ರಾಜಕಾರಣಿ ಆಗಬೇಕೆಂದು ಕನಸು ಕಂಡಿದ್ದವ ಕಳ್ಳತನಕ್ಕಿಳಿದ -ಮರ್ಯಾದೆಗೆ ಅಂಜಿ ಆತ್ಮಹತ್ಯೆಗೆ ಶರಣು

ರಾಜಕಾರಣಿ ಆಗಬೇಕೆಂದು ಕನಸು ಕಂಡಿದ್ದವ ಕಳ್ಳತನಕ್ಕಿಳಿದ -ಮರ್ಯಾದೆಗೆ ಅಂಜಿ ಆತ್ಮಹತ್ಯೆಗೆ ಶರಣು

ಬೆಂಗಳೂರು: ಕಳೆದ ಕೆಲ ದಿನಗಳ ಹಿಂದೆ ಪೊಲೀಸ್​ ಬಂಧನಕ್ಕೆ ತೆರಳಿದ್ದ ವೇಳೆ ಸೈನೈಡ್​ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದ ಆಂಧ್ರ ಪ್ರದೇಶ ಮೂಲದ ಆರೋಪಿ ಶಂಕರ್​ ರಾಜಕಾರಣಿ ಆಗಬೇಕು ಅಂತಾ ಕನಸು ಕಂಡಿದ್ದ. ಆದರೆ ಕಳ್ಳತನದ ಹಾದಿ ಹಿಡಿದಿದು, ಕೊನೆಗೆ ಮರ್ಯಾದೆ ಅಂಜಿ ಆತ್ಮಹತ್ಯೆಗೆ ಶರಣವಾಗಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಆಂಧ್ರದ ಮದನಪಲ್ಲಿ‌ ನಿವಾಸಿಯಾಗಿದ್ದ ಶಂಕರ್ ತಾನು ರಾಜಕಾರಣಿಯಾಗಬೇಕು ಅಂತಾ ಕನಸು ಕಂಡಿದ್ದ. ಅಲ್ಲದೇ ವೈಎಸ್​​ಆರ್ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದ. ತಾನು ಜನ‌ಸೇವೆ ಮಾಡಿ ರಾಜಕಾರಣದಲ್ಲಿ ಹೆಸರು ಪಡಿಬೇಕು ಅಂತಾ ಅಂದ್ಕೊಂಡಿದ್ದ. ಆದರೆ ಇದಕ್ಕಾಗಿ ಶಂಕರ್ ಹಿಡಿದಿದ್ದು ಮಾತ್ರ ಕಳ್ಳತನದ ದಾರಿ ಎನ್ನಲಾಗಿದೆ.

blank

ತನ್ನ ಸಹಚರ ಚಂದ್ರಶೇಖರ್ ಜೊತೆ ಸೇರಿ ಬೆಂಗಳೂರಿಗೆ ಆಗಮಿಸಿದ್ದ ಆರೋಪಿ ಶಂಕರ್ ಸರಗಳ್ಳತನ ಶುರು ಮಾಡಿದ್ದ. ಅಲ್ಲದೇ ಕಳ್ಳತನದ ಹಣದಿಂದ ತನ್ನ ಊರಿನಲ್ಲಿರುವ ಬಡವರಿಗೆ ಹಾಗೂ ಅಸಹಾಯಕರಿಗೆ ನೆರವು ನೀಡುತ್ತಿದ್ದ. ಆತನ‌ ವಿರುದ್ಧ ಕಳ್ಳತನ ಪ್ರಕರಣ ದಾಖಲಾಗ್ತಿದ್ದಂತೆಯೇ ಬೆನ್ನಟ್ಟಿದ್ದ ಕೆ.ಆರ್ ಪುರ ಪೊಲೀಸರು, ಆರೋಪಿ‌ ಶಂಕರ್ ಮತ್ತು ಆತನ ಸಹಚರ ಚಂದ್ರಶೇಖರ್ ನನ್ನ ಹಿಡಿಯೋಕೆ‌ ಕಾರ್ಯಾಚರಣೆ ನಡೆಸಿದ್ದರು.

ಇದೇ ವೇಳೆ ಹೊಸಕೋಟೆ ಬಳಿಯ ದೇವಸ್ಥಾನಕ್ಕೆ ಆರೋಪಿಗಳು ಬರೋ‌ ಮಾಹಿತಿ ಪೊಲೀಸರಿಗೆ ಬಂದಿತ್ತು. ಈ ವೇಳೆ ಹಿಡಿಯೋಕೆ ಹೋದಾಗ ಸೈನೈಡ್ ನುಂಗಿ ಆರೋಪಿ ಶಂಕರ್ ಸಾವನ್ನಪ್ಪಿದ್ದ. ತಾನು ಕಳ್ಳ ಅಂತಾ ಗೊತ್ತಾದರೆ ಜನ ನನ್ನನ್ನು ನಂಬುವುದಿಲ್ಲ. ತಾನು ರಾಜಕಾರಣದಲ್ಲಿ ಬೆಳೆಯಲ್ಲ. ತನ್ನ ರಾಜಕೀಯ ಜೀವನಕ್ಕೆ ಡ್ಯಾಮೇಜ್ ಆಗುತ್ತೆ ಅನ್ನೋ ಭಯದಲ್ಲಿ ಆರೋಪಿ ಆತ್ಮಹತ್ಯೆ ಮಾಡಿಕೊಂಡಿರೋ ಶಂಕೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಪೊಲೀಸ್​​ ಅರೆಸ್ಟ್​​ ಮಾಡ್ತಾರೆಂದು ಹೆದರಿ ಸೈನೈಡ್ ನುಂಗಿ ಆತ್ಮಹತ್ಯೆ ಶರಣಾದ ಕುಖ್ಯಾತ ಸರಕಳ್ಳ

The post ರಾಜಕಾರಣಿ ಆಗಬೇಕೆಂದು ಕನಸು ಕಂಡಿದ್ದವ ಕಳ್ಳತನಕ್ಕಿಳಿದ -ಮರ್ಯಾದೆಗೆ ಅಂಜಿ ಆತ್ಮಹತ್ಯೆಗೆ ಶರಣು appeared first on News First Kannada.

Source: newsfirstlive.com

Source link