ಅಶೋಕ್ ಜತೆ ವೈಮನಸ್ಸು ಇಲ್ಲ- ವಿ ಸೋಮಣ್ಣ

– ಅಣ್ಣ, ತಮ್ಮ ಕಿತ್ತಾಡೋದು ಸಹಜ

ಬೆಂಗಳೂರು: ಮಾಜಿ ಸಚಿವರಾದ ವಿ ಸೋಮಣ್ಣ ಮತ್ತು ಆರ್ ಅಶೋಕ್ ಮಧ್ಯೆ ಜಟಾಪಟಿ ವಿಚಾರವಾಗಿ ಪಬ್ಲಿಕ್ ಟಿವಿಗೆ ಮಾಜಿ ಸಚಿವ ವಿ ಸೋಮಣ್ಣ, ಏನೂ ಆಗಿಲ್ಲ, ಅಶೋಕ್ ಜತೆ ವೈಮನಸ್ಸು ಇಲ್ಲ ಎಂದು ಸ್ಪಷ್ಟೀಕರಣ ಕೊಟ್ಟಿದ್ದಾರೆ.

ಪಬ್ಲಿಕ್ ಟವಿ ಜೊತೆಗೆ ಮಾತನಾಡಿದ ಅವರು, ನಾನು ಮಾತಾಡಿದ್ದು ಯಾವುದೋ ಕಾಲದಲ್ಲಿ. ಅನೇಕ ಸಲ ನನ್ನದೇ ಆದ ದೃಷ್ಟಿಕೋನದಲ್ಲಿರ್ತೇನೆ. ನಾನು ರಾಜಕೀಯಕ್ಕೆ ಬಂದಾಗ ಅಶೋಕ್ ಇನ್ನೂ ಮಂತ್ರಿ ಆಗಿರ್ಲಿಲ್ಲ, ಕೆಲವೊಂದು ವೇಳೆ ಕೆಲವು ವಿಚಾರ ಹೇಳಬೇಕಾಗುತ್ತದೆ. ಹೇಳಿದೀನಿ ಅಷ್ಟೇ. ಅಶೋಕ್ ಜತೆ ವೈಮನಸ್ಯ ಇಲ್ಲ. ನಾನು ರಾಜಕಾರಣ ಶುರು ಮಾಡಿ ಐವತ್ತು ವರ್ಷ ಆಯ್ತು, ನಾನು ಯಾವುದೇ ಸ್ಥಾನದ ಆಕಾಂಕ್ಷಿ ಅಲ್ಲ. ಪಕ್ಷ ಜವಾಬ್ದಾರಿ ಕೊಟ್ರೆ ನಿಭಾಯಿಸ್ತೇನೆ ಎಂದು ತಿಳಿಸಿದ್ದಾರೆ.

ಅಧಿಕಾರ ಕೊಡೋದು ಸಿಎಂ, ವರಿಷ್ಠರ ಪರಮಾಧಿಕಾರವಾಗಿದೆ. ಕೊಡೋದು ಬಿಡೋದು ವರಿಷ್ಠರಿಗೆ ಬಿಟ್ಟ ವಿಚಾರವಾಗಿದೆ. ಬಿಜೆಪಿಗೆ ಬಂದು 12 ವರ್ಷ ಆಗಿದೆ. ನಾನು ದೆಹಲಿಗೆ ಹೋಗಲ್ಲ, ಅದರ ಅಗತ್ಯ ಇಲ್ಲ, ಮಂತ್ರಿಯಾದ ಮೇಲೆ ಒಂದೇ ಸಲ ದೆಹಲಿಗೆ ಹೋಗಿದ್ದು, ಅಶೋಕ್ ಜತೆ ಇದ್ದ ವೈಮನಸ್ಸು ನಾಲ್ಕು ಗೋಡೆ ಮಧ್ಯೆ ಮಾತಾಡಿದೀನಿ. ಅಶೋಕ್ ಜತೆ ವೈಮನಸ್ಸು ತಿಳಿಯಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಪ್ರತಿ ಟಿಬೆಟಿಯನ್ ಕುಟುಂಬದ ಓರ್ವ ಚೀನಾ ಸೇನೆಗೆ ಸೇರ್ಪಡೆ

ಅಣ್ಣತಮ್ಮ ಕಿತ್ತಾಡೋದು ಸಹಜವಾಗಿದೆ. ಸಚಿವ ಸಂಪುಟ ಸಂದರ್ಭದಲ್ಲ ಇದು ಒಂದು ವರ್ಷದ ಹಿಂದೆ ಅಶೋಕ್ ಜತೆ ಫೋನಿನಲ್ಲಿ ಮಾತಾಡಿದ್ದಾಗಿದೆ. ಈಗ ಮಾತಾಡಿದ್ದಲ್ಲ, ನನ್ನ ಅಶೋಕ್ ಮಧ್ಯೆ ಆಸ್ತಿ ಪಾಸ್ತಿ ಜಗಳ ಇಲ್ಲ. ಅಶೋಕ್ ಜತೆ ಮಾತಾಡಿದ್ದು ಯಾವಾಗಲೋ ಆಗಿದೆ. ನನ್ನ ಅಶೋಕ್ ಮಧ್ಯೆ ವೈಯಕ್ತಿಕ ದ್ವೇಷ ಇಲ್ಲ, ನನ್ನ ಅಶೋಕ್ ಸ್ನೇಹ 35 ವರ್ಷ ಹಳೇಯದಾಗಿದೆ. ಯಾವುದೋ ಸಂದರ್ಭದಲ್ಲಿ ಅಶೋಕ್ ಜೊತೆ ಮಜಾಕ್ಕಾಗಿ ಹೀಗೆ ಮಾತಾಡಿದ್ದೆ. ಅದನ್ನೇ ನೀವು ನಮ್ಮಿಬ್ಬರ ಮಧ್ಯೆ ಹುಳಿ ಹಿಂಡೋದು ಬೇಡ ಎಂದು ಅಶೋಕ್ ಜತೆ ಫೋನ್ ಕರೆ ವಿಚಾರಕ್ಕೆ ಸೋಮಣ್ಣ ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ: ನಗರದಲ್ಲಿ ಕೋವಿಡ್ ಮೂರನೇ ಅಲೆ ಆರಂಭದ ಆತಂಕ- ಸೋಂಕಿತರ ಸಂಪರ್ಕಿತರಲ್ಲೂ ಹೆಚ್ಚಿದ ಪಾಸಿಟಿವ್ ಪ್ರಕರಣ

ಜಗದೀಶ್ ಶೆಟ್ಟರ್ ನಿರ್ಧಾರ ನಾನು ಸ್ವಾಗತಿಸುತ್ತೇನೆ. ಶೆಟ್ಟರ್ ರಾಷ್ಟ್ರಕ್ಕೆ ಒಂದು ಸಂದೇಶ ಕೊಟ್ಟಿದ್ದಾರೆ. ಯಡಿಯೂರಪ್ಪ ಸಿಎಂ ಆದಾಗಲೇ ಶೆಟ್ಟರ್ ಅವರಿಗೆ ಸಲಹೆ ಕೊಟ್ಟಿದ್ದೆ. ನೀವು ಹಿರಿಯರು, ಸಿಎಂ ಆಗಿದ್ದವರು ಸಚಿವರಾಗೋದು ಸರಿಯಲ್ಲ ಅಂತ ಆಗಲೇ ಸಲಹೆ ಶೆಟ್ಟರ್ ಅವರಿಗೆ ಕೊಟ್ಟಿದ್ದೆನೆ. ಕೆಲವು ಸಂದರ್ಭದಲ್ಲಿ ಕೆಲವು ವಿಚಾರ ನಾನು ನಿಷ್ಠುರವಾಗಿ ಹೇಳ್ತೀನಿ, ಶೆಟ್ಟರ್ ಇವತ್ತು ಕೈಗೊಂಡ ನಿರ್ಧಾರವನ್ನು ಯಡಿಯೂರಪ್ಪ ಸಿಎಂ ಆಗಿದ್ದಾಗಲೇ ಕೈಗೊಳ್ಳಿ ಅಂದಿದ್ದೆ. ಯಡಿಯೂರಪ್ಪ ಮುತ್ಸದ್ಧಿ, ತಮಗಿಂತ ಹಿರಿಯರು ಅಂತ ಶೆಟ್ಟರ್ ಮಂತ್ರಿಯಾದರು. ಉಳಿದ ಹಿರಿಯರ ವಿಚಾರ ಹೈಕಮಾಂಡ್ ನೋಡ್ಕೊಳ್ಳುತ್ತದೆ. ಹಿರಿಯರೂ ಇರ್ಬೇಕು, ಕಿರಿಯರೂ ಇರ್ಬೇಕು ಬೊಮ್ಮಾಯಿ ನಾನು ಆತ್ಮೀಯರು, ಪಟೇಲರ ಸರ್ಕಾರದಲ್ಲಿ ನಾನು ಮಂತ್ರಿ ಆಗಿದ್ದೆ. ಬೊಮ್ಮಾಯಿ ರಾಜಕೀಯ ಕಾರ್ಯದರ್ಶಿ ಆಗಿದ್ದರು. ಬೊಮ್ಮಾಯಿಯವರಿಗೆ ನಮ್ಮ ಸಹಕಾರ ಇರುತ್ತದೆ ಎಂದಿದ್ದಾರೆ.

The post ಅಶೋಕ್ ಜತೆ ವೈಮನಸ್ಸು ಇಲ್ಲ- ವಿ ಸೋಮಣ್ಣ appeared first on Public TV.

Source: publictv.in

Source link