ರಾಕಿ ಭಾಯ್​ KGF-2ಗೆ ಎಲ್ಲಿಲ್ಲದ ಡಿಮ್ಯಾಂಡ್; ಹೊಂಬಾಳೆ ಬೆನ್ನು ಬಿದ್ದ ಒಡಿಶಾ ಸಿನಿ ಇಂಡಸ್ಟ್ರಿ

ರಾಕಿ ಭಾಯ್​ KGF-2ಗೆ ಎಲ್ಲಿಲ್ಲದ ಡಿಮ್ಯಾಂಡ್; ಹೊಂಬಾಳೆ ಬೆನ್ನು ಬಿದ್ದ ಒಡಿಶಾ ಸಿನಿ ಇಂಡಸ್ಟ್ರಿ

ಬಾಲಿವುಡ್, ಟಾಲಿವುಡ್, ಕಾಲಿವುಡ್ ಚಿತ್ರಗಳು ಮಾತ್ರ 100 ಕೋಟಿ ಕ್ಲಬ್​​ ಸೇರುತ್ತವೆ ಎಂಬ ವಾಡಿಕೆ ಇತ್ತು.. ಈ ವಾಡಿಕೆಯನ್ನು ಕನ್ನಡದ ಹೆಮ್ಮೆಯ ಚಿತ್ರ ಕೆಜಿಎಫ್ 1 ಬುಡ ಮೇಲು ಮಾಡಿತು.. ಈಗ ಚಾಪ್ಟರ್1 ನಂತೆ ಕೆಜಿಎಫ್ 2 ಕೂಡ ಸಿದ್ಧವಾಗಿದೆ.. ಇದೀಗ ಒಡಿಶಾ ರಾಜ್ಯ ಕೋಲಾರದ ಗಣಿಯ ಮೇಲೆ ಕಣ್ಣಿಟ್ಟಿದೆ.. ನಮ್ಮೂರಿಗೆ ನಿಮ್ಮ ಸಿನಿಮಾ ಬೇಕೆ ಬೇಕು ಅಂತ ಹೊಂಬಾಳೆ ಬೆನ್ನು ಬಿದ್ದಿದೆ.

ಕೆಜಿಎಫ್ 2 ಕೂಡ 5 ಭಾಷೆಗಳಲ್ಲಿ ರಿಲಿಸ್​ ಮಾಡೋದಾಗಿ ಚಿತ್ರತಂಡ ಅಧಿಕೃತವಾಗಿ ಹೇಳಿದೆ.. ಆದ್ರೆ ಈಗ ಕೆಜಿಎಫ್ ಚಿತ್ರದ ಮೇಲೆ ಕನ್ನಡ, ತಮಿಳು, ತೆಲುಗು, ಹಿಂದಿ, ಮಲೆಯಾಳಂ ಸಿನಿ ಇಂಡಸ್ಟರಿ ಮಾತ್ರವಲ್ಲ, ಒಡಿಶಾ ಕೂಡ ಮೇಲೆ ಕಣ್ಣಿಟ್ಟಿದೆ.

blank

ಹೌದು.. ಮೂಲಗಳ ಪ್ರಕಾರ ಒಡಿಶಾ ರಾಜ್ಯದ ಪ್ರಾದೇಶಿಕ ಭಾಷೆ ಒಡಿಯಾದಲ್ಲಿ ಕೆಜಿಎಫ್2 ಚಿತ್ರವನ್ನು ರಿಲೀಸ್​ ಮಾಡಲು ಅಲ್ಲಿನ ಸಿನಿಮಾ ಟೊಂಕ ಕಟ್ಟಿ ನಿಂತಿದ್ದಾರೆ.. ಈಗಾಗಲೇ ಒಡಿಯಾ ಚಿತ್ರರಂಗದ ಟಾಪ್ ವಿತರಕರು ಹೊಂಬಾಳೆ ಬ್ಯಾನರ್​ ಅನ್ನು ಸಂಪರ್ಕ ಮಾಡಿದ್ದು, ಬರೋಬ್ಬರಿ 1 ಕೋಟಿಗೆ ಒಡಿಯಾ ಭಾಷೆಗೆ ಡಬ್ಬಿಂಗ್​ ರೈಟ್ಸ್​​ಗೆ ಆಫರ್​ ಕೊಟ್ಟಿದ್ದಾರೆ ಅನ್ನೋ ಮಾಹಿತಿ ಬಲ್ಲ ಮೂಲಗಳಿಂದ ಸಿಕ್ಕಿದೆ.

ವಿಶೇಷ ಅಂದ್ರೆ ಇದುವರೆಗೂ ಯಾವುದೇ ಭಾಷೆಯ ಚಿತ್ರಗಳು ಪುಟ್ಟ ಚಿತ್ರರಂಗವಾದ ಒಡಿಯಾ ಭಾಷೆಗೆ ಇಷ್ಟು ದೊಡ್ಡ ಮೊತ್ತಕ್ಕೆ ಸೇಲಾಗಿಲ್ಲ. ಬಾಲಿವುಡ್​ ಚಿತ್ರಗಳು ಒಡಿಸ್ಸಾದಲ್ಲಿ ಹೆಚ್ಚಾಗಿ ರಿಲೀಸ್​ ಆದರೂ ಇದುವರೆಗೆ 50 ಲಕ್ಷಕ್ಕಿಂತ ಹೆಚ್ಚಿನ ಮೊತ್ತಕ್ಕೆ ಡಬ್ಬಿಂಗ್ ರೈಟ್ಸ್​ ಸೇಲಾಗಿಲ್ಲ. ಪಿಕೆ ಚಿತ್ರ ಈ ಹಿಂದೆ 50 ಲಕ್ಷಕ್ಕೆ ಸೇಲಾಗಿದ್ದೆ ದಾಖಲೆಯಾಗಿತ್ತು.. ಆದರೆ ಈಗ ಪಿಕೆ ಚಿತ್ರವನ್ನು ಹಿಂದಿಕ್ಕಿ ಕೆಜಿಎಫ್ 2 ಚಿತ್ರಕ್ಕೆ 1 ಕೋಟಿಗೆ ಡಿಮ್ಯಾಂಡ್ ಬಂದಿದ್ದು, ಹಿಂದಿನ ಎಲ್ಲಾ ದಾಖಲೆಗಳನನ್ನು ನೆಲಸಮ ಮಾಡೋಕೆ ಕೆಜಿಎಫ್ 2 ಸನ್ನದ್ಧವಾಗ್ತಿದೆ ಅಂದ್ರೆ ತಪ್ಪಲ್ಲ.

blank

The post ರಾಕಿ ಭಾಯ್​ KGF-2ಗೆ ಎಲ್ಲಿಲ್ಲದ ಡಿಮ್ಯಾಂಡ್; ಹೊಂಬಾಳೆ ಬೆನ್ನು ಬಿದ್ದ ಒಡಿಶಾ ಸಿನಿ ಇಂಡಸ್ಟ್ರಿ appeared first on News First Kannada.

Source: newsfirstlive.com

Source link