ಫ್ಯಾನ್ಸ್​​ಗೆ ಬ್ಯಾಡ್ ನ್ಯೂಸ್ ಕೊಟ್ಟ ದ್ರಾವಿಡ್​ -ಗಂಗೂಲಿ ಹೇಳಿದ್ರೆ ಓಕೆ ಅಂತರಾ ದಿ ವಾಲ್​​?

ಫ್ಯಾನ್ಸ್​​ಗೆ ಬ್ಯಾಡ್ ನ್ಯೂಸ್ ಕೊಟ್ಟ ದ್ರಾವಿಡ್​ -ಗಂಗೂಲಿ ಹೇಳಿದ್ರೆ ಓಕೆ ಅಂತರಾ ದಿ ವಾಲ್​​?

ಶ್ರೀಲಂಕಾ ಸರಣಿಯೇನೋ ಮುಕ್ತಾಯವಾಯ್ತು. ಆದರೆ ಎಲ್ಲರ ಚಿತ್ತ ನೆಟ್ಟಿರೋದು ರಾಹುಲ್​ ದ್ರಾವಿಡ್​ ಮೇಲೆ. ತಾತ್ಕಾಲಿಕವಾಗಿ ನೇಮಕಗೊಂಡಿದ್ದ ಕೋಚ್​​ ದ್ರಾವಿಡ್, ಪೂರ್ಣಾವಧಿ ಕೋಚ್​ ಆಗ್ತಾರಾ..ಇಲ್ವಾ ಅನ್ನೋ ಪ್ರಶ್ನೆ ಹುಟ್ಟುಹಾಕಿದೆ.

ವೃತ್ತಿ ಬದುಕಿನ ಹೊಸ ಅಧ್ಯಾಯ ಆರಂಭಿಸಿದ ರಾಹುಲ್​​ ದ್ರಾವಿಡ್​ಗೆ, ಶ್ರೀಲಂಕಾ ಪ್ರವಾಸ ಸಿಹಿ-ಕಹಿ ಅನುಭವ ನೀಡಿದೆ. ಆದರೆ ದ್ರಾವಿಡ್​ ಮಾರ್ಗದರ್ಶನಕ್ಕೆ ಪುಲ್​​ಮಾರ್ಕ್ಸ್​​ ಸಿಕ್ಕಿದ್ದು, ಮಾಜಿ ಆಟಗಾರನ ಮುಂದಿನ ನಡೆಯೇನು ಎಂಬ ಪ್ರಶ್ನೆ ಹುಟ್ಟಿಕೊಂಡಿದೆ. ಇನ್ನು ಈ ವೇಳೆ ಟೀಮ್​ ಇಂಡಿಯಾ ಪೂರ್ಣಾವಧಿ ಕೋಚ್ ಆಗ್ತಾರೆ ಅಂತ ಕಾಯ್ತಿದ್ದ ಫ್ಯಾನ್ಸ್​ಗೆ, ಇದೀಗ ಬ್ಯಾಡ್​​​​ ನ್ಯೂಸ್​ ಸಿಕ್ಕಿದೆ.
ಭಾರತಕ್ಕೆ ಫುಲ್​ಟೈಮ್​ ಕೋಚ್ ಆಗಲ್ಲ​​.

blank

ಸದ್ಯ ಟೀಮ್ ಇಂಡಿಯಾ ಕೋಚ್ ಆಗಿರುವ ರವಿ ಶಾಸ್ತ್ರಿ ಅವಧಿ, ಟಿ20 ವಿಶ್ವಕಪ್​​​ಗೆ ಮುಕ್ತಾಯವಾಗುತ್ತೆ. ಹೀಗಾಗಿ ರವಿ ಶಾಸ್ತ್ರಿ ಸ್ಥಾನಕ್ಕೆ ರಾಹುಲ್ ದ್ರಾವಿಡ್​​​ರನ್ನ​ ನೇಮಿಸುವಂತೆ, ಒತ್ತಾಯ​​ಗಳು ಕೇಳಿ ಬರ್ತಿವೆ. ಆದರೆ ಈ ಬಗ್ಗೆ ಖುದ್ದು ದ್ರಾವಿಡ್​​​ ಅವರೇ ಸ್ಪಷ್ಟನೆ ನೀಡಿದ್ದು, ನಾನಿನ್ನೂ ಟೀಮ್ ಇಂಡಿಯಾದ ಜವಾಬ್ದಾರಿ ತೆಗೆದುಕೊಳ್ಳುವ ಬಗ್ಗೆ ಯೋಚಿಸಿಯೇ ಇಲ್ಲ ಎಂದಿದ್ದಾರೆ.

ಅಂಡರ್​​-19 ಕೋಚ್​, ಕಿರಿಯರ ಮತ್ತು ಭಾರತ ‘ಎ’ ತಂಡವನ್ನ ಯಶಸ್ವಿಯಾಗಿ ಮುನ್ನಡೆಸಿರುವ ಅನುಭವ ದ್ರಾವಿಡ್​​ಗಿದೆ. ಇದೀಗ ಲಂಕಾ ಪ್ರವಾಸವನ್ನೂ ಯಶಸ್ವಿಯಾಗೇ ಮುಗಿಸಿದ್ದಾರೆ. ಇಲ್ಲಿ ಎಲ್ಲಕ್ಕಿಂತ ಮುಖ್ಯವಾಗಿ ಆಟಗಾರರೊಂದಿಗೆ ಫ್ರೆಂಡ್ಲಿ ಎನ್ವಿರಾಯ್ನ್​​ಮೆಂಟ್​ ಕ್ರಿಯೇಟ್​ ಮಾಡ್ತಾರೆ. ಹಾಗೆಯೇ ಆಟಗಾರರಿಗೆ ಸ್ವಾತಂತ್ರ್ಯ ನೀಡ್ತಾರೆ. ಇದು ಆಟಗಾರರಿಗೆ ಹೆಚ್ಚು ಇಷ್ಟವಾಗಿದೆ. ಆದರೆ ಈ ಹಿಂದೆ ಕುಟುಂಬಕ್ಕೆ ಸಮಯ ನೀಡಬೇಕೆಂಬ ಉದ್ದೇಶದಿಂದ ಕೋಚ್​ ಆಗಿ ಕಾರ್ಯನಿರ್ವಹಿಸಲ್ಲ ಎಂದಿದ್ದ ದ್ರಾವಿಡ್, ಇದೀಗ ಮತ್ತೆ ನಿರಾಕರಿಸಿದ್ದಾರೆ.

blank

ನಿವೃತ್ತಿ ಬಳಿಕ ರಾಹುಲ್​ ದ್ರಾವಿಡ್​​

  • 2014-15 ಮೆಂಟರ್​, ರಾಜಸ್ಥಾನ್​ ರಾಯಲ್ಸ್​
  • 2016-17 ಮೆಂಟರ್​, ಡೆಲ್ಲಿ ಡೇರ್​​ಡೆವಿಲ್ಸ್​​
  • 2016-18 ಕೋಚ್​​, ಭಾರತ U-19
  • 2019 ನಿರ್ದೇಶಕ, NCA
  • 2020 ಟೀಮ್​ ಇಂಡಿಯಾ ಕೋಚ್​

‘ಇನ್ನೂ ಯೋಚಿಸಿಲ್ಲ’

‘ನಾನು ಈ ಹೊಸ ಅನುಭವವನ್ನ ಆನಂದಿಸಿದ್ದೇನೆ. ನಮ್ಮ ಹುಡುಗರೊಂದಿಗೆ ಕೆಲಸ ಮಾಡುವುದನ್ನ ನಾನು ಇಷ್ಟಪಟ್ಟೆ. ಇದು ಅದ್ಭುತವಾಗಿತ್ತು. ಆದರೆ ನಾನು ಟೀಮ್ ಇಂಡಿಯಾದ ಪೂರ್ಣ ಪ್ರಮಾಣದ ಕೋಚ್​ ಆಗುವ ಬಗ್ಗೆ ಯೋಚಿಸಿಲ್ಲ. ಪ್ರಾಮಾಣಿಕವಾಗಿ ಹೇಳುವುದಾದರೆ, ನನ್ನ ತಂಡಕ್ಕೆ ಮಾರ್ಗದರ್ಶನ​ ನೀಡುವುದೆಂದರೆ ನನಗೆ ಖುಷಿ. ನಾನು ಈ ಪ್ರವಾಸದ ಹೊರತಾಗಿ, ಯಾವುದೇ ಆಲೋಚನೆ ಮಾಡಿಲ್ಲ’..!
ರಾಹುಲ್​ ದ್ರಾವಿಡ್​​, ಟೀಮ್ ಇಂಡಿಯಾ ಕೋಚ್​

blank

ರಾಹುಲ್​​ ದ್ರಾವಿಡ್​​ ನಿರ್ಧಾರ ಸರಿನಾ.. ತಪ್ಪಾ..?
ಪಾರ್ಟ್​ ಟೈಮ್​ ಕೋಚ್​​ ಜಾಬ್​​ ಮುಗಿಸಿರುವ ದ್ರಾವಿಡ್​​, ಫುಲ್​ ಟೈಮ್​ ಕೋಚ್​ ಆಗಲಿ ಅನ್ನೋದು ಅದೆಷ್ಟೋ ಅಭಿಮಾನಿಗಳ ಕನಸು. ಸದ್ಯ ದ್ರಾವಿಡ್​ ತೆಗೆದುಕೊಂಡ ನಿರ್ಧಾರ, ಅಭಿಮಾನಿಗಳಿಗೆ ಬೇಸರ ತಂದಿರೋದಂತು ಸುಳ್ಳಲ್ಲ.

The post ಫ್ಯಾನ್ಸ್​​ಗೆ ಬ್ಯಾಡ್ ನ್ಯೂಸ್ ಕೊಟ್ಟ ದ್ರಾವಿಡ್​ -ಗಂಗೂಲಿ ಹೇಳಿದ್ರೆ ಓಕೆ ಅಂತರಾ ದಿ ವಾಲ್​​? appeared first on News First Kannada.

Source: newsfirstlive.com

Source link