ದಕ್ಷಿಣ ಕನ್ನಡದಲ್ಲಿ ನಿನ್ನೆ 345 ಮಂದಿಗೆ ಕೊರೊನಾ; ಕೇರಳ ಗಡಿಭಾಗದಲ್ಲಿ ಹೈ-ಅಲರ್ಟ್​

ದಕ್ಷಿಣ ಕನ್ನಡದಲ್ಲಿ ನಿನ್ನೆ 345 ಮಂದಿಗೆ ಕೊರೊನಾ; ಕೇರಳ ಗಡಿಭಾಗದಲ್ಲಿ ಹೈ-ಅಲರ್ಟ್​

ದಕ್ಷಿಣ ಕನ್ನಡ: ಕೇರಳದಲ್ಲಿ ದಿನೇ ದಿನೆ ವ್ಯಾಪಕವಾಗಿ ಹರಡುತ್ತಿರುವ ಕೊರೊನಾ ಸೋಂಕು ರಾಜ್ಯದಲ್ಲೂ ಆತಂಕ ಉಂಟು ಮಾಡಿದೆ. ಪರಿಣಾಮ ರಾಜ್ಯದ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಕೊರೊನಾ ಸೋಂಕಿನ ಪ್ರಮಾಣ ಗಣನೀಯವಾಗಿ ಹೆಚ್ಚುತ್ತಿದೆ.

ಜಿಲ್ಲೆಯಲ್ಲಿ ಕಳೆದ 3 ದಿನದಿಂದ ಹೆಚ್ಚುತ್ತಿರುವ ಕೊರೊನಾ ಪ್ರಕರಣಗಳು ಮೂರನೇ ಅಲೆಯ ಆತಂಕ ಉಂಟು ಮಾಡಿದೆ. ನಿನ್ನೆ ಒಂದೇ ದಿನ ಜಿಲ್ಲೆಯಲ್ಲಿ 345 ಕೊರೊನಾ ಸೋಂಕಿನ ಪ್ರಕರಣಗಳು ದಾಖಲಾಗಿದ್ದು ಜಿಲ್ಲೆಯಲ್ಲಿ ಭೀತಿಯನ್ನುಂಟು ಮಾಡಿದೆ.

ಇದನ್ನೂ ಓದಿ: ಕೇರಳ-ಕರ್ನಾಟಕ ಗಡಿಯಲ್ಲಿ ಹೈ ಅಲರ್ಟ್; RTPCR ನೆಗೆಟಿವ್, 2 ಡೋಸ್ ವ್ಯಾಕ್ಸಿನ್ ಆಗಿದ್ರೆ ಮಾತ್ರ ಪ್ರವೇಶ

ಕೇರಳ ಗಡಿಯಲ್ಲಿ ಕಟ್ಟುನಿಟ್ಟಿನ ಕ್ರಮಕ್ಕೆ ರಾಜ್ಯ ಸರಕಾರ ಆದೇಶದ ಹಿನ್ನೆಲೆಯಲ್ಲಿ, ಕೊರೊನಾ ನಿಯಂತ್ರಣಕ್ಕೆ ಬ್ರೇಕ್​ ಹಾಕಲು ಎಚ್ಚೆತ್ತುಕೊಂಡ ಜಿಲ್ಲಾಡಳಿತ, ಕೇರಳ ಗಡಿಭಾಗದ ತಲಪಾಡಿ ಚೆಕ್ ಪೋಸ್ಟ್ ನಲ್ಲಿ ಕಟ್ಟು ನಿಟ್ಟಿನ ತಪಾಸಣೆಗೆ ಕ್ರಮ ಕೈಗೊಂಡಿದೆ. ಗಡಿಭಾಗ ತಲಪಾಡಿಯಲ್ಲಿ ಕೇರಳದಿಂದ ಆಗಮಿಸುವವರ ಮೇಲೆ ತೀವ್ರ ನಿಗಾ ಇರಿಸಿದ ಜಿಲ್ಲಾಡಳಿತ, ಮಂಗಳೂರು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ಇತರ ಭಾಗಗಳಿಂದ ಕೇರಳಕ್ಕೆ ತೆರಳಿ ವಾಪಾಸಾಗುವವರ ಮೇಲೆ ಹದ್ದಿನ ಕಣ್ಣಿಟ್ಟಿದೆ.

ಇನ್ನು ಕೇರಳದ ಕಾಸರಗೋಡು ಜಿಲ್ಲೆ ಸಂಪರ್ಕಿಸುವ ಜಿಲ್ಲೆಯ ಪ್ರಮುಖ ರಸ್ತೆ ಸೇರಿದಂತೆ ಒಳ ರಸ್ತೆಗಳಲ್ಲೂ ಚೆಕ್ ಪೋಸ್ಟ್ ನಿರ್ಮಾಣ ಮಾಡಿ, ಕೇರಳದಿಂದ ಬರುವವರಿಗೆ ತಪಾಸಣೆ ಮಾಡುತ್ತಿದ್ದು, RTPCR ನೆಗಟಿವ್​ ವರದಿ, ವ್ಯಾಕ್ಸಿನೇಶನ್​ ಸರ್ಟಿಫಿಕೇಟ್​ ಪರಿಶೀಲಿಸುತ್ತಿದ್ದು, ಸ್ಕ್ರೀನಿಂಗ್​ ಮಾಡಲಾಗುತ್ತಿದೆ ಎಂದು ನ್ಯೂಸ್​ಫಸ್ಟ್​ಗೆ ಮಾಹಿತಿ ಲಭ್ಯವಾಗಿದೆ.

The post ದಕ್ಷಿಣ ಕನ್ನಡದಲ್ಲಿ ನಿನ್ನೆ 345 ಮಂದಿಗೆ ಕೊರೊನಾ; ಕೇರಳ ಗಡಿಭಾಗದಲ್ಲಿ ಹೈ-ಅಲರ್ಟ್​ appeared first on News First Kannada.

Source: newsfirstlive.com

Source link