ವೈಫಲ್ಯದ ಸುಳಿಯಲ್ಲಿ ಯಾರ್ಕರ್​ ಕಿಂಗ್​ -ಬುಮ್ರಾಗೆ ಶೋಯೆಬ್ ಅಖ್ತರ್​ ಕೊಟ್ಟ ವಾರ್ನಿಂಗ್ ಏನು?

ವೈಫಲ್ಯದ ಸುಳಿಯಲ್ಲಿ ಯಾರ್ಕರ್​ ಕಿಂಗ್​ -ಬುಮ್ರಾಗೆ ಶೋಯೆಬ್ ಅಖ್ತರ್​ ಕೊಟ್ಟ ವಾರ್ನಿಂಗ್ ಏನು?

ಟೀಮ್​ ಇಂಡಿಯಾದ ಡೆತ್​ ಓವರ್​​​​​​ ಸ್ಪೆಷಲಿಸ್ಟ್​ ಎನಿಸಿದ್ದ ಈತ, ಇದೀಗ ವೈಫಲ್ಯದ ಸುಳಿಗೆ ಸಿಲುದ್ದಾನೆ. ಹಾಗಾಗಿ ಕ್ರಿಕೆಟ್​​ನ ಒಂದು ಫಾರ್ಮೆಟ್​​ನಿಂದ ಕೈ ಬಿಡುವಂತೆ ಸಲಹೆ ಬಂದಿದೆ. ಆದರೆ ಮೂರು ಫಾರ್ಮೆಟ್​ನಲ್ಲಿ ಆಡಿದ್ರೆ, ಬುಮ್ರಾಗೆ ಎದುರಾಗೊ ಸವಾಲುಗಳೇನು ಎಂಬುವುದನ್ನು ನೋಡುವುದಾದರೆ..

ಟೀಮ್​ ಇಂಡಿಯಾದ ಯಾರ್ಕರ್ ಕಿಂಗ್​ ಜಸ್​ಪ್ರಿತ್​ ಬುಮ್ರಾ. ವಿಶ್ವ ಕ್ರಿಕೆಟ್​​ನ ಡೆತ್​ ಓವರ್ ಸ್ಪೆಷಲಿಸ್ಟ್​. ಹಾಗೇ ಭಾರತದ ಬೌಲಿಂಗ್ ಶಕ್ತಿ. ಆದರೆ ಅದ್ಯಾಕೋ ಇತ್ತೀಚಿಗೆ ಫುಲ್​ ಡಲ್​ ಆಗಿರುವ ಬುಮ್ರಾ, ವಿಕೆಟ್​ ಪಡೆಯೋದಕ್ಕೆ ಪರದಾಡ್ತಿದ್ದಾರೆ. ಹಾಗಾಗಿ ಬುಮ್ರಾ, ಬೌಲಿಂಗ್ ಆ್ಯಕ್ಷನ್ ಆ್ಯಂಡ್​​ ಫಾರ್ಮ್ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ.

blank

ಹೌದು, ತಮ್ಮ ಡೆಡ್ಲಿ ಯಾರ್ಕರ್​ಗಳಿಂದ ಬ್ಯಾಟ್ಸ್​ಮನ್​​ಗಳಿಗೆ ದಂಗುಬಿಡಿಸುತ್ತಿದ್ದ ಈತ, ಸದ್ಯ ಕಳಪೆ ಪ್ರದರ್ಶನ ನೀಡ್ತಿದ್ದಾರೆ. ಈ ಒಂದು ಅನ್​​ಫಾರ್ಮ್​​ಗೆ ಬುಮ್ರಾ, ಮೂರು ಫಾರ್ಮೆಟ್​ಗಳಲ್ಲಿ ಆಡ್ತಿರೋದೇ ಕಾರಣ ಎನ್ನಲಾಗ್ತಿದೆ. ಹಾಗಾಗಿ ಯಾರ್ಕರ್​ ಕಿಂಗ್​​ನ, ವೃತ್ತಿಜೀವನ ಮತ್ತೆ ಸುಗಮವಾಗಬೇಕಾದರೆ, ಕ್ರಿಕೆಟ್​​​​ನ ಒಂದು ಫಾರ್ಮೆಟ್​​ಗೆ ದೂರ ಉಳಿಯುವ ಅವಶ್ಯಕ ಎದುರಾಗಿದೆ. ಇಲ್ಲವಾದಲ್ಲಿ ಹಲವು ಸವಾಲುಗಳನ್ನೇ ಬೂಮ್ರಾ ಎದುರಿಸಬೇಕಾಗುತ್ತೆ.

ಬುಮ್ರಾ ಮುಂದಿರುವ ಸವಾಲುಗಳು..
ಒಂದು ವೇಳೆ ಬುಮ್ರಾ ಮೂರು ಫಾರ್ಮೆಟ್​​ಗಳಲ್ಲಿ ಮುಂದುವರಿದ್ರೆ, ತಮ್ಮ ಬೌಲಿಂಗ್​ ಮೇಲಿನ ಹಿಡಿತ ಕಳೆದುಕೊಳ್ಳುವ ಸಾಧ್ಯತೆ ಇದೆ. ಇದರಿಂದಾಗಿ ಡೆತ್​ ಓವರ್​ಗಳಲ್ಲಿ ಎದುರಾಳಿಗಳ ನಿಯಂತ್ರಣಕ್ಕೆ ಹರಸಾಹಸವೇ ಪಡಬೇಕಾಗುತ್ತೆ. ಹಾಗೆಯೇ ಇಂಜುರಿ ಕಾಟ ಕೂಡ ಎದುರಾಗುವುದಲ್ಲದೆ, ಮಾನಸಿಕವಾಗಿಯೂ ಕುಗ್ಗಿ ಹೋಗಲಿದ್ದಾರೆ. ಇವುಗಳ ಜೊತೆಗೆ ಹೆಚ್ಚು ಒತ್ತಡಕ್ಕೂ ಒಳಗಾಗುವ ಸಾಧ್ಯತೆ ಇದೆ.

blank

3 ಫಾರ್ಮೆಟ್​​ನಲ್ಲಿ ಆಡೋದ್ರಿಂದ ಬುಮ್ರಾಗೆ ಸವಾಲು..
ಇದರಿಂದಾಗಿ​ ಬೂಮ್ರಾ ವೈಫಲ್ಯ ಅನುಭವಿಸುವುದು ಮಾತ್ರವಲ್ಲದೇ, ಟೀಮ್ ಇಂಡಿಯಾದ ಫಲಿತಾಂಶದ ಮೇಲೂ ವ್ಯತಿರಿಕ್ತ ಪರಿಣಾಮ ಉಂಟಾಗೋದು ಗ್ಯಾರಂಟಿ. ಹಾಗಾಗಿ ಯಾವುದಾದರೂ ಒಂದು ಫಾರ್ಮೆಟ್​ನಿಂದ ಬುಮ್ರಾರನ್ನ ಕೈ ಬಿಡಬೇಕಿದೆ. ಇನ್ನು ಪಾಕಿಸ್ತಾನ ಮಾಜಿ ವೇಗಿ ಶೋಯೆಬ್​ ಅಖ್ತರ್ ಕೂಡ ಇದನ್ನೇ ಹೇಳ್ತಿದ್ದಾರೆ.

‘ಒಂದು ಫಾರ್ಮೆಟ್​​ನಿಂದ ಬುಮ್ರಾಗೆ ಪೂರ್ಣ ವಿರಾಮ ಅಗತ್ಯವಿದೆ. ಇಲ್ಲವಾದಲ್ಲಿ ತಾನು ಇಂಜುರಿ ಮತ್ತು ಒತ್ತಡಕ್ಕೆ ಒಳಗಾಗುತ್ತಾರೆ’’

-ಶೋಯೆಬ್​ ಅಖ್ತರ್​, ಮಾಜಿ ವೇಗಿ

ಕಳೆದೆರೆಡು ವರ್ಷಗಳಿಂದ ವೈಫಲ್ಯದ ಸುಳಿಗೆ ಸಿಲುಕಿರುವ ಬುಮ್ರಾ, ಫಾರ್ಮ್​ಗೆ ಮರಳೋಕೆ ಹರಸಾಹಸಪಡ್ತಿದ್ದಾರೆ. ಸದ್ಯ ಇಂಗ್ಲೆಂಡ್​ ಟೆಸ್ಟ್​​ ಸರಣಿಯಲ್ಲಿ ಬುಮ್ರಾ ಮೇಲೆ ನಿರೀಕ್ಷೆಗಳ ಭಾರವೇ ಇದೆ. ಆದ್ರೆ, ಟೀಮ್ ಇಂಡಿಯಾ ಭವಿಷ್ಯದ ದೃಷ್ಟಿಯಿಂದ ಟೀಮ್​ ಮ್ಯಾನೇಜ್​ಮೆಂಟ್​, ಬುಮ್ರಾರನ್ನ ಒಂದು ಫಾರ್ಮೆಟ್​​ನಿಂದ ಕೈಬಿಡುತ್ತಾ..? ಇಲ್ಲಾ ಎಲ್ಲಾ ಫಾರ್ಮೆಟ್​​ನಲ್ಲೂ ಹಾಗೇ ಮುಂದುವರಿಸುತ್ತಾ ಅನ್ನೋದನ್ನ ಕಾದು ನೋಡಬೇಕಿದೆ.

The post ವೈಫಲ್ಯದ ಸುಳಿಯಲ್ಲಿ ಯಾರ್ಕರ್​ ಕಿಂಗ್​ -ಬುಮ್ರಾಗೆ ಶೋಯೆಬ್ ಅಖ್ತರ್​ ಕೊಟ್ಟ ವಾರ್ನಿಂಗ್ ಏನು? appeared first on News First Kannada.

Source: newsfirstlive.com

Source link