ಸೋಷಿಯಲ್​ ಮೀಡಿಯಾದಲ್ಲಿ ‘ಅಕ್ಕಿನೇನಿ’ ಹೆಸರು ಕೈ ಬಿಟ್ಟು ಶಾಕ್​ ಕೊಟ್ಟ ಸಮಂತಾ

ಸೋಷಿಯಲ್​ ಮೀಡಿಯಾದಲ್ಲಿ ‘ಅಕ್ಕಿನೇನಿ’ ಹೆಸರು ಕೈ ಬಿಟ್ಟು ಶಾಕ್​ ಕೊಟ್ಟ ಸಮಂತಾ

‘ಎಮಾಯ ಚೇಶಾವೆ’ ಸಿನಿಮಾದೊಂದಿಗೆ ಟಾಲಿವುಡ್​ ಅಂಗಳಕ್ಕೆ ಕಾಲಿಟ್ಟಿದ್ದ ಸಮಂತಾ ಸರಿ ಸುಮಾರು 10 ವರ್ಷ ಸ್ಟಾರ್ ಹಿರೋಯಿನ್ ಆಗಿ ಗುರುತಿಸಿಕೊಂಡಿದ್ದರು. ಮದುವೆ ಮುನ್ನ ಗ್ಲಾಮರ್ಸ್​ ರೋಲ್ಸ್​​ನಲ್ಲಿ ಕಾಣಿಸಿಕೊಂಡಿದ್ದರು, ಆ ಬಳಿಕ ಪ್ರಯೋಗಾತ್ಮಕ, ಅಭಿನಯಕ್ಕೆ ಒತ್ತು ನೀಡುವತ್ತ ಗಮನ ಹರಿಸಿದ್ದರು. ಆದರೆ ಅಕ್ಕಿನೇನಿ ಕುಟುಂಬದ ಸೊಸೆ ಸದ್ಯ ಏಕಾಏಕಿ ಸಾಮಾಜಿಕ ಜಾಲತಾಣ ಅಕೌಂಟ್​​​​ನಲ್ಲಿ ಅಕ್ಕಿನೇನಿ ಹೆಸರನ್ನು ಕೈ ಬಿಟ್ಟಿ ಅಭಿಮಾನಿಗಳಿಗೆ ಶಾಕ್​​ ನೀಡಿದ್ದಾರೆ.

blank

ಕೆಲವು ವರ್ಷ ದೇಟಿಂಗ್​ ನಡೆಸಿದ ಬಳಿಕ 2017ರಲ್ಲಿ ಸಮಂತಾ, ನಾಗಚೈತನ್ಯ ಅಕ್ಕಿನೇನಿ ಅವರ ಕೈ ಹಿಡಿದಿದ್ರು. ಮದುವೆಯಾದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಹೆಸರಿನೊಂದಿಗೆ ಅಕ್ಕಿನೇನಿ ಹೆಸರನ್ನು ಸೇರಿಸಿಕೊಂಡಿದ್ದರು. ಸ್ಟಾರ್ ಹಿರೋಯಿನ್ ಆದ್ರು ಮದುವೆಯಾದ ಕೂಡಲೇ ಪತಿಯ ಮನೆ ಹೆಸರನ್ನು ತನ್ನ ಹೆಸರಿನೊಂದಿಗೆ ಸೇರಿಸಿಕೊಂಡಿದ್ದು, ಅಕ್ಕಿನೇನಿ ಅಭಿಮಾನಿಗಳಿಗೆ ಸಾಕಷ್ಟು ಖುಷಿ ಕೊಟ್ಟಿತ್ತು.

blank

ಆದ್ರೆ, ಏಕಾಏಕಿ ಟ್ವಿಟ್ಟರ್​​​, ಇನ್​​ಸ್ಟಾಗ್ರಾಮ್​ನಿಂದ ಅಕ್ಕಿನೇನಿ ಎಂಬ ಹೆಸರನ್ನು ಕೈಬಿಟ್ಟಿರುವುದು ಸದ್ಯ ಅಭಿಮಾನಿಗಳಿಗೆ ಶಾಕ್​ ನೀಡಿದ್ದು, ಸಮಂತಾ ಏಕೆ ಹೀಗೆ ಮಾಡಿದ್ರು ಎಂದು ತಲೆ ಕೆಡಿಸಿಕೊಂಡಿದ್ದಾರೆ. ಈ ನಡೆಯ ಹಿಂದೆ ವೈಯುಕ್ತಿಕ ಕಾರಣಗಳಿದ್ಯಾ? ಎಂಬ ಚರ್ಚೆ ಸಾಮಾಜಿಕ ಜಾಲತಾಣದಲ್ಲಿ ಜೋರಾಗಿದೆ. ಇನ್ನು ಸಿನಿಮಾ ವಿಚಾರಕ್ಕೆ ಬಂದರೆ, ದಿ ಫ್ಯಾಮಿಲಿ ಮ್ಯಾನ್​​ 2 ವೆಬ್​​ ಸಿರೀಸ್​​​​ನಲ್ಲಿ ನಟಿಸುವ ಮೂಲಕ ಸಮಂತಾ ಪ್ರೇಕ್ಷಕರಿಂದ ಸಾಕಷ್ಟು ಮೆಚ್ಚುಗೆ ಪಡೆದುಕೊಂಡಿದ್ದರು. ಸದ್ಯ ಅವರು ಟಾಲಿವುಡ್​ ಸ್ಟಾರ್ ನಿರ್ದೇಶಕ ಗುಣಶೇಖರ್ ಅವರ ಶಾಕುಂತಲಂ ಎಂಬ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

blank

blank

 

View this post on Instagram

 

A post shared by S (@samantharuthprabhuoffl)

The post ಸೋಷಿಯಲ್​ ಮೀಡಿಯಾದಲ್ಲಿ ‘ಅಕ್ಕಿನೇನಿ’ ಹೆಸರು ಕೈ ಬಿಟ್ಟು ಶಾಕ್​ ಕೊಟ್ಟ ಸಮಂತಾ appeared first on News First Kannada.

Source: newsfirstlive.com

Source link