ಅರ್ಚರಿಯಲ್ಲಿ ಭಾರತದ ಅಭಿಯಾನ ಅಂತ್ಯ -ಬರಿಗೈಯಲ್ಲಿ ತವರಿಗೆ ವಾಪಸ್

ಅರ್ಚರಿಯಲ್ಲಿ ಭಾರತದ ಅಭಿಯಾನ ಅಂತ್ಯ -ಬರಿಗೈಯಲ್ಲಿ ತವರಿಗೆ ವಾಪಸ್

ಇಂದು ನಡೆದ ಆರ್ಚರಿ ಪ್ರೀ-ಕ್ವಾರ್ಟರ್​​ ಫೈನಲ್​ ಪಂದ್ಯದಲ್ಲಿ ಭಾರತದ ಅತನು ದಾಸ್​​ ಸೋಲುಂಡರು. ಈ ಸೋಲಿನೊಂದಿಗೆ ಟೋಕಿಯೊ ಒಲಿಂಪಿಕ್ಸ್ ಕೂಟದಲ್ಲಿ ಆರ್ಚರಿ ವಿಭಾಗದಲ್ಲಿ ಭಾರತದ ಅಭಿಯಾನ ಅಂತ್ಯ ಕಂಡಿದ್ದು, ದೇಶದ ಬಿಲ್ಲುಗಾರರು ಬರಿಗೈಯಲ್ಲಿ ವಾಪಾಸ್ಸಾಗಲಿದ್ದಾರೆ. ಇಂದಿನ ಪ್ರೀ-ಕ್ವಾರ್ಟರ್‌ಫೈನಲ್‌ನಲ್ಲಿ ಅತನು ದಾಸ್, ತಕಹರು ಫುರುಕಾವ ವಿರುದ್ಧ 6-4ರ ಅಂತರದಿಂದ ಸೋಲು ಅನುಭವಿಸಿದರು. ಎಲಿಮಿನೇಷನ್ ಸುತ್ತಿನಲ್ಲಿ ಲಂಡನ್ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ಆರ್ಚರಿಪಟು ಜಿನ್ ಹಿಯೆಕ್ ವಿರುದ್ಧ ಗೆಲುವು ದಾಖಲಿಸಿದ ಅತನು ದಾಸ್, ಪದಕದ ಭರವಸೆ ಮೂಡಿಸಿದ್ರು. ಆದ್ರೆ ಇಂದಿನ ಸ್ಪರ್ಧೆಯಲ್ಲಿ ಉತ್ತಮ ಪ್ರದರ್ಶನವನ್ನ ನೀಡಲು ಸಾಧ್ಯವಾಗಲಿಲ್ಲ.

The post ಅರ್ಚರಿಯಲ್ಲಿ ಭಾರತದ ಅಭಿಯಾನ ಅಂತ್ಯ -ಬರಿಗೈಯಲ್ಲಿ ತವರಿಗೆ ವಾಪಸ್ appeared first on News First Kannada.

Source: newsfirstlive.com

Source link