ರಾತ್ರೋ ರಾತ್ರಿ ಕಾರಿನಲ್ಲಿ ದನಗಳನ್ನು ಹೊತ್ತೊಯ್ದ ಹೈಫೈ​ ಕಳ್ಳರು

ರಾತ್ರೋ ರಾತ್ರಿ ಕಾರಿನಲ್ಲಿ ದನಗಳನ್ನು ಹೊತ್ತೊಯ್ದ ಹೈಫೈ​ ಕಳ್ಳರು

ಚಿಕ್ಕಮಗಳೂರು: ಜಿಲ್ಲೆಯಲ್ಲಿ ದನಗಳ್ಳರ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗ್ತಿದ್ದು ದನಗಳ್ಳರ ಹಾವಳಿಗೆ ರೈತರು ರೋಸಿ ಹೋಗಿದ್ದಾರೆ. ಕೊಟ್ಟಿಗೆಯಲ್ಲಿದ್ದ ದನಗಳನ್ನು ರಾತ್ರೋ ರಾತ್ರಿ ಕಾರಿನಲ್ಲಿ ಅಪಹರಿಸಿದ ಘಟನೆ ಜಿಲ್ಲೆಯ ಕೊಪ್ಪ ಪಟ್ಟಣದಲ್ಲಿ ನಡೆದಿದೆ.

blank

 

ಇದನ್ನೂ ಓದಿ: ಚಿಕ್ಕಮಗಳೂರಿನಲ್ಲಿ ಬಾಂಗ್ಲಾ ವಲಸಿಗರ ಭೀತಿ -ಅಕ್ರಮ ವಲಸಿಗರ ಆಶ್ರಯ ತಾಣವಾಗ್ತಿದ್ಯಾ ಕಾಫಿ ನಾಡು

ರಾತ್ರಿ ಕೊಟ್ಟಿಗೆಯಲ್ಲಿ ಮಲಗಿದ್ದ ದನಗಳಿಗೆ ಆಹಾರ ಕೊಡುವ ನೆಪದಲ್ಲಿ ಆಗಮಿಸಿದ ಖತರ್ನಾಕ್ ಖದೀಮರು ನೋಡು ನೋಡುತ್ತಿದ್ದಂತೆಯೇ ದನಗಳನ್ನು ಕಾರಿನ ಡಿಕ್ಕಿಯಲ್ಲಿ ಹಾಕಿಕೊಂಡು ಎಸ್ಕೇಪ್​ ಆಗಿದ್ದಾರೆ. ಇನ್ನು ಖದೀಮರ ಕೈಚಳಕ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

The post ರಾತ್ರೋ ರಾತ್ರಿ ಕಾರಿನಲ್ಲಿ ದನಗಳನ್ನು ಹೊತ್ತೊಯ್ದ ಹೈಫೈ​ ಕಳ್ಳರು appeared first on News First Kannada.

Source: newsfirstlive.com

Source link