಯಕ್ಕೆ ಪಾಟೀಲ್​​​​ ವಿರಾಮ!

ಮತ್ತೆ ಬಣ್ಣದ ಲೋಕದತ್ತ ಹೊರಳಿದ ಕೌರವ -ರಾಜಕಾರಣದಿಂದ ಸದ್ಯಕ್ಕೆ ಪಾಟೀಲ್​​​​ ವಿರಾಮ!

ಬೆಂಗಳೂರು: ಸಂಪುಟಕ್ಕೆ ಸೇರಲು ದೆಹಲಿ ಮಟ್ಟದಲ್ಲಿ ತೀವ್ರ ಕಸರತ್ತು ನಡಿತಿದೆ. ಘಟಾನುಘಟಿಗಳು ಬಿಡಾರ ಹೂಡಿದ್ದಾರೆ. ಆದರೆ ಇದ್ಯಾವುದಕ್ಕೂ ತಲೆಕೆಡಸಿಕೊಳ್ಳದ ಕೌರವ ಮಾತ್ರ ಕೂಲ್ ಕೂಲ್ ಆಗಿದ್ದಾರೆ. ಹಳೇ ಉದ್ಯಮದಲ್ಲಿ ತೊಡಗಿಸಿಕೊಂದಿದ್ದಾರೆ. ಮತ್ತೆ ಬಣ್ಣ ಹಚ್ಚಲು ರೆಡಿಯಾಗಿರುವ ಬಿ. ಸಿ ಪಾಟೀಲ್​​ರು ಚಿತ್ರ ನಿರ್ಮಾಣದತ್ತ ಚಿತ್ತ ಹರಿಸಿದ್ದಾರೆ.

ಮಂತ್ರಿಗಿರಿ ಬಗ್ಗೆ ತಲೆಯೇ ಕೆಡಿಸಿಕೊಳ್ತಿಲ್ಲ ಕೂಲ್ ಕೌರವ
ಸಿಎಂ ಬೊಮ್ಮಾಯಿ ಸಂಪುಟ ಸೇರಲು ದೆಹಲಿ ಮಟ್ಟದಲ್ಲಿ ತೀವ್ರ ಕಸರತ್ತು ನಡೀತಿದೆ. ದೆಹಲಿಯಲ್ಲಿ ಹಲವು ನಾಯಕರಿಂದ ಮಂತ್ರಿಗಿರಿಗೆ ಲಾಬಿಯೂ ನಡೆಯುತ್ತಿದೆ. ಆದ್ರೆ ಬಿ.ಸಿ ಪಾಟೀಲ್ ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ಮಂತ್ರಿಗಿರಿ ಕಸರತ್ತಿನಿಂದ ದೂರ ಉಳಿದಂತಿದೆ. ರಾಜಕೀಯದಿಂದ ಕೂಲ್​ ಆಗಿರುವ ಬಿ. ಸಿ. ಪಾಟೀಲ್ ಹಳೇ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದಾರೆ. ಬಿ.ಸಿ ಪಾಟೀಲ್ ಮತ್ತೆ ಚಿತ್ರ ನಿರ್ಮಾಣದತ್ತ ಚಿತ್ತ ಹರಿಸಿದ್ದಾರೆ.

blank

ಸಚಿವನಾಗುತ್ತೇನೋ? ಇಲ್ಲವೋ ಗೊತ್ತಿಲ್ಲ ಎಂಬ ಲೆಕ್ಕಾಚಾರ
ಹಿರೇಕೆರೂರು ಕ್ಷೇತ್ರದ ಶಾಸಕ‌ ಮಾಜಿ ಸಚಿವ, ಬಿ.ಸಿ ಪಾಟೀಲ್, ಬಾಂಬೆ ಮಿತ್ರ ಮಂಡಳಿಯಲ್ಲಿ ಗುರುತಿಸಿಕೊಂಡಿದ್ದಾರೆ. ಈ ಬಾರಿಯ ಸಂಪುಟದಲ್ಲಿ ಸಚಿವನಾಗುತ್ತೇನೋ? ಇಲ್ಲವೋ ಗೊತ್ತಿಲ್ಲ ಎಂಬ ಲೆಕ್ಕಾಚಾರದಲ್ಲಿರುವ ಬಿ ಸಿ ಪಾಟೀಲ್ ತಮ್ಮ ಈ ಹಿಂದಿನ ಕೆಲಸ ಮುಂದುವರೆಸೋಣವೆಂಬ ಪ್ಲಾನ್​​​ ಮಾಡಿದಂತಿದೆ. ಯಾಕಂದ್ರೆ ಸಿನಿಮಾ ನಿರ್ಮಾಣದತ್ತ ಮತ್ತೆ ಬಿ.ಸಿ ಪಾಟೀಲ್​​​ ಚಿತ್ತ ಹರಿಸಿದ್ದಾರೆ.
ಬೊಮ್ಮಾಯಿ ಸಿಎಂ ಆಗ್ತಿದ್ದಂತೆ ಎಲ್ಲಾ ನಾಯಕರು ಒಂದಿಲ್ಲೊಂದು ರೀತಿಯಲ್ಲಿ ಸಂಪುಟ ಸೇರಲು ಇನ್ನಿಲ್ಲದ ಪ್ರಯತ್ನ ಮಾಡ್ತಿದ್ದಾರೆ. ಆದ್ರೆ ರಾಜಕೀಯಕ್ಕಿಂತ ಸದ್ಯದ ಪರಿಸ್ಥಿತಿಯಲ್ಲಿ ಬಣ್ಣದ ಲೋಕವೇ ಕೂಲ್ ಅನ್ಕೊಂಡಿರಬಹುದೋ ಏನೋ, ಪಾಟೀಲ್ ಚಿತ್ತ ಬಣ್ಣದ ಲೋಕದತ್ತ ನೆಟ್ಟಿದೆ.

blank

ತಮ್ಮ ನಿವಾಸಕ್ಕೆ ಯೋಗರಾಜ್ ಭಟ್, ಸೂರಿ ಅವರನ್ನು ಕರೆಸಿ ಚರ್ಚೆ
ತಮ್ಮ ನಿವಾಸಕ್ಕೆ ಯೋಗರಾಜ್ ಭಟ್, ಸೂರಿ ಅವರನ್ನು ಕರೆಸಿರುವ ಬಿ.ಸಿ.ಪಾಟೀಲ್, ಪುತ್ರಿ ಸೃಷ್ಠಿ ಪಾಟೀಲ್​​​​ ನಿರ್ಮಾಪಕಿಯಾಗಿ ಸಿನಿಮಾ ನಿರ್ಮಾಣ ಮಾಡುವ ಬಗ್ಗೆ ಚರ್ಚೆ ನಡೆಸಿದ್ದಾರೆ. ಅದಕ್ಕೆ ಒಳ್ಳೆಯ ಕಥೆ ಬೇಕು ಅಂತ ಯೋಗರಾಜ್ ಭಟ್ ಹಾಗೂ ಸೂರಿ ಬಳಿ ಕೇಳಿದ್ದಾರೆ. ಇದಕ್ಕೆ ಯೋಗರಾಜ್ ಭಟ್ ಒಂದು ಒಳ್ಳೆಯ ಕಥೆಯನ್ನೂ ಹೇಳಿದ್ದಾರೆ.

ಯೋಗರಾಜ್​​​​ ಭಟ್ಟರ ಕಥೆಗೆ ಸಮ್ಮತಿ ಸೂಚಿಸಿದ ಪಾಟೀಲ್ ಅಂಡ್ ಟೀಂ, ಹೊಸ ಚಿತ್ರಕ್ಕೆ ‘ಆದ್ದರಿಂದ’ ಎಂಬ ಶೀರ್ಷಿಕೆ ಅಂತಿಮಗೊಳಿಸಿದೆ. ಶ್ರಾವಣ ಮಾಸದಲ್ಲಿ ‘ಆದ್ದರಿಂದ’ ಹೊಸ ಸಿನಿಮಾ ಸೆಟ್ ಏರುವ ಸಾಧ್ಯತೆ ಇದ್ದು, ಈ ಚಿತ್ರದಲ್ಲಿ ಬಿ.ಸಿ. ಪಾಟೀಲ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಹೀಗೆ ಬಣ್ಣದ ಲೋಕದತ್ತ ಚಿತ್ತ ಹರಿಸಲು ಇನ್ನೊಂದು ಕಾರಣ ಇದೆ. ಮಂತ್ರಿಗಿರಿ ಲಾಬಿಯಿಂದ ದೂರ ಉಳಿದಿದ್ದರೂ ಮಿತ್ರಮಂಡಳಿಯಲ್ಲಿನ ನಾಯಕರಿಗೆ ಸಚಿವ ಸ್ಥಾನ ಫಿಕ್ಸ್ ಅನ್ನೋ ಮಾತುಗಳು ಹರಿದಾಡ್ತಿರುವುದು ಬಿ.ಸಿ ಪಾಟೀಲರು ಕೂಲ್ ಆಗಿರಲು ಕಾರಣ ಆಗಿರಲೂಬಹುದು. ಈ ಎಲ್ಲಾ ಕಾರಣಗಳಿಂದ ಕೌರವ ಕೂಲ್ ಆಗಿದ್ದಾರೆ.

ವಿಶೇಷ ಬರಹ: ಮಧೂಸೂದನ್, ಪೊಲಿಟಿಕಲ್ ಬ್ಯೂರೋ, ನ್ಯೂಸ್​​ಫಸ್ಟ್​​

The post ಮತ್ತೆ ಬಣ್ಣದ ಲೋಕದತ್ತ ಹೊರಳಿದ ಕೌರವ -ರಾಜಕಾರಣದಿಂದ ಸದ್ಯಕ್ಕೆ ಪಾಟೀಲ್​​​​ ವಿರಾಮ! appeared first on News First Kannada.

Source: newsfirstlive.com

Source link