ಗಡಿ ಲಡಾಯಿ: ಅಸ್ಸಾಂ CM ವಿರುದ್ಧ FIR ದಾಖಲಿಸಿದ ಮಿಜೋರಾಂ ಪೊಲೀಸ್

ಗಡಿ ಲಡಾಯಿ: ಅಸ್ಸಾಂ CM ವಿರುದ್ಧ FIR ದಾಖಲಿಸಿದ ಮಿಜೋರಾಂ ಪೊಲೀಸ್

ಅಸ್ಸಾಂ-ಮಿಜೋರಾಂ ಗಡಿಯಲ್ಲಿ ಉಂಟಾಗಿರುವ ಪ್ರಕ್ಷುಬದ್ಧತೆ ಬೂದಿ ಮುಚ್ಚಿದ ಕೆಂಡಂದಂತಿದ್ದು, ಸದ್ಯಕ್ಕೆ ತಣ್ಣಗಾಗುವ ಯಾವುದೇ ಲಕ್ಷಣಗಳು ಕಾಣ್ತಿಲ್ಲ. ಇದೀಗ ಮಿಜೋರಾಂ ಪೊಲೀಸರು ಅಸ್ಸಾಂ ಸಿಎಂ ಹಿಮಂತ್ ಬಿಸ್ವಾ ಶರ್ಮಾ ವಿರುದ್ಧ ಎಫ್​ಐಆರ್ ದಾಖಲಿಸಿದ್ದಾರೆ.

ಜುಲೈ 26 ರಂದು ಸಂಭವಿಸಿದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಸಿಎಂ ಬಿಸ್ವಾ ವಿರುದ್ಧ ಕೊಲೆಯತ್ನ ಮತ್ತು ಕ್ರಿಮಿನಲ್ ಪಿತೂರಿ ಆರೋಪದಡಿ ಪೊಲೀಸರು ಎಫ್​​ಐಆರ್ ದಾಖಲಿಸಿದ್ದಾರೆ. ಸಿಎಂ ಮಾತ್ರವಲ್ಲ ಅಲ್ಲಿನ ನಾಲ್ವರು ಹಿರಿಯ ಪೊಲೀಸ್ ಅಧಿಕಾರಿಗಳು, ಇಬ್ಬರು ಉನ್ನತ ಅಧಿಕಾರಿಗಳು ಹಾಗೂ 200ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಮೇಲೆ ಎಫ್​ಐಆರ್ ದಾಖಲಿಸಿದ್ದಾರೆ ಅಂತಾ ವರದಿಯಾಗಿದೆ.

ಇದನ್ನೂ ಓದಿ: ಅಸ್ಸಾಂ-ಮಿಜೋರಾಂ ಗಡಿಯಲ್ಲಿ ಹಿಂಸಾಚಾರ: ವರ್ಷಗಳ ಸಮಸ್ಯೆಗೆ ಅಸಲಿ ಕಾರಣ ಏನು..?

ಅಸ್ಸಾಂ ಮತ್ತು ಮಿಜೋರಾಂ ಮಧ್ಯೆ ಗಡಿ ವಿಚಾರಕ್ಕೆ ಗಲಾಟೆ ನಡೆಯುತ್ತಿದೆ. ಮಿಜೋರಾಂನ ಐಜಾಲ್​, ಕೊಲಾಸಿಬ್​, ಮಾಮಿತ್​ಗಳು ಜಿಲ್ಲೆಗಳು ಅಸ್ಸಾಂನ ಕ್ಯಾಚರ್​, ಹೈಲಕಂಡಿ ಮತ್ತು ಕರಿಮಗಂಜ್​ ಜಿಲ್ಲೆಗಳೊಂದಿಗೆ 164.6 ಕಿ.ಮೀ ಉದ್ದದ ಗಡಿಯನ್ನು ಹಂಚಿಕೊಂಡಿವೆ. ಈ ಎರಡೂ ರಾಜ್ಯಗಳೂ ಪರಸ್ಪರ ಭೂಮಿ ಅತಿಕ್ರಮಣದ ಆರೋಪ ಮಾಡಿಕೊಳ್ಳುತ್ತಿವೆ.

ಇದನ್ನೂ ಓದಿ: ಅಸ್ಸಾಂ-ಮಿಜೋರಾಂ ಗಡಿಯಲ್ಲಿ ಭುಗಿಲೆದ್ದ ಹಿಂಸಾಚಾರ; 6 ಮಂದಿ ಪೊಲೀಸರ ಹತ್ಯೆ

ಇತ್ತೀಚೆಗೆ ಮಿಜೋರಾಂನ ವೈರೆಂಗ್ಟೆ ಗಡಿಯಿಂದ 5 ಕಿಮೀ ದೂರದಲ್ಲಿರುವ ಐಟ್ಲಾಂಗ್​​ನ್ನು ವಶಪಡಿಸಿಕೊಂಡ ಬಳಿಕ ಈ ಗಲಾಟೆ ಇನ್ನಷ್ಟು ಅತಿರೇಕಕ್ಕೆ ಹೋಗಿತ್ತು. ಅದರಂತೆ ಜುಲೈ 26 ರಂದು ಭಾರೀ ಹಿಂಸಾಚಾರ ಸಂಭವಿಸಿತ್ತು. ಈ ವೇಳೆ 6 ಪೊಲೀಸ್ ಸಿಬ್ಬಂದಿ ಹತ್ಯೆಯಾಗಿದ್ದಾರೆ.

ಇದನ್ನೂ ಓದಿ: ಮಿಜೊರಾಂಗೆ ತೆರಳದಂತೆ ಅಸ್ಸಾಂ ಜನರಿಗೆ ಸೂಚನೆ

The post ಗಡಿ ಲಡಾಯಿ: ಅಸ್ಸಾಂ CM ವಿರುದ್ಧ FIR ದಾಖಲಿಸಿದ ಮಿಜೋರಾಂ ಪೊಲೀಸ್ appeared first on News First Kannada.

Source: newsfirstlive.com

Source link