ಆರೋಗ್ಯಕರವಾದ ರಾಗಿ ಇಡ್ಲಿ ನೀವೂ ಮಾಡಿ

ಪೋಷಕಾಂಶಗಳನ್ನು ಹೊಂದಿರುವ ಸಿರಿಧಾನ್ಯಗಳಲ್ಲಿ ರಾಗಿ ಒಂದಾಗಿದೆ. ರಾಗಿ ದಕ್ಷಿಣ ಭಾರತದ (ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ) ಆಹಾರದಲ್ಲಿ ಪ್ರಮುಖ ಸ್ಥಾನ ಪಡೆಯುತ್ತದೆ. ರಾಗಿಯಿಂದ ತಯಾರಿಸುವ ಆಹಾರಗಳು ಆರೋಗ್ಯಕರ ಮತ್ತು ರುಚಿಯಾಗಿರುತ್ತವೆ.

ಅಧಿಕ ಮಟ್ಟದ ನಾರಿನಾಂಶ,ಆಂಟಿ ಆಕ್ಸಿಡೆಂಟುಗಳು, ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಸಮೃದ್ಧವಾಗಿದೆ. ನಿಯಮಿತ ರಾಗಿಯ ಸೇವನೆ ಮೂಳೆಗಳ ಬಲಿಷ್ಠತೆ, ಮಧುಮೇಹ ನಿಯಂತ್ರಣ, ಸಕ್ಕರೆ ಮಟ್ಟವನ್ನು ಕಡಿಮೆ ಮಾಡುವುದು, ಹಸಿವನ್ನು ಮುಂದೂಡುವುದು ಮತ್ತು ಜೀರ್ಣಕ್ರಿಯೆಯನ್ನು ಕೂಡ ಉತ್ತಮಗೊಳಿಸುತ್ತದೆ. ಈ ರಾಗಿಯಿಂದ ದೋಸೆ ಮಾಡಿ ತಿಂದಿರುತ್ತೀರ ಆದರೆ ಇಂದು ನೀವು ರಾಗಿ ಇಡ್ಲಿ ಮಾಡುವ ವಿಧಾನ ಇದಾಗಿದೆ.

ಬೇಕಾಗುವ ಸಾಮಗ್ರಿಗಳು:
* ಬಾಂಬೆ ರವೆ- 2 ಕಪ್
* ರಾಗಿ ಹಿಟ್ಟು – 2 ಕಪ್
* ರುಚಿಗೆ ತಕ್ಕಷ್ಟು ಉಪ್ಪು
* ಮೊಸರು -2 ಕಪ್
* ಅಡುಗೆ ಸೋಡಾ – ಕಾಲು ಚಮಚ
* ನೀರು – ಅಗತ್ಯವಿರುವಂತೆ ಸೇರಿಸಿ

ಮಾಡುವ ವಿಧಾನ:
* ಮೊದಲನೆಯದಾಗಿ, ರವೆಯನ್ನು ಮಧ್ಯಮ ಉರಿಯಲ್ಲಿ 2 ರಿಂದ 3 ನಿಮಿಷಗಳ ಕಾಲ ಹುರಿಯಿರಿ.
* ಈಗ ಹುರಿದ ರವೆ, ರಾಗಿ ಹಿಟ್ಟು, ಉಪ್ಪು ಮತ್ತು ಮೊಸರು ಬೇಕಾದಲ್ಲಿ ಸ್ವಲ್ಪ ನೀರು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಬೇಕು.

blank
* ಚೆನ್ನಾಗಿ ಮಿಶ್ರಣವನ್ನು ಮಾಡಿ ಮತ್ತು 30 ನಿಮಿಷಗಳ ಕಾಲ ನೆನೆಸಿ. ಇಡ್ಲಿ ಬ್ಯಾಟರ್ ಸ್ಥಿರತೆ ಇದೆಯೇ ನೋಡಿಕೊಳ್ಳಿ.

blank

* ಈಗ ಒಂದು ಪಿಂಚ್ ಅಡಿಗೆ ಸೋಡಾ ಸೇರಿಸಿ ಮತ್ತು ಅದು ನೊರೆಯಾಗುವವರೆಗೆ ಚೆನ್ನಾಗಿ ಮಿಶ್ರಣ ಮಾಡಿ.
* ಇಡ್ಲಿ ತಟ್ಟೆಗಳಿಗೆ ಎಣ್ಣೆ ಸವರಿ ಮಿಶ್ರಣವನ್ನು ಹಾಕಬೇಕು, ನಂತರ ಇಡ್ಲಿಪಾತ್ರೆಯಲ್ಲಿ ಇಟ್ಟು ಮಧ್ಯಮ ಉರಿಯಲ್ಲಿ 8-10 ನಿಮಿಷಗಳಕಾಲ ಚೆನ್ನಾಗಿ ಬೇಯಿಸಿದರೆ ರಾಗಿ ಇಡ್ಲಿ ಸವಿಯಲು ಸಿದ್ಧವಗುತ್ತದೆ.
* ತೆಂಗಿನಕಾಯಿ ಚಟ್ನಿ ಮತ್ತು ಸಾಂಬಾರ್‍ನೊಂದಿಗೆ ಬಿಸಿ ಬಿಸಿ ರಾಗಿ ಇಡ್ಲಿ ಸವಿಯಲು ಸಿದ್ಧವಾಗುತ್ತದೆ.

The post ಆರೋಗ್ಯಕರವಾದ ರಾಗಿ ಇಡ್ಲಿ ನೀವೂ ಮಾಡಿ appeared first on Public TV.

Source: publictv.in

Source link