ವಾಯುನೆಲೆ ಮೇಲೆ ಡ್ರೋಣ್ ಅಟ್ಯಾಕ್; ಜಮ್ಮು-ಕಾಶ್ಮೀರದ 14 ಕಡೆ NIA ದಾಳಿ 

ವಾಯುನೆಲೆ ಮೇಲೆ ಡ್ರೋಣ್ ಅಟ್ಯಾಕ್; ಜಮ್ಮು-ಕಾಶ್ಮೀರದ 14 ಕಡೆ NIA ದಾಳಿ 

ನವದೆಹಲಿ: ಜಮ್ಮು-ಕಾಶ್ಮೀರದ ಶೋಪಿಯಾನ, ಅನಂತನಾಗ್, ಬಿನಿಹಲ್, ಜಮ್ಮು ಸೇರಿದಂತೆ 14 ಕಡೆಗಳಲ್ಲಿ ರಾಷ್ಟ್ರಿಯ ತನಿಖಾ ದಳ (ಎನ್​ಐಎ) ದಾಳಿ ಮಾಡಿದೆ. ಜಮ್ಮುವಿನ ವಾಯು ನೆಲೆ ಮೇಲೆ ದಾಳಿ ಹಾಗೂ ಗಡಿಯಲ್ಲಿ ಪಾಕಿಸ್ತಾನದ ಡ್ರೋಣ ಹಾರಾಡಿದ ಬಳಿಕ ತನಿಖೆಯ ಭಾಗವಾಗಿ ಎನ್​ಐಎ ದಾಳಿ ಮಾಡಿದೆ.

ಜೂನ್ 27 ರಂದು ಉಗ್ರರು ಜಮ್ಮುವಿನ ವಾಯು ನೆಲೆ ಮೇಲೆ ಡ್ರೋಣ್​ ದಾಳಿ ನಡೆಸಿ ಉಗ್ರರು ವಿಧ್ವಂಸಕ ಕೃತ್ಯ ಮರೆದಿದ್ದರು. ಈ ಕೃತ್ಯದಲ್ಲಿ ಇಬ್ಬರು ಎಐಎಫ್​ ಯೋಧರು ಗಾಯಗೊಂಡಿದ್ದರು. ಈ ಘಟನೆ ನಡೆದ ಎರಡು ವಾರದ ಬಳಿಕ ಗಡಿ ಭಾಗದಲ್ಲಿ ಡ್ರೋಣ್​ಗಳು ಹಾರಾಟ ನಡೆಸಿದ್ದವು. ಘಟನೆ ಬಳಿಕ ಮಾತನಾಡಿದ್ದ ಲೆಫ್ಟಿನೆಂಟ್ ಜನರಲ್, ಜಮ್ಮುವಿನಲ್ಲಿ ನಡೆದ ಡ್ರೋಣ್ ದಾಳಿಯಲ್ಲಿ ಪಾಕಿಸ್ತಾನ ಮೂಲದ ಜೈಷ್ ಮತ್ತು ಲಷ್ಕರ್ ಉಗ್ರರ ಕೈವಾಡ ಇರೋದು ಸೂಚಿಸುತ್ತಿದೆ ಎಂದಿದ್ದರು.

ಇತ್ತ ಎಲ್​​​​​​​​​​ಎಸಿಯಲ್ಲಿ ಚೀನಾ ಅತ್ತ ಎಲ್​​ಒಸಿ ಕಡೆಯಿಂದ ಪಾಕ್​ ಬಾಲ ಬಿಚ್ಚತೊಡಗಿವೆ. ಅತ್ತ ಪಾಕ್​ ಆಕ್ರಮಿತ ಕಾಶ್ಮೀರದಲ್ಲಿ ಪಾಕಿಸ್ತಾನ ಚುನಾವಣೆ ನಡೆಸಿದ್ರೆ ಇತ್ತ ಚೀನಾ-ಪಾಕಿಸ್ತಾನ ಎಕನಾಮಿಕ್ ಕಾರಿಡಾರ್ ಯೋಜನೆಗೆ ಚೀನಾ ಮುಂದಾಗಿದೆ. ಸದ್ಯ ಎರಡೂ ದೇಶಗಳಿಗೂ ಖಡಕ್ ಸಂದೇಶ ರವಾನಿಸಿರುವ ಭಾರತ, ಪಿಒಕೆ ತೊರೆಯುವಂತೆ ಪಾಕ್​​ಗೆ ಮೊನ್ನೆ ವಾರ್ನಿಂಗ್ ಕೊಟ್ಟಿದೆ.

The post ವಾಯುನೆಲೆ ಮೇಲೆ ಡ್ರೋಣ್ ಅಟ್ಯಾಕ್; ಜಮ್ಮು-ಕಾಶ್ಮೀರದ 14 ಕಡೆ NIA ದಾಳಿ  appeared first on News First Kannada.

Source: newsfirstlive.com

Source link