ಸೌಥ್ ಆಫ್ರಿಕಾ ಮಣಿಸಿದ ಭಾರತ, 4-3 ಅಂತರದಲ್ಲಿ ಗೆಲುವು – ಪದಕದ ಸನೀಹದಲ್ಲಿ ಹಾಕಿ ತಂಡ

– ಒಲಿಂಪಿಕ್ ಮಹಿಳಾ ಹಾಕಿಯಲ್ಲಿ ವಂದನಾ ದಾಖಲೆ
– ರಣ ರೋಚಕ ಪಂದ್ಯದಲ್ಲಿ ಭಾರತ ಗೋಲ್ ದಾಖಲಾಗಿದ್ದು ಹೇಗೆ?

ಟೋಕಿಯೋ: ಭಾರತೀಯ ಮಹಿಳಾ ಹಾಕಿ ತಂಡ ಪೂಲ್ ಸ್ಟೇಜ್ ನ ಕೊನೆಯ ಪಂದ್ಯದಲ್ಲಿ ಸೌಥ್ ಆಫ್ರಿಕಾ ತಂಡವನ್ನು ಮಣಿಸಿ ಕ್ವಾರ್ಟರ್ ಫೈನಲ್ ತಲುಪಿದೆ.

ವಂದನಾ ದಾಖಲೆ:
ಐರ್ಲೆಂಡ್ ಮತ್ತು ಗ್ರೇಟ್ ಬ್ರಿಟನ್ ನಡುವಿನ ಪಂದ್ಯದ ನಂತರ ಪೂಲ್-ಎ ಪಂದ್ಯಗಳ ಕ್ವಾರ್ಟರ್ ಫೈನಲ್ ತಲುಪುವ ತಂಡ ಯಾವುದು ಅಂತ ಗೊತ್ತಾಗಲಿದೆ. ಇನ್ನೂ ವಂದನಾ ಕಟಾರಿಯಾ ಸತತ ಮೂರು ಗೋಲ್ ದಾಖಲಿಸುವ ಮೂಲಕ ಹೊಸ ದಾಖಲೆಯನ್ನ ತಮ್ಮ ಹೆಸರಿನಲ್ಲಿ ಬರೆದುಕೊಂಡರು. ವಂದನಾ ಒಲಿಂಪಿಕ್ಸ್ ನಲ್ಲಿ ಹ್ಯಾಟ್ರಿಕ್ ಗೋಲ್ ಮಾಡಿದ ಭಾರತದ ಮೊದಲ ಮಹಿಳಾ ಹಾಕಿ ಆಟಗಾರ್ತಿಯಾಗಿದ್ದಾರೆ.

ರಣ ರೋಚಕ ಪಂದ್ಯ:
ಸೌಥ್ ಆಫ್ರಿಕಾದ ವಿರುದ್ಧ ಭಾರತದ ಆರಂಭ ಆಕ್ರಮಣವಾಗಿತ್ತು. ಪಂದ್ಯದ ನಾಲ್ಕನೇ ನಿಮಿಷದಲ್ಲಿ ನವ್‍ನೀತ್ ಕೌರ್ ಬಳಿಯಲ್ಲಿಂದ ವಂದನಾ ಗೋಲ್ ದಾಖಲಿಸುವ ಮೂಲಕ 1-0 ಅಂತರದ ಮುನ್ನಡೆ ಕಾಯ್ದುಕೊಂಡರು. ಮೊದಲ ಕ್ವಾರ್ಟರ್ ಅಂತ್ಯಕ್ಕೂ ಮೊದಲು ಸೌಥ್ ಆಫ್ರಿಕಾ ಸಹ ಗೋಲ್ ಮಾಡಿ ಪಂದ್ಯವನ್ನು ಸಮ ಮಾಡಿಕೊಂಡಿತು.

ಎರಡನೇ ಕ್ವಾರ್ಟರ್ ನಲ್ಲಿ ವಂದನಾ ಮತ್ತೆ ಗೋಲ್ ಮಾಡಿ ತಂಡಕ್ಕೆ 2-1ರ ಮುನ್ನಡೆ ತಂದರು. ಇನ್ನೂ ಸೌಥ್ ಆಫ್ರಿಕಾ ಕೊನೆ ಕ್ಷಣದಲ್ಲಿ ಮತ್ತೆ ಗೋಲ್ ದಾಖಲಿಸಿ ಪಂದ್ಯದ ಕುತೂಹಲವನ್ನು ಹೆಚ್ಚು ಮಾಡಿತು. ಮೂರನೇ ಕ್ವಾರ್ಟರ್ ಭಾರತದ ನೇಹಾ ಗೋಯಲ್ ಗೋಲ್ ದಾಖಲಿಸಿದ ಬೆನ್ನಲ್ಲೇ ಸೌಥ್ ಆಫ್ರಿಕಾ ಸಹ ಒಂದು ಪಾಯಿಂಟ್ ಪಡೆದುಕೊಂಡಿತು. ನಂತರ 49ನೇ ನಿಮಿಷದಲ್ಲಿ ವಂದನಾ ತಮ್ಮ ಮೂರನೇ ಮತ್ತು ತಂಡದ ನಾಲ್ಕನೇ ಗೋಲ್ ದಾಖಲಿಸಿ ಭಾರತೀಯರ ಹೃದಯ ಕದ್ದರು. ಇದನ್ನೂ ಓದಿ: ಒಲಿಂಪಿಕ್ಸ್ ಕ್ರೀಡಾಪಟುಗಳು ಗೆದ್ದ ಪದಕವನ್ನು ಕಚ್ಚಲು ಇದು ಅಸಲಿ ಕಾರಣ!

ಕಮಲ್‍ಪ್ರೀತ್ ಅಚ್ಚರಿ:
ಒಲಿಂಪಿಕ್ಸ್ 9ನೇ ದಿನಕ್ಕೆ ಕಾಲಿಟ್ಟಿದ್ದು, ಡಿಸ್ಕಸ್ ಥ್ರೋನಲ್ಲಿ ಭಾರತದ ಕಮಲ್‍ಪ್ರೀತ್ ಅದ್ಭುತ ಪ್ರದರ್ಶನ ನೀಡಿದ್ದು, ಫೈನಲ್ ಪ್ರವೇಶಿಸಿದ್ದಾರೆ. ಭಾರತಕ್ಕೆ ಪದಕ ತಂದುಕೊಡುವಲ್ಲಿ ಕಮಲ್‍ಪ್ರೀತ್ ಒಂದು ಹೆಜ್ಜೆ ಮಾತ್ರ ದೂರದಲ್ಲಿದ್ದಾರೆ. ಮೂರನೇ ಪ್ರಯತ್ನದಲ್ಲಿ ಕಮಲ್‍ಪ್ರೀತ್ 64 ಮೀಟರ್ ಥ್ರೋ ಮಾಡಿದ್ದಾರೆ. ಡಿಸ್ಕಸ್ ಥ್ರೋನ ಕ್ವಾಲಿಫಿಕೇಶನ್ ಸುತ್ತಿನಲ್ಲಿ ಇತಿಹಾಸ ಬರೆದಿರುವ ಕಮಲ್‍ಪ್ರೀತ್ ಆಗಸ್ಟ್ 2ರಂದು ಫೈನಲ್ ಆಡಲಿದ್ದಾರೆ. ಕಮಲ್‍ಪ್ರೀತ್ ಅವರಿಗೆ ಪದಕ ಗೆಲ್ಲುವ ಎಲ್ಲ ಅವಕಾಶಗಳಿವೆ. ಒಂದು ವೇಳೆ ಗೆದ್ರೆ ಡಿಸ್ಕಸ್ ಥ್ರೋನಲ್ಲಿ ಪದಕ ಗೆದ್ದ ಮೊದಲ ಭಾರತೀಯ ಸ್ಥಾನಕ್ಕೆ ಪಾತ್ರವಾಗಲಿದ್ದಾರೆ. ಇದನ್ನೂ ಓದಿ: ಅಶೋಕ್ ಜೊತೆ ವೈಮನಸ್ಸು ಇಲ್ಲ- ವಿ ಸೋಮಣ್ಣ

blank

ಆರ್ಚರಿ, ಬಾಕ್ಸಿಂಗ್‍ನಲ್ಲಿ ನಿರಾಸೆ:
ಇನ್ನೂ ಆರ್ಚರಿ ಮತ್ತು ಬಾಕ್ಸಿಂಗ್ ನಲ್ಲಿ ಭಾರತ ನಿರಾಸೆ ಕಂಡಿದೆ. ಅರ್ಚರಿಯಲ್ಲಿ ಅತನುದಾಸ್ ಮತ್ತು ಬಾಕ್ಸರ್ ಅಮಿತ್ ಪಂಘಲ್ ಪಂದ್ಯದಿಂದ ಹೊರ ಬಂದಿದ್ದಾರೆ. ಇಬ್ಬರು ಪ್ರೀ ಕ್ವಾರ್ಟರ್ ಪಂದ್ಯದಲ್ಲಿ ಸೋಲು ಕಂಡರು. ಇದನ್ನೂ ಓದಿ: ಬಿಎಸ್‍ವೈ ಮಾತನ್ನೇ ಬಿಜೆಪಿ ಹೈಕಮಾಂಡ್ ಕೇಳಲಿಲ್ಲ, ಜನತಾದಳ ಮೂಲದ ಬೊಮ್ಮಾಯಿ ಮಾತು ಕೇಳುತ್ತಾರ? – ಸಿದ್ದರಾಮಯ್ಯ ಟೀಕೆ

The post ಸೌಥ್ ಆಫ್ರಿಕಾ ಮಣಿಸಿದ ಭಾರತ, 4-3 ಅಂತರದಲ್ಲಿ ಗೆಲುವು – ಪದಕದ ಸನೀಹದಲ್ಲಿ ಹಾಕಿ ತಂಡ appeared first on Public TV.

Source: publictv.in

Source link