ಬಿನ್ ಬ್ಯಾಗ್ ಮೇಲೆ ಮಂಜು, ಶುಭಾ ಕಣ್ಣು – ಡಿಎಸ್ ಒದ್ದಾಟ

ಬಿಗ್‍ಬಾಸ್ ಈ ವಾರ ಮನೆಯ ಸ್ಪರ್ಧಿಗಳಿಗೆ ಒಂದೊಂದು ಸೀಕ್ರೆಟ್ ಟಾಸ್ಕ್ ನೀಡುತ್ತಾ ಬಂದಿದ್ದಾರೆ. ಅದರಂತೆ ಬಿಗ್‍ಬಾಸ್ ಈ ಬಾರಿ ದಿವ್ಯಾ ಸುರೇಶ್‍ಗೆ ಸೀಕ್ರೆಟ್ ಟಾಸ್ಕ್ ನೀಡಿದ್ದಾರೆ. ಈ ಟಾಸ್ಕ್‍ನನ್ನು ಪೂರ್ಣಗೊಳಿಸಲು ದಿವ್ಯಾ ಸುರೇಶ್ ಪಟ್ಟ ಕಷ್ಟ ಮಾತ್ರ ಅಷ್ಟಿಷ್ಟಲ್ಲ, ಆದರೂ ಎಷ್ಟೇ ಪ್ರಯತ್ನಿಸಿದರೂ ಈ ಟಾಸ್ಕ್ ಕಂಪ್ಲೀಟ್ ಮಾಡುವಲ್ಲಿ ಕೊನೆಗೆ ದಿವ್ಯಾ ಸುರೇಶ್ ವಿಫಲರಾಗಿದ್ದಾರೆ.

ಬಿಗ್‍ಬಾಸ್ ಮನೆಯ ಸ್ಪರ್ಧಿಗಳ ಬಲು ಅಚ್ಚು-ಮೆಚ್ಚಿನ ಸೀಟ್ ಎಂದರೆ ಅದು ಬಿನ್‍ಬ್ಯಾಗ್. ಅದರಲ್ಲೂ ಮನೆಯಲ್ಲಿ ಎಷ್ಟೇ ಜಾಗ ಇದ್ದರೂ ಮಂಜು ಹಾಗೂ ಶುಭಾ ಮಾತ್ರ ಗಾರ್ಡನ್ ಎರಿಯಾಗೆ ಹೋಗಿ ಬಿನ್ ಬ್ಯಾಗ್‍ನನ್ನು ಹುಡುಕಿ ಅದರ ಮೇಲೆಯೇ ಕುಳಿತುಕೊಂಡು ಹರಟೆ ಹೊಡೆಯುತ್ತಾರೆ.

ಸದ್ಯ ಬಿಗ್‍ಬಾಸ್ ಕರೆ ಮಾಡಿದಾಗ ಮಾತನಾಡಿದ ದಿವ್ಯಾ ಸುರೇಶ್‍ಗೆ ಈ ಮನೆಯಲ್ಲಿರುವ ಎರಡು ಬಿನ್‍ಬ್ಯಾಗ್ ಇದೆ. ಅದರ ಮೇಲೆ ಹೆಚ್ಚಾಗಿ ಯಾರು ಕುಳಿತುಕೊಳ್ಳುತ್ತಾರೆ ಎಂದು ಪ್ರಶ್ನೆ ಮಾಡಿದ್ದಾರೆ. ಈ ವೇಳೆ ಮಂಜು ಹಾಗೂ ಶುಭಾ ಪೂಂಜಾ ಎಂದು ದಿವ್ಯಾ ಸುರೇಶ್ ಉತ್ತರಿಸಿದ್ದಾರೆ. ಆಗ, ಬಿಗ್‍ಬಾಸ್ ನಾನು ನಿಮಗೆ ಒಂದು ಕೆಲಸ ಕೊಡುತ್ತೇನೆ. ನಾಳೆ ಸಂಜೆಯವರೆಗೂ ಮಂಜು ಹಾಗೂ ಶುಭಾ ಬಿನ್ ಬ್ಯಾಗ್ ಮೇಲೆ ಕುಳಿತುಕೊಳ್ಳದಂತೆ ನೋಡಿಕೊಳ್ಳಬೇಕು ಎಂದು ಸೀಕ್ರೆಟ್ ಟಾಸ್ಕ್ ನೀಡಿದ್ದಾರೆ.

blank

ನಂತರ ಮಧ್ಯಾಹ್ನ ಮಂಜು ಹಾಗೂ ಶುಭಾ ಬಿನ್‍ಬ್ಯಾಗ್ ಮೇಲೆ ಕುಳಿತುಕೊಳ್ಳಲು ಗಾರ್ಡನ್ ಏರಿಯಾದತ್ತ ಹೋಗುತ್ತಿರುತ್ತಾರೆ. ಈ ವೇಳೆ ದಿವ್ಯಾ ಸುರೇಶ್ ನಾನು ಶುಭಾ ಜೊತೆ ಮಾತನಾಡಬೇಕು, ನಾನು ಅವಳೊಂದಿಗೆ ಟೈಮ್ ಸ್ಪೆಂಡ್ ಮಾಡಿಲ್ಲ ಎಂದು ಅಡ್ಡಹಾಕಿದ್ದಾರೆ. ಆದರೂ ಕೇಳದ ಮಂಜು ಶುಭಾರನ್ನು ದರದರ ಎಂದು ಎಳೆದುಕೊಂಡು ಹೋಗುತ್ತಿರುತ್ತಾರೆ. ಈ ಮಧ್ಯೆ ನೀನು ಕೂಡ ನಮ್ಮ ಜೊತೆ ಕುಳಿತುಕೊಂಡು ಮಾತನಾಡು ಬಾ ಎಂದು ದಿವ್ಯಾ ಸುರೇಶ್‍ರನ್ನು ಕೂಡ ಎಳೆದುಕೊಂಡು ಹೋಗುತ್ತಾರೆ.

blank

ಈ ವೇಳೆ ಬೇಡ ಬೇಡ ಎಂದು ಎಷ್ಟೇ ತಡೆದರು, ದಿವ್ಯಾ ಸುರೇಶ್‍ರನ್ನು ದೂರ ತಳ್ಳಿ ಶುಭಾ ಹಾಗೂ ಮಂಜು ಬಿನ್ ಬ್ಯಾಗ್ ಮೇಲೆ ಕುಳಿತೆ ಬಿಡುತ್ತಾರೆ. ಒಟ್ಟಾರೆ ಟಾಸ್ಕ್ ಕಂಪ್ಲೀಟ್ ಮಾಡಲು ಎಷ್ಟೇ ಒದ್ದಾಡಿ, ಪರದಾಡಿದರೂ ದಿವ್ಯಾ ಸುರೇಶ್ ಸೋತುಹೋಗಿದ್ದಾರೆ. ಒಟ್ಟಾರೆ ಈ ದೃಶ್ಯ ನೋಡಿದ ವೀಕ್ಷರಿಗೆ ಸಖತ್ ಮಜಾ ನೀಡಿದೆ ಎಂದರೆ ತಪ್ಪಾಗಲಾರದು. ಇದನ್ನೂ ಓದಿ:ಮಂಜು ನಿದ್ದೆ ಹೋಗಿಸಿದ ಬಿಗ್‍ಬಾಸ್

The post ಬಿನ್ ಬ್ಯಾಗ್ ಮೇಲೆ ಮಂಜು, ಶುಭಾ ಕಣ್ಣು – ಡಿಎಸ್ ಒದ್ದಾಟ appeared first on Public TV.

Source: publictv.in

Source link