ಪ್ರಾಕೃತಿಕ ವಿಕೋಪಕ್ಕೆ ನಲುಗಿದ ಬಾಂಗ್ಲಾ & ಆಫ್ಘಾನ್; 2500ಕ್ಕೂ ಅಧಿಕ ನಿರಾಶ್ರಿತ ಶಿಬಿರಗಳು ನೆಲಸಮ

ಪ್ರಾಕೃತಿಕ ವಿಕೋಪಕ್ಕೆ ನಲುಗಿದ ಬಾಂಗ್ಲಾ & ಆಫ್ಘಾನ್; 2500ಕ್ಕೂ ಅಧಿಕ ನಿರಾಶ್ರಿತ ಶಿಬಿರಗಳು ನೆಲಸಮ

ದಕ್ಷಿಣ ಬಾಂಗ್ಲಾ ಹಾಗು ಅಫ್ಘಾನಿಸ್ಥಾನದಲ್ಲಿ ಪ್ರಕೃತಿ ವಿಕೃತ ರೂಪ ತಾಳಿದೆ. ಪ್ರವಾಹದ ಭೀಕರತೆಗೆ ಜನರ ಬದುಕೇ ಕೊಚ್ಚಿ ಹೋಗಿವೆ. ಆಶ್ರಯವಾಗಿದ್ದ ಶಿಬಿರಗಳು, ಮನೆಗಳು ಕಣ್ಣೆದುರೆ ನಾಶವಾಗ್ತಿವೆ. ಜಲಾಸುರ ಬೀಸಿದ ಜಲವ್ಯೂಹಕ್ಕೆ ಸಿಲುಕಿ ಕುಟುಂಬಸ್ಥರು ಕಣ್ಣೆದುರೇ ಪ್ರಾಣ ಕಳ್ಕೊತ್ತಿದ್ದಾರೆ. ದಕ್ಷಿಣ ಬಾಂಗ್ಲಾ ಹಾಗೂ ಅಫ್ಘಾನಿಸ್ಥಾನದಲ್ಲಿ ಉಂಟಾಗಿರುವ ಪ್ರವಾಹದ ಕುರಿತ ಸ್ಪೆಷಲ್ ವರದಿ ಇಲ್ಲಿದೆ.

ದಕ್ಷಿಣ ಬಾಂಗ್ಲಾ ಹಾಗೂ ಅಫ್ಘಾನಿಸ್ಥಾನದಲ್ಲಿ ಉಂಟಾಗಿರುವ ಪ್ರವಾಹ ಹತ್ತಾರು ಅವಾಂತರಗಳನ್ನೇ ಸೃಷ್ಟಿಸಿ ಬಿಟ್ಟಿದೆ. ವರುಣ ಅಬ್ಬರಿಸುತ್ತಿದ್ದಾನೆ. ನದಿಯ ಒಡಲಲ್ಲಿದ್ದ ನೀರು ರೋಹಿಂಗ್ಯಾ ನಿರಾಶ್ರಿತರ ಶಿಬಿರಗಳಿಗೆ ನುಗ್ಗಿ ಸರ್ವನಾಶದ ರಣ ಕಹಳೆ ಮೊಳಗಿಸಿದೆ. ಪ್ರವಾಹ ಭೋರ್ಗರೆಯುತ್ತಿದ್ದು, ನೀರಿನ ಅಬ್ಬರವನ್ನ ಎದುರಿಸಲಾಗದೆ ಒಂದೊಂದೆ ಪ್ರದೇಶಗಳು ಶರಣಾಗುತ್ತಿವೆ. ಭೀಕರ ಪ್ರವಾಹ ದಕ್ಷಿಣ ಬಾಂಗ್ಲಾದೇಶದ ಬುಡನೇ ಅಲುಗಾಡಿಸಿ ಬಿಟ್ಟಿವೆ.

ನಿಲ್ಲಲು ನೆಲೆ ಇಲ್ಲ, ಹೋಗಲು ದಾರಿ ಇಲ್ಲ, ನೀರಿನ ನಡುವೆ ನಿಂತು ಉಸಿರಿಗಾಗಿ ಹೋರಾಟ. ಕಣ್ಣಾಯಿಸಿದಲ್ಲೆಲ್ಲ ಕಣ್ಣೀರ ದರ್ಶನ. ಪ್ರವಾಹದ ಸುಳಿಯಲ್ಲಿ ಸಿಲುಕಿ ನಿರಾಶ್ರಿತರ ಪರದಾಟ. ದಕ್ಷಿಣ ಬಾಂಗ್ಲಾದೇಶದಲ್ಲಿ ಕಂಡು ಬರುತ್ತಿರುವ ಸದ್ಯದ ಪರಿಸ್ಥಿತಿ ಇದಾಗಿದೆ.

Camp settlements in Cox's Bazar Bangladesh have been submerged by dangerous monsoon floods, claiming lives and displacing people from their homes.

ದಕ್ಷಿಣ ಬಾಂಗ್ಲಾ ದೇಶದ ಕಾಕ್ಸ್ಬಜಾರ್ಜಿಯಲ್ಲಿ ಒಂದೇ ದಿನ 30 ಸೆ.ಮೀ. ಮಳೆಯಾಗಿದೆ. ವರುಣನು ಅಬ್ಬರಿಸಿದ ಪರಿಣಾಮ ಪ್ರವಾಹ ಉಂಟಾಗಿದ್ದು, ಹಲವು ಅವಾಂತರಗಳೇ ಸೃಷ್ಟಿಯಾಗಿದೆ. ಜಲವ್ಯೂಹದಲ್ಲಿ ಸಿಲುಕಿ ಜನರು ಪರದಾಡುತ್ತಿದ್ದಾರೆ. ತಾವು ಕಷ್ಟ ಪಟ್ಟು ನಿರ್ಮಿಸಿದ ಮನೆಗಳನ್ನು ಪ್ರವಾಹವು ತನ್ನ ಒಡಲಿಗೆ ಹಾಕಿಕೊಂಡು ಮುನ್ನುಗುತ್ತಿದ್ರೂ ಏನು ಮಾಡಲಾಗದ ಅಸಾಯಕ ಪರಿಸ್ಥಿತಿ ಅಲ್ಲಿಯ ಜನರದ್ದು.

ಬಾಂಗ್ಲಾದಲ್ಲಿ ಮಳೆಯ ಪ್ರಪಾತ – ಪ್ರವಾಹದ ಹೊಡೆತ..

2500ಕ್ಕೂ ಅಧಿಕ ನಿರಾಶ್ರಿತರ ಶಿಬಿರಗಳು ನೆಲ ಸಮ

ಮಳೆಯ ಪ್ರಪಾತ ನಡುವೆ ಪ್ರವಾಹದ ಹೊಡೆತಕ್ಕೆ ಸಿಲುಕಿ ಕಾಕ್ಸ್ಬಜಾರ್ಜಿಲ್ಲೆ ನಲುಗಿ ಹೋಗಿವೆ. ಜಲಾಸುರನ ರುದ್ರ ನರ್ತನಕ್ಕೆ ಸಿಲಕಿರುವ ಕಾಕ್ಸ್ಬಜಾರ್ಜಿಲ್ಲೆಯಲ್ಲಿ ಸರಿಸುಮಾರು ಎಂಟು ಲಕ್ಷ ರೊಹಿಂಗ್ಯಾ ನಿರಾಶ್ರಿತರು ವಾಸಿಸುತ್ತಿದ್ದಾರೆ. ಪ್ರವಾಹದ ಹೊಡೆತಕ್ಕೆ ಕಾಕ್ಸ್ಬಜಾರ್ಜಿಲ್ಲೆಯಲ್ಲಿರುವ 2500 ಕ್ಕೂ ಅಧಿಕ ನಿರಾಶ್ರಿತರ ಶಿಬಿರಗಳು ನೆಲಸಮವಾಗಿಬಿಟ್ಟಿದೆ. ಜನರು ತಮ್ಮ ಆಶ್ರಯಗಳನ್ನ ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ.

 

12 ಸಾವಿರ ನಿರಾಶ್ರಿತರಿಗೆ ಜಲ ಗಂಡಾತರ..

ಹತ್ತು ಸಾವಿರಕ್ಕೂ ಅಧಿಕ ಜನರ ಸ್ಥಳಾಂತರ

ಪ್ರವಾಹದ ಪ್ರಹಾರಕ್ಕೆ ತತ್ತರಿಸಿ ಹೋಗಿರುವ ಕಾಕ್ಸ್ಬಜಾರ್ಜಿಲ್ಲೆಯಲ್ಲಿರುವ ಸರಿಸುಮಾರು 12 ಸಾವಿರಕ್ಕೂ ಅಧಿಕ ನಿರಾಶ್ರಿತರಿಗೆ ಜಲ ಗಂಡಾತರ ಎದುರಾಗಿದ್ದು , ಹತ್ತು ಸಾವಿರಕ್ಕೂ ಅಧಿಕ ಜನರನ್ನು ಈಗಾಗಲೇ ಸ್ಥಳಾಂತರ ಮಾಡಲಾಗಿದೆ. ಕೆಲವರಿಗೆ ಪಕ್ಕದ ಶಿಬಿರಗಳಲ್ಲಿ ಆಶ್ರಯ ಕಲ್ಪಿಸಿದ್ರೆ, ಇನ್ನೂ ಕೆಲವರಿಗೆ ಸಮುದಾಯ ಭವನಗಳಲ್ಲಿ ಉಳಿಯಲು ವ್ಯವಸ್ಥೆ ಮಾಡಲಾಗಿದೆ. ಪ್ರವಾಹದಿಂದ ಈಗಾಗಲೇ 10 ಕ್ಕೂ ಹೆಚ್ಚು ಜನರು ಪ್ರಾಣ ಕಳ್ಕೊಂಡಿದ್ದು, ಹತ್ತಾರು ಜನರು ನಾಪತ್ತೆಯಾಗಿದ್ದಾರೆ. ಹಲವರು ಪ್ರವಾದಹಲ್ಲಿ ಕೊಚ್ಚಿ ಹೋಗಿರುವ ಸಾಧ್ಯತೆ ಇದೆ ಕೂಡ ಎನ್ನಲಾಗಿದೆ. ಇದೀಗ ಕಾಣೆಯಾದವರ ಹುಡುಕಾಟ ಕಾರ್ಯ ಕೂಡ ಮುಂದುವರೆದಿದೆ.

Bangladesh Red Crescent teams rescue survivors in floods swamping Cox's Bazar, Bangladesh.

ಪ್ರವಾಹದ ಭೀಕರತೆಗೆ ಹಲವರು ಕೆಸರು ಮಣ್ಣಿನಡಿಯಲ್ಲಿ ಸಿಲುಕಿರುವ ಸಾಧ್ಯತೆ ಕೂಡ ಇದ್ದು, ಅವರ ಹುಡುಕಾಟ ಕಾರ್ಯ ಕೂಡ ಮುಂದುವರೆದಿದೆ. ಪ್ರಕೃತಿಯ ಮುನಿಸಿನಿಂದ ಇದ್ದ ಆಶ್ರಯಗಳನ್ನು ಕಳ್ಕೊಂಡ ಜನರಿಗೆ ಇದೀಗ ದಿಕ್ಕೆ ತೋಚದಂತ್ತಾಗಿದೆ.

ಇದು ಅಂತ್ಯವಲ್ಲ ಆರಂಭ ಎಂದು ತಜ್ಞರ ಎಚ್ಚರಿಕೆ

ಈಗಾಗಲೇ ಕಾಕ್ಸ್ಬಜಾರ್ಜಿಲ್ಲೆ ಜಲದಾಳಿಗೆ ನಲುಗಿ ಹೋಗಿದೆ. ಇದ್ರ ಬೆನ್ನಲ್ಲೇ ತಜ್ಞರು ಮತ್ತೊಂದು ಎಚ್ಚರಿಕೆ ಕೊಟ್ಟಿದ್ದಾರೆ. ಮುಂದಿನದ ದಿನಗಳಲ್ಲಿ ಮಳೆಯ ಪ್ರಮಾಣ ಮತ್ತಷ್ಟು ಹೆಚ್ಚಾಗಲಿದ್ದು, ಎಚ್ಚರಿಕೆಯಲ್ಲಿರುವಂತೆ ಸೂಚನೆ ನೀಡಿದೆ. ಇದು ಜನರಲ್ಲಿ ಮತ್ತಷ್ಟು ಆತಂಕ ಸೃಷ್ಟಿಮಾಡಿದ್ದು, ಯಾವ ಸಂದರ್ಭದಲ್ಲಿ ಏನು ಅಪಾಯ ಕಾದಿದ್ಯೋ ಎಂಬ ಭಯದಲ್ಲಿ ಬದುಕುತ್ತಿದ್ದಾರೆ. ಮಳೆರಾಯನು ಮುಂದೆ ಇನ್ನೆಷ್ಟು ಅವಾಂತರಗಳನ್ನ ಸೃಷ್ಟಿಸಿ ಬಿಡ್ತಾನೆನ್ನುವ ಆತಂಕ ಜನರಲ್ಲಿ ಮನೆ ಮಾಡಿದೆ. ದಕ್ಷಿಣ ಬಾಂಗ್ಲಾದೇಶದ ಹಲವು ಪ್ರದೇಶಗಳು ಪ್ರಕೃತಿಯ ಪ್ರಕೋಪಕ್ಕೆ ನಲುಗಿ ಹೋದ್ರೆ, ಅತ್ತ ಬಾಂಗ್ಲಾ ನೆರೆ ರಾಷ್ಟ್ರ ಅಫ್ಘಾನಿಸ್ತಾನದಲ್ಲೂ ಕೂಡ ಪ್ರವಾಹ ನೂರಾರು ಜನರನ್ನು ಬಲಿ ಪಡೆದುಕೊಂಡಿದೆ.

 

ಆಫ್ಘಾನ್​ನಲ್ಲಿ ತಾಲಿಬಾನ್​ಗಳ ದಾಳಿ ಬೆನ್ನಲ್ಲೇ ಜಲದಾಳಿ..

ಭೀಕರ ಪ್ರವಾಹದಲ್ಲಿ ಸಿಲುಕಿ 150ಕ್ಕೂ ಅಧಿಕ ಜನರ ಸಾವು!

ಕಾರುಗಳು ಕಾಗದದ ದೋಣಿಯಾಗೆ ತೇಲುತ್ತಿವೆ. ರಸ್ತೆಗಳು ಜಲಮಯವಾಗಿವೆ. ತಾಲಿಬಾನ್​ಗಳ ಉಪಟಳದ ಬೆನ್ನಲ್ಲೇ ಅಫ್ಘಾನ್​ ಜನರಿಗೆ ಇದೀಗ ಜಲ ದಿಗ್ಬಂಧನ ಎದುರಾಗಿದೆ. ತಾಲಿಬಾನಿಗಳ ಅಟ್ಟಹಾಸದ ನಡುವೆ ಆಫ್ಘಾನ್​ ನೆಲದಲ್ಲಿ ವರುಣ ಕೂಡ ಅಬ್ಬರಿಸುತ್ತಿದ್ದು, ಜನರನ್ನು ಮತ್ತಷ್ಟು ಸಂಕಷ್ಟದ ಸುಳಿಗೆ ಸಿಲುಕಿಸಿ ಬಿಟ್ಟಿದೆ.

ಆಫ್ಘಾನ್ ಜನರು ಅದೇನ್ ತಪ್ಪು ಮಾಡಿದ್ರೋ ಗೊತ್ತಿಲ್ಲ.. ಅಲ್ಲಿ ಜನರು ಒಂದಿಲ್ಲೊಂದು ರೀತಿಯಲ್ಲಿ ಸಮಸ್ಯೆಗೆ ತುತ್ತಾಗ್ತಾನೆ ಇದ್ದಾರೆ. ಒಂದು ಕಡೆ ತಾಲಿಬಾನ್​ ಎಂಬ ವಿಷಜಂತುಗಳ ಕ್ರೌರ್ಯಕ್ಕೆ ಬಲಿಯಾಗಿ ಜನರು ಜರ್ಜಿರಿತರಾಗಿದ್ರೆ, ಮತ್ತೊಂದು ಕಡೆಯಲ್ಲಿ ಅಫ್ಘಾನ್ ಮೇಲೆ ಪ್ರಕೃತಿ ಮುನಿಸಿಕೊಂಡಿದ್ದು, ಆಫ್ಘಾನ್ ನೆಲ ಪ್ರಾಕೃತಿ ವಿಕೋಪಕ್ಕೆ ತುತ್ತಾಗಿದೆ.

blank

ಹೌದು, ಆಫ್ಘಾನಿಸ್ತಾನ ನೆಲ ತಾಲಿಬಾನ್​ಗಳ ಕಪಿಮುಷ್ಠಿಗೆ ಸಿಲುಕಿ ಬೆಂದ ಕಾವಲಿಯಂತ್ತಾಗಿತ್ತು. ತಾಲಿಬಾನ್​ಗಳ ದಿನನಿತ್ಯ ಅಮಾಯಕರ ಮಾರಣಹೋಮ ನಡೆಸಿದ್ದರ ಪರಿಣಾಮ ಅಲ್ಲಿಯ ನೆಲ ರಕ್ತಮಯವಾಗಿತ್ತು. ಆದ್ರೆ ಇದೀಗ ಅದೇ ಆಫ್ಘಾನ್ ನೆಲ ಜಲಮಯವಾಗಿದೆ. ಪ್ರವಾಹದಲ್ಲಿ ಮನೆಗಳು ನಾಶವಾಗಿದ್ದು, ಸರಿಸುಮಾರು ಸರಿಸುಮಾರು 150 ಕ್ಕೂ ಅಧಿಕ ಜನರು ಪ್ರಾಣ ಕಳ್ಕೊಂಡಿದ್ದಾರೆ.

ಪ್ರವಾಹದ ವಿಷ್ಯಾದಲ್ಲೂ ಪಾಪಿಗಳ ಚೆಲ್ಲಾಟ?

ಜನರ ರಕ್ಷಣೆ ಮಾಡಲು ತಾಲಿಬಾನ್​ಗಳ ಅಡ್ಡಿ?

ಅಫ್ಘಾನ್​ ನಲ್ಲಿ ತಾಲಿಬಾನ್​ ವಶದಲ್ಲಿರುವ ಪ್ರದೇಶದ ಜನರ ನೆಮ್ಮದಿ ಈಗಾಗಲೇ ತಾಲಿಬಾನ್​ ಮಿಕಗಳ ಉಪಟಳದಿಂದ ಹಾರಿ ಹೋಗಿದೆ. ತಾಲಿಬಾನ್​ಗಳ ಉಪಟಳದಿಂದ ಅಲ್ಲಿಯ ಜನರು ಸ್ವಾತಂತ್ರ್ಯವನ್ನ ಕಳ್ಕೊಂಡಿದ್ದು, ಉಸಿರುಗಟ್ಟಿಸುವ ವಾತಾವರಣದಲ್ಲಿ ಬದುಕುವ ಪರಿಸ್ಥಿತಿ ನಿರ್ಮಾಣವಾಗಿದೆ. ಜನರು ನೆಮ್ಮದಿಯ ಜೊತೆಗೆ ಸ್ವಾತಂತ್ರ್ಯವನ್ನು ತಾಲಿಬಾನಿಗಳು ಕಿತ್ತುಕೊಂಡಿದ್ದಾರೆ.

ಅಲ್ಲಿಯ ಜನರ ಸ್ವಾತಂತ್ರ್ಯವ್ಯವನ್ನ ಹತ್ತಿಕ್ಕಿ ಅಮಾಯಕರ ಮಾರಣಹೋಮ ನಡೆಸುತ್ತಿರುವ ತಾಲಿಬಾನ್​ಗಳು ಇದೀಗ ಪ್ರವಾಹದ ವಿಷ್ಯಾದಲ್ಲೂ ಜನರ ಜೀವನ ಜೊತೆ ಚೆಲ್ಲಾಟವಾಡ್ತಿದ್ದಾರೆ ಅನ್ನೋ ಆರೋಪಗಳು ಕೂಡ ಕೇಳಿ ಬರ್ತಿದೆ. ಹೌದು.. ಪ್ರವಾಹ ಉಂಟಾಗಿರುವ ಹೆಚ್ಚಿನ ಪ್ರದೇಶಗಳಲ್ಲಿ ತಾಲಿಬಾನ್​ ಮಿಕಗಳು ಪಾರುಪತ್ಯ ಮೆರೆಯುತ್ತಿದ್ದು, ಇದ್ರಿಂದ ಸರ್ಕಾರಕ್ಕೆ ಅಲ್ಲಿಯ ಜನರ ರಕ್ಷಣೇ ಸಾಧ್ಯವಾಗ್ತಿಲ್ಲ.

ಜನರ ರಕ್ಷಣೆಗೆಂದೇ ಧಾವಿಸಿದವರ ಮೇಲೆ ತಾಲಿಬಾನ್​ಗಳು ದಾಳಿ ಮಾಡುವ ಭೀತಿ ಕೂಡ ಸರ್ಕಾರಕ್ಕಿದೆ. ಇದ್ರಿಂದ ಪ್ರವಾಹದ ಸಂಕಷ್ಟದಲ್ಲಿ ಸಿಲುಕಿರುವ ಜನರ ರಕ್ಷಣಾ ಕಾರ್ಯಕ್ಕೆ ಕೂಡ ತಾಲಿಬಾನ್​ಗಳು ಕೂಡ ಅಡ್ಡಿ ಪಡಿಸುತ್ತಿದ್ದಾರೆ. ತಾಲಿಬಾನ್​ಗಳ ಉಪಟಳದಿಂದ ಜನರು ಇದೀಗ ಮತ್ತಷ್ಟು ಸಂದಿಗ್ಧ ಪರಿಸ್ಥಿತಿಗೆ ಸಿಲುಕಿದ್ದಾರೆ.

ಆಫ್ಘಾನ್​ನಲ್ಲಿ ಈಗಾಗಲೇ ಭೀಕರ ಪ್ರವಾಹ ತಲೆ ದೂರಿದ್ದು, ಪ್ರವಾಹ ಉಂಟಾಗಿರುವ ಹೆಚ್ಚಿನ ಸ್ಥಳಗಳಲ್ಲಿ ತಾಲಿಬಾನ್​ಗಳ ಅಧಿಪತ್ಯ ಇದೆ. ಪ್ರವಾಹ ಉಂಟಾಗಿರುವ ಸ್ಥಳಗಳ ಚಿತ್ರೀಕರಣ ಮಾಡಲು ಕೂಡ ತಾಲಿಬಾನಿಗಳು ಅಡ್ಡಪಡಿಸ್ತಿದ್ದಾರೆ. ಈ ಮೂಲಕ ಸರ್ಕಾರದ ಕಣ್ಣಿನಿಂದ ಪ್ರವಾಹದ ನೈಜತೆಯನ್ನು ಮರೆಮಾಚುವ ಮೂಲಕ ಈ ನೀಚರು ವಿಕೃತ ಸಂತೋಷವನ್ನು ಪಡೆಯುತ್ತಿದ್ದಾರೆ.

ಒಟ್ಟಿನಲ್ಲಿ ಮಾನವೀಯತೆಯನ್ನು ಸಂಪೂರ್ಣ ಮರೆತಿರುವ ಈ ತಾಲಿಬಾನ್​ಗಳಿಂದ ಆಫ್ಘಾನ್​ನಲ್ಲಿ ಜನರು ಸಾವಿನ ಜೊತೆ ಸೆಣಸಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ತಾಲಿಬಾನ್​ ಎಂಬ ರಾಕ್ಷಸರಿಂದ ಅಲ್ಲಿಯ ಅಮಾಯಕ ಜನರು ಮಾಡದ ತಪ್ಪಿಗೆ ಉಸಿರು ಚೆಲ್ಲುವಂತ್ತಾಗಿರುವುದು ಮಾತ್ರ ನಿಜಕ್ಕೂ ದೊಡ್ಡ ದುರಂತ.

ಒಂದು ಕಡೆ ತಾಲಿಬಾನ್​ಗಳ ಉಪಟಳ, ಮತ್ತೊಂದು ಕಡೆ ಉಗ್ರ ಜಲ. ಹೀಗೆ ಸಾಲು ಸಾಲು ಸಂಕಷ್ಟದಲ್ಲಿ ಆಫ್ಘಾನ್ ಜನರು ಸಿಲುಕಿದ್ದಾರೆ. ತಾಲಿಬಾನ್​ಗಳೇ ಹೆಚ್ಚಾಗಿ ವಾಸಿಸುವ ಪ್ರದೇಶಗಳಲ್ಲಿ ಪ್ರವಾಹ ಉಂಟಾಗಿದ್ದರಿಂದ ಅಲ್ಲಿಯ ಜನರ ರಕ್ಷಣೆ ಮಾಡಲಾಗದ ಸ್ಥಿತಿ ಅಲ್ಲಿಯ ಸರ್ಕಾರದ್ದು. ಈ ತಾಲಿಬಾನ್ ನೀಚರು ಅಮಾಯಕ ಜನರಿಗೆ ಇನ್ನಾವ್ಯಾವ ಸಮಸ್ಯೆಗಳನ್ನ ಸೃಷ್ಟಿ ಮಾಡ್ತಾರೋ ಆ ಹೇಡಿಗಳಿಗೆ ಗೊತ್ತು.

 

The post ಪ್ರಾಕೃತಿಕ ವಿಕೋಪಕ್ಕೆ ನಲುಗಿದ ಬಾಂಗ್ಲಾ & ಆಫ್ಘಾನ್; 2500ಕ್ಕೂ ಅಧಿಕ ನಿರಾಶ್ರಿತ ಶಿಬಿರಗಳು ನೆಲಸಮ appeared first on News First Kannada.

Source: newsfirstlive.com

Source link