ಬಿಎಸ್​ವೈ ಅವ್ರಿಗೇ ಕೇಂದ್ರದಿಂದ ಪರಿಹಾರ ತರಲು ಆಗಲಿಲ್ಲ, ಬೊಮ್ಮಾಯಿ ತರ್ತಾರಾ? -ಸಿದ್ದರಾಮಯ್ಯ ಲೇವಡಿ

ಬಿಎಸ್​ವೈ ಅವ್ರಿಗೇ ಕೇಂದ್ರದಿಂದ ಪರಿಹಾರ ತರಲು ಆಗಲಿಲ್ಲ, ಬೊಮ್ಮಾಯಿ ತರ್ತಾರಾ? -ಸಿದ್ದರಾಮಯ್ಯ ಲೇವಡಿ

ಮೈಸೂರು: ಯಡಿಯೂರಪ್ಪ ಅವರಿಂದಲೇ ಕೇಂದ್ರದಿಂದ ಪರಿಹಾರ ತರಲು ಆಗಲಿಲ್ಲ. ಇನ್ನು ಬಸವರಾಜ್ ಬೊಮ್ಮಾಯಿ ತರ್ತಾರಾ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ.

ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಸಿದ್ದರಾಮಯ್ಯ.. ಕೇಂದ್ರ ಸರ್ಕಾರ ರಾಜ್ಯಕ್ಕೆ ನೀಡಬೇಕಿದ್ದ ಕಳೆದ ಬಾರಿಯ ಜಿಎಸ್​ಟಿ ಹಾಗೂ ಪ್ರಕೃತಿ ವಿಕೋಪದ ಹಣಗಳು ಬಾಕಿ ಉಳಿಸಿಕೊಂಡಿದೆ. ಅದನ್ನ ಈಗಾಗಲೇ ನೀಡಬೇಕಿತ್ತು ಎಂದು ಕಿಡಿಕಾರಿದ ಅವರು, ಈ ಹಿಂದೆ ಬಿಎಸ್​ ಯಡಿಯೂರಪ್ಪ ಅವರ ಕೈಯಲ್ಲೇ ಆಗಲಿಲ್ಲ. ಇನ್ನ ಬೊಮ್ಮಾಯಿ ಅವರು ತರ್ತಾರಾ? ಯಡಿಯೂರಪ್ಪ ಮೊದಲಿನಿಂದ ಬಿಜೆಪಿಯಲ್ಲಿದ್ದೂ, ಕೇಂದ್ರದ ನಾಯಕರ ಬಳಿ ಮಾತನಾಡಲು ಆಗಲಿಲ್ಲ. ಇನ್ನು ಇದೆಲ್ಲಾ ಬೊಮ್ಮಾಯಿ ಹತ್ತಿರ ಆಗುತ್ತಾ? ಬೊಮ್ಮಾಯಿ ಅವರು ಜನತಾ ಪರಿವಾರದಿಂದ ಹೋದವರು ಎಂದರು.

blank
ರಾಜ್ಯದಲ್ಲಿ ಕೊರೊನಾ ಮೂರನೇ ಅಲೆ ಭೀತಿ ಶುರುವಾಗಿದೆ. ನೆರೆ ಹಾವಳಿ ಕೂಡ ಹೆಚ್ಚಾಗಿದೆ. ಇದನ್ನ ಬೊಮ್ಮಾಯಿ ನಿಭಾಯಿಸುವ ವಿಶ್ವಾಸವಿಲ್ಲ. ಅಧಿಕಾರಿಗಳು ನೆರೆ ಹಾವಳಿಯನ್ನ ನಿಭಾಯಿಸುತ್ತಾರೆ. ಅಧಿಕಾರಿಗಳನ್ನ ಸಿಎಂ ವಿಶ್ವಾಸಕ್ಕೆ ಪಡೆದು ಕೆಲಸ ಮಾಡಬೇಕು. ಏಕವ್ಯಕ್ತಿ ಸಂಪುಟದಿಂದ ಇವೆಲ್ಲವನ್ನ ನಿರ್ವಹಿಸಲು ಸಾಧ್ಯವಿಲ್ಲ. ಆದಷ್ಟು ಬೇಗ ಸಂಪುಟ ರಚನೆಯನ್ನ ಮಾಡಬೇಕು ಎಂದು ಆಗ್ರಹಿಸಿದರು.

The post ಬಿಎಸ್​ವೈ ಅವ್ರಿಗೇ ಕೇಂದ್ರದಿಂದ ಪರಿಹಾರ ತರಲು ಆಗಲಿಲ್ಲ, ಬೊಮ್ಮಾಯಿ ತರ್ತಾರಾ? -ಸಿದ್ದರಾಮಯ್ಯ ಲೇವಡಿ appeared first on News First Kannada.

Source: newsfirstlive.com

Source link