I-Phone, I-Pad​ ಮೇಲೂ ಹ್ಯಾಕರ್ಸ್ ಕರಿನೆರಳು.. ಬಚಾವ್ ಆಗಲು ನೀವು ಏನ್ಮಾಡಬೇಕು..?

I-Phone, I-Pad​ ಮೇಲೂ ಹ್ಯಾಕರ್ಸ್ ಕರಿನೆರಳು.. ಬಚಾವ್ ಆಗಲು ನೀವು ಏನ್ಮಾಡಬೇಕು..?

ಐಫೋನ್ ಈ ಹೆಸರು ಕೇಳಿದ್ರೆ ಸಾಕು, ಜನರ ಕಿವಿ ಥಟ್ ಅಂತೆ ಒಮ್ಮೆ ಅರಳಿ ಬಿಡುತ್ತೆ. ಮನದಲ್ಲಿ ಪ್ರತಿಷ್ಠೆಯ ಚಿತ್ರಣವೇ ಮೂಡಿ ಬರುತ್ತೆ. ಸ್ಮಾರ್ಟ್ ಫೋನ್​ಗಳ ದುನಿಯಾದಲ್ಲಿ ಈ ಐಫೋನ್​​ಗೆ ವಿಶಿಷ್ಟ ಸ್ಥಾನ. ಗೌಪ್ಯತೆ ಕಾಪಾಡುವಲ್ಲಿ ಇಷ್ಟು ದಿನ ಇದಕ್ಕೆ ಅಗ್ರಸ್ಥಾನ. ಹೀಗೆ ಸ್ಮಾರ್ಟ್ ಫೋನ್​ಗಳ ಜಗದಲ್ಲಿ ರಾಜನಂತ್ತಿದ್ದ ಐಫೋನ್​ ಮೇಲೂ ಇದೀಗ ಹ್ಯಾಕರ್ಸ್ ಕರಿನೆರಳು ಬಿದ್ದಿದೆ.

I-Phone, I-Pad​ ಮೇಲೂ ಹ್ಯಾಕರ್ಸ್ ಕರಿನೆರಳು.. ಬಚಾವ್ ಆಗಲು ನೀವು ಏನ್ಮಾಡಬೇಕು..?

ಐಫೋನ್ ಬರೀ ಪ್ರತಿಷ್ಠೆ ಮಾತ್ರವಲ್ಲ, ಅದರಲ್ಲಿದ್ದ ಮಾಹಿತಿಗಳು ತುಂಬಾ ಗೌಪ್ಯವಾಗಿಯೇ ಇರುತ್ತೆ ಅಂತಾನೆ ಇಷ್ಟು ದಿನ ಭಾವಿಸಲಾಗಿತ್ತು. ಇದೇ ಕಾರಣಕ್ಕೆ, ಮನೆಯ ಕಬೋರ್ಡ್​ನಲ್ಲಿ ವಸ್ತುಗಳನ್ನು ಜೋಡಿಸಿದಂತೆ, ಐಫೋನ್​ ಮೊಬೈಲ್​ನಲ್ಲಿ ಕೂಡ ಹಲವು ರಹಸ್ಯ ಮಾಹಿತಿಗಳನ್ನು ಗುಡ್ಡೆ ಹಾಕ್ತಿದ್ರು. ಆದ್ರೆ ಇದೀಗ ಎಲ್ಲವು ಉಲ್ಟಾ ಪಲ್ಟಾ..

ಇಷ್ಟು ದಿನ ಐಫೋನ್​ನಲ್ಲಿದ್ದ ಎಲ್ಲಾ ಮಾಹಿತಿಗಳು ರಹಸ್ಯವಾಗಿಯೇ ಇದೆ ಅಂತಾನೆ ಭಾವಿಸಲಾಗಿತ್ತು. ಇದ್ರೆ ಇದೀಗ ಜನರ ನಂಬಿಕೆಗೆ ಕೊಡಲಿ ಏಟು ಬಿದ್ದಿದೆ. ಇದೀಗ ಐಫೋನ್​ ಪ್ರಿಯರಿಗೂ ಶಾಕಿಂಗ್ ನ್ಯೂಸ್ ಎದುರಾಗಿದ್ದು, ಜನರ ನಂಬಿಕೆ ಹುಸಿಯಾಗುವ ಕಾಲ ಸನ್ನಿಹಿತವಾಗಿದೆ. ಯಾಕಂದ್ರೆ ನೀವು ಇಷ್ಟು ದಿನ ಐಫೋನ್​ನಲ್ಲಿ ರಹಸ್ಯವಾಗಿ ಬಚ್ಚಿಟ್ಟಿರುವ ರಹಸ್ಯ ಮಾಹಿತಿಗಳೆಲ್ಲವು ನಿಮಗೆ ಗೊತ್ತಿಲ್ಲದೆ ಹಾಗೆ ಸೋರಿಕೆಯಾಗಿರುವ ಕುರಿತು ಇದೀಗ ಗುಮಾನಿ ಎದ್ದಿದೆ.

ಐಫೋನ್​ ಮೇಲೆ ಕೂಡ ಬಿತ್ತು ಹ್ಯಾಕರ್ಸ್ ಕಣ್ಣು

ನಿಮಗೆ ಗೊತ್ತಿಲ್ಲದೆ ನಿಮ್ಮ ಮೊಬೈಲ್​ ಹ್ಯಾಕ್?

ಗೌಪ್ಯತೆ ಕಾಪಾಡುವಲ್ಲಿ ಅಗ್ರಸ್ಥಾನದಲ್ಲಿ ವಿರಾಜಮಾನವಾಗಿದ್ದ ಐಫೋನ್ ಗಳ ಮೇಲೂ ಜನರು ಡೌಟ್​ ಪಡುವ ಸ್ಥಿತಿ ನಿರ್ಮಾಣವಾಗಿದೆ. ಅದಕ್ಕೆ ಕಾರಣವಾಗಿದ್ದು​ ಇಂಡಿಯನ್ ಕಂಪ್ಯೂಟರ್ ಎಮರ್ಜನ್ಸಿ ರೆಸ್ಪಾನ್ಸ್ ಟೀಂ ಕೊಟ್ಟ ಎಚ್ಚರಿಕೆ. ಹೌದು.. ನಿಮ್ಮ ಕೈಯಲ್ಲಿರುವ ಐಫೋನ್​ಗೆ ನಿಮಗೆ ಗೊತ್ತಿಲ್ಲದ ಹಾಗೆ ಕಳ್ಳನೊಬ್ಬ ಸದ್ದಿಲ್ಲದೆ ಎಂಟ್ರಿ ಕೊಟ್ಟು ಬಿಟ್ಟಿದ್ದಾನೆ. ಆತ ಬರೀ ಕಳ್ಳ ಅಲ್ಲ, ಬಲು ಖತರ್ನಾಕ್ ಆಸಾಮಿ.

ಆತನದ್ದು ಏನಿದ್ರೂ ಲ್ಯಾಪ್ ಟಾಪ್ ಜೊತೆ ಆಟ, ಇಂಟರ್​ನೆಟ್ ಜೊತೆ ಒಡನಾಟ. ಹೀಗೆ ಇಂಟರ್​ನೆಟ್ ಎಂಬ ಮಾಯಾಜಾಲವನ್ನು ತಮ್ಮ ಬೆರಳ ಇಶಾರೆಯಲ್ಲಿ ಆಟವಾಡಿಸುವ ಹ್ಯಾಕರ್ಸ್​ಗಳು ಇದೀಗ ಐಫೋನ್​ನೊಳಗೂ ನುಸುಳಿ ಬಿಟ್ಟಿರುವ ಕುರಿತ ಸ್ಫೋಟಕ ಮಾಹಿತಿಗಳು ಹೊರ ಬಿದ್ದಿವೆ.

 

blank
ನಿಮ್ಮ ಐ ಫೋನ್, ಐ ಪ್ಯಾಡ್​​ ಬಗ್ಗೆ ಸ್ಫೋಟಕ ಮಾಹಿತಿ ಕನಿಷ್ಠ ಕಳೆದ ನಾಲ್ಕು ತಿಂಗಳಿಂದ ಸೋರಿಕೆಯಾಗಿರಬಹುದು ಅನ್ನೋ ಮಾಹಿತಿ ಇದೀಗ ಹೊರ ಬಿದ್ದಿದೆ. ನಿಮ್ಮ ಫೋನ್​​ ಅಥವಾ ಗ್ಯಾಜೆಟ್​ಗಳ ಮೆಮರಿ ಮೇಲೆ ಇದು ದಾಳಿ ಮಾಡಿರೋದ್ರಿಂದ ನೀವು ಸೇವ್ ಮಾಡಿಟ್ಟುಕೊಂಡಿರೋ ಮಾಹಿತಿಗಳೂ ಸೋರಿಕೆಯಾಗಿರುವ ಸಾಧ್ಯತೆ ಕೂಡ ಅಧಿಕವಾಗಿದೆ.

ಐ-ಪ್ಯಾಡ್​, ಐ-ಫೋನ್ ಅಷ್ಟೇ ಅಲ್ಲ ಐ-ಪೋಡ್​​ ಟಚ್​ ಸಹ ಹ್ಯಾಕ್​ ಆಗಿರಬಹುದು.. ನಿಮ್ಮ ಮಾಹಿತಿ ಸೋರಿಕೆಯಾಗಿರಬಹುದು.. ನಿಮಗೇ ಗೊತ್ತಾಗದಂತೆ ಹ್ಯಾಕರ್ಸ್​ ಮಿಕಗಳು ನುಸುಳಿದ್ದು, ಇದೇ ಕಾರಣದಿಂದಾಗಿ ನಿಮ್ಮ ಫೋನ್​​​ನಲ್ಲಿದ್ದ ಬಗ್​​​ಗಳಿಂದಾಗಿ ನಿಮ್ಮ ಫೋನೇ ಹ್ಯಾಕರ್​​ಗಳ ಬೆರಳ ತುದಿಗೆ ಹೋಗಿರೋ ಸಾಧ್ಯತೆ ಕೂಡ ದಟ್ಟವಾಗಿದೆ. ಈ ವಿಷಯ ಆ್ಯಪಲ್ ಕಂಪನಿಯ ಗಮನಕ್ಕೆ ಬರ್ತಿದ್ದಂಗೆ ಕಂಪನಿ ಕೂಡ ಎಚ್ಚೆತ್ತುಕೊಂಡಿದ್ದು,ತಮ್ಮ ಗ್ರಾಹಕರನ್ನು ಹ್ಯಾಕರ್ಸ್​ಗಳ ಹಾವಳಿಯಿಂದ ಸರ್ಪಗಾವಲು ಹಾಕಿ ರಕ್ಷಣೆ ಮಾಡಲು ಹೊಸ ಪ್ಲಾನ್​ ಮಾಡ್ಕೊಂಡಿದೆ.

ಹ್ಯಾಕರ್ಸ್​ ವಿರುದ್ಧ ಆ್ಯಪಲ್ ಕಂಪನಿ ರಣತಂತ್ರ..

ಆನ್​ಲೈನ್​ ಮಿಕಗಳ ವಿರುದ್ಧ ಹೊಸ ತಿರುಮಂತ್ರ

ಹೌದು, ಐಪೋನ್​ ಮೊಬೈಲ್​ಗಳ ಮೇಲೂ ಹ್ಯಾಕರ್ಸ್ ಕರಿನೆರಳು ಬಿದ್ದಿರುವ ಬಗ್ಗೆ ಶಂಕೆ ತಮ್ಮ ಗಮನಕ್ಕೆ ಬರ್ತಿದ್ದಂಗೆ ಕಂಪನಿ ಕೂಡ ಎಚ್ಚೆತ್ತುಕೊಂಡಿದೆ. ಅಲ್ಲದೇ ಖದೀಮರ ಕೈಯಿಂದ ತಮ್ಮ ಗ್ರಾಹಕರನ್ನು ರಕ್ಷಣೆ ಮಾಡಲು ಹೊಸ ರಣತಂತ್ರವನ್ನ ಕೂಡ ಹೂಡಿದೆ. ಆ್ಯಪಲ್ ಕಂಪನಿ ಈಗಾಗಲೇ ಆ್ಯಪಲ್​ IOS 14.7.1 ಅಪ್ಡೇಟ್​ ಬಿಡುಗಡೆ ಮಾಡಿದ್ದು, ಗ್ರಾಹಕರಲ್ಲಿ ಇದನ್ನು ಇನ್ ಸ್ಟಾಲ್​ ಮಾಡುವಂತೆ ಮನವಿ ಮಾಡಿದೆ. ಈ ಮೂಲಕ ಖದೀಮರ ವಿರುದ್ಧ ಆ್ಯಪ್ ಯುದ್ಧ ಸಾರಿದೆ.

ಹೊಸ ಅಪ್ಡೇಟ್ ಸ್ವಾಫ್ಟ್​ವೇರ್ ವಿಶೇಷತೆ ಏನು ಗೊತ್ತಾ?

ನಿಮ್ಮ ಕಳೆದ ಅಪ್ಡೇಟ್​​​ ವೇಳೆ ಕೆಲ ಬ್ಲೈಂಡ್​ ಸ್ಪಾಟ್​ಗಳು ಇದ್ದವು ಎನ್ನಲಾಗಿದ್ದು, ಅದನ್ನೇ ಹ್ಯಾಕರ್ಸ್ ಬಳಸಿರುವ ಸಾಧ್ಯತೆ ಇದೆ. ಇದು ಬಳಕೆದಾರರ ಗೌಪ್ಯತೆ ಮತ್ತು ಸೇಫ್ಟಿ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಹೆಚ್ಚಾಗಿದೆ. ಆದ್ದರಿಂದ ಕೇಂದ್ರ ಸರ್ಕಾರದ ಇಂಡಿಯನ್​ ಕಂಪ್ಯೂಟರ್ ಎಮರ್ಜನ್ಸಿ ರೆಸ್ಪಾನ್ಸ್ ಟೀಂ ಅತ್ಯಂತ ಮಹತ್ವದ ಎಚ್ಚರಿಕೆಯನ್ನು ಆ್ಯಪಲ್ ಬಳಕೆದಾರರಿಗೆ ನೀಡಿದೆ.

 

blank

 

ಕಂಪನಿ ಬಿಡುಗಡೆಮಾಡಿರುವ ಆ್ಯಪಲ್​ IOS 14.7.1 ಅಪ್ಡೇಟ್​ ಆ್ಯಪ್​ ಡೌನ್​ ಲೋಡ್​ ಮಾಡುವುದರಿಂದ, ಖದೀಮರ ಕೈಚಳಕದಿಂದ ತಮ್ಮನ್ನು ತಾವು ರಕ್ಷಣೆ ಮಾಡ್ಕೊಳ್ಳಬಹದು.ಯಾವ ಗ್ರಾಹಕರು ಆ್ಯಪಲ್​ IOS 14.7.1 ಅಪ್ಡೇಟ್​ ಡೌನ್​ ಲೋಡ್​ ಮಾಡಿ ಇನ್​ಸ್ಟಾಲ್ ಮಾಡಲು ಹಿಂದೇಟು ಹಾಕ್ತಾರೋ, ಅಂತವರು ತಮ್ಮ ಮನೆಯ ಕೀಯನ್ನು ಕಳ್ಳರ ಕೈಗೆ ಕೊಟ್ಟಂತೆ ಅನ್ನೋ ಮಾತುಗಳು ಕೂಡ ಕಂಪನಿಯ ಪಡಸಾಲೆಯಲ್ಲಿ ಕೇಳಿ ಬರ್ತಿದೆ. ಕೇಂದ್ರ ಸರ್ಕಾರದ ಇಂಡಿಯನ್​ ಕಂಪ್ಯೂಟರ್ ಎಮರ್ಜನ್ಸಿ ರೆಸ್ಪಾನ್ಸ್ ಟೀಂ ಕೂಡ ಈ ಬಗ್ಗೆ ಎಚ್ಚರಿಕೆಯ ಸಂದೇಶವನ್ನು ಕೂಡ ರವಾನಿಸಿದೆ.

ಪೆಗಾಸಸ್​ ನಿಂದ ಬಯಲಾಯ್ತು ‘ಹ್ಯಾಕರ್ಸ್ ವೈರಸ್’?

ಸಿಗ್ನಲ್​ ಆ್ಯಪ್​ ಬಳಕೆದಾರರಿಗೂ ಕಾದಿದ್ಯಾ ಶಾಕ್?

ಇಸ್ರೇಲ್​ನ ಎನ್​ಎಸ್​ಒ ಅನ್ನೋ ಸಂಸ್ಥೆಯ ಪೆಗಾಸಿಸ್ ಸಾಫ್ಟ್​ವೇರ್ ಬಳಸಿ ಗೂಢಾಚಾರಿಕೆಗೆ ಸಹಾಯ ಮಾಡಿರುವ ಮ್ಯಾಟರ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಂಚಲನ ಮೂಡಿಸಿರುವ ನಂತರ, ಹ್ಯಾಕರ್ಸ್ ಕುರಿತ ಒಂದೊಂದೆ ರಹಸ್ಯಗಳು ಮರೆಯಿಂದ ತೆರೆಗೆ ಅಪ್ಪಳಿಸುತ್ತಿದೆ. ಪೆಗಸಸ್ ಗೂಢಾಚಾರಿ ಸಾಫ್ಟ್​ವೇರ್ ವಿವಾದ ಭುಗಿಲೆದ್ದ ಬೆನ್ನಲ್ಲೇ ಈಗ ಮತ್ತೊಂದು ಮಹತ್ವದ ಸಂಗತಿ ಬೆಳಕಿಗೆ ಬಂದಿದೆ.

ಅತ್ಯಂತ ಸೇಫ್​ ಎನ್ನಲಾಗಿದ್ದ ನಿಮ್ಮ 6 S ಮತ್ತು ನಂತರದ ಎಲ್ಲ ಐ-ಫೋನ್ ಮಾಡೆಲ್, ಐ-ಪ್ಯಾಡ್ ಪ್ರೋದ ಎಲ್ಲ ಮಾಡೆಲ್, ಐ-ಪ್ಯಾಡ್ ಏರ್-2, ಐ-ಪ್ಯಾಡ್ 5th Gen ಮತ್ತು ನಂತರದ ಎಲ್ಲ ಮಾಡೆಲ್, ಐ-ಪ್ಯಾಡ್ ಮಿನಿ-4 ಮತ್ತು ನಂತರದ ಎಲ್ಲ ಮಾಡೆಲ್​ಗಳು, 7th Gen i-Pod, ಟಚ್, I-Mac ​​ಎಲ್ಲಕ್ಕೂ ಬಗ್​ ಎಫೆಕ್ಟ್​​ ಆಗಿದ್ದರ ಕುರಿತು ಇಂಡಿಯನ್​ ಕಂಪ್ಯೂಟರ್ ಎಮರ್ಜನ್ಸಿ ರೆಸ್ಪಾನ್ಸ್ ಟೀಂ ಅನುಮಾನ ಹೊರ ಹಾಕಿದೆ.

 

blank

 

ಕಳೆದ 4 ತಿಂಗಳ ಹಿಂದೆನೇ ಈ ಸೈಬರ್ ಕ್ರಿಮಿಗಳು ಇಂತಹ ಕೃತ್ಯ ನಡೆದಿರುವ ಕುರಿತು ಶಂಕೆ ಕೂಡ ವ್ಯಕ್ತವಾಗ್ತಿದೆ. ಬರೀ, ಆ್ಯಪಲ್ ಬಳಕೆದಾರರು ಮಾತ್ರ ಅಲ್ಲ. ಸಿಗ್ನಲ್​ ಆ್ಯಪ್ ಬಳಕೆದಾರರ ಮಾಹಿತಿಗಳು ಸೋರಿಕೆಯಾಗಿರುವ ಕುರಿತು ಕೂಡ ಇದೀಗ ಅನುಮಾನ ಮೂಡಿದೆ. ಸಿಗ್ನಲ್ ಆ್ಯಪ್​​ ಮೇಲೂ ಕೂಡ ಹ್ಯಾಕರ್ಸ್​ ತಮ್ಮ ಕರಾಳ ಹಸ್ತವನ್ನು ಚಾಚಿರುವ ಕುರಿತು ಅನುಮಾನ ಮೂಡಿದೆ. ಒಟ್ಟಿನಲ್ಲಿ ಹೇಳೋದಾದ್ರೆ, ಈ ಹ್ಯಾಕರ್ಸ್​ಗಳೇ ಹಾಗೆ. ಇವರು ಒಂಥರಾ ಕೊರೊನಾ ವೈರಸ್ ಇದ್ದಂಗೆ. ವೇಷ ಬದಲಿಸಿ, ಬಣ್ಣ ಬದಲಿಸಿ ಅಟ್ಯಾಕ್ ಮಾಡಿ ಬಿಡ್ತಾರೆ.

ವ್ಯಕ್ತಿಯಲ್ಲಿ ಜ್ವರ, ಶೀತದಂತಹ ಲಕ್ಷಣಗಳು ಕಂಡು ಬಂದ ನಂತರವೇ,ಕೊರೊನಾ ವೈರಸ್ ತನ್ನ ಮೂಗಿನೊಳಗೆ ಹೊಕ್ಕಿದೆ ಅನ್ನೋದು ಹೇಗೆ ಗೊತ್ತಾಗುತ್ತೋ,ಅದೇ ರೀತಿ ಮೊಬೈಲ್​ ನಲ್ಲಾಗುವ ಕೆಲ ಬದಲಾವಣೆಗಳೇ ನಮ್ಮ ಮೊಬೈಲ್​ನೊಳಗೆ ಹ್ಯಾಕರ್ಸ್​ ಕಳ್ಳ ಹೆಜ್ಜೆ ಇಟ್ಟಿದ್ದಾರೆ ಅನ್ನೋದು ಗೊತ್ತಾಗೋದು. ಹೀಗೆ ಸದ್ದಿಲ್ಲದೆ ಎಂಟ್ರಿ ಕೊಡುವ ಹ್ಯಾಕರ್ಸ್​ ಬಗ್ಗೆ ನಾವು ಸದಾ ಎಚ್ಚರದ ಹೆಜ್ಜೆಗಳನ್ನೇ ಇಡಬೇಕಾಗುತ್ತದೆ. ಇಲ್ಲವಾದ್ರೆ ನಾವು ಮಾಡುವ ಕೇರ್​ಲೆಸ್​ಗೆ ಮುಂದೆ ತಕ್ಕ ಬೆಲೆ ಕೂಡ ತೆರಬೇಕಾಗುತ್ತದೆ.

blank

ಪೆಗಾಸಸ್ ಗೂಢಾಚಾರಿಕೆ ವಿಷ್ಯಾ ಹೊರ ಬರ್ತಿದ್ದಂಗೆ ಒಂದೊಂದೆ ರಹಸ್ಯಗಳು ಹೊರ ಬರ್ತಿವೆ. ಕೊರೊನಾ ವೈರಸ್​ನಂತ ವೆರೈಟಿ ವೆರೈಟಿ ರೂಪತಾಳಿ ಅಟ್ಯಾಕ್ ಮಾಡ್ತಿರುವ ಈ ಹ್ಯಾಕರ್ಸ್​, ಇನ್ನು ಯಾವ್ಯಾವ ಸ್ಮಾರ್ಟ್​​ಫೋನ್​ಗಳ ಒಳಗೆ ನುಗ್ಗಿದ್ದಾರೋ ಅನ್ನೋದು ಮುಂದಿನ ದಿನಗಳಲ್ಲಿ ಗೊತ್ತಾಗಬೇಕಾಗಿದೆ.. ಆದ್ರೆ ಜನರು ಮಾತ್ರ ಅತ್ಯಂತ ಎಚ್ಚರಿಕೆಯಿಂದ ಸ್ಮಾರ್ಟ್​ಫೋನ್ ಬಳಸೋದು ಉತ್ತಮ.

ಇದನ್ನೂ ಓದಿ: ನೀವು I-Phone, I-Pad ಬಳಕೆದಾರರಾ? ಹಾಗಿದ್ರೆ ತಕ್ಷಣ ಹೀಗೆ ಮಾಡಿ.. ಇಲ್ಲದಿದ್ದರೆ ನಿಮಗೆ ಬಿಗ್ ಶಾಕ್..!

The post I-Phone, I-Pad​ ಮೇಲೂ ಹ್ಯಾಕರ್ಸ್ ಕರಿನೆರಳು.. ಬಚಾವ್ ಆಗಲು ನೀವು ಏನ್ಮಾಡಬೇಕು..? appeared first on News First Kannada.

Source: newsfirstlive.com

Source link