ಪೃಥ್ವಿ, ಸೂರ್ಯ ಇಂಗ್ಲೆಂಡ್​ ಕನಸು ಭಗ್ನ! -ಪಡಿಕ್ಕಲ್​​ ಅನುಭವ ಸಾಕಾಗಲ್ಲ ಎಂದಿದ್ದ BCCI ಆಯ್ಕೆ ಏನು?

ಪೃಥ್ವಿ, ಸೂರ್ಯ ಇಂಗ್ಲೆಂಡ್​ ಕನಸು ಭಗ್ನ! -ಪಡಿಕ್ಕಲ್​​ ಅನುಭವ ಸಾಕಾಗಲ್ಲ ಎಂದಿದ್ದ BCCI ಆಯ್ಕೆ ಏನು?

ಇಂಜುರಿ ರಿಪ್ಲೇಸ್​ಮೆಂಟ್​ ಆಯ್ತೆಂದು ನಿಟ್ಟುಸಿರು ಬಿಡುತ್ತಲೇ, ಕೃನಾಲ್​ ಪಾಂಡ್ಯ ಕೊರೊನಾಗೆ ತುತ್ತಾಗಿದ್ದು, ಇಂಗ್ಲೆಂಡ್​ ಸರಣಿ ಮೇಲೆ ಪ್ರಭಾವ ಬೀರುತ್ತಿದೆ. ಇನ್ನೇನು ಬದಲಿ ಆಟಗಾರರಾಗಿ ಇಂಗ್ಲೆಂಡ್​​ಗೆ ಹಾರುವ ಉತ್ಸಾಹದಲ್ಲಿದ್ದ ಪೃಥ್ವಿ ಶಾ, ಸೂರ್ಯಕುಮಾರ್​ಗೆ ಪರ್ಯಾಯ ಆಟಗಾರನ್ನ ಕಳುಹಿಸಿಕೊಡಬೇಕಾದ ಅನಿವಾರ್ಯತೆಗೆ ಬಿಸಿಸಿಐ ಸಿಲುಕಿದೆ.

blank

ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿ ಆರಂಭಕ್ಕೆ ಜಸ್ಟ್​ 4 ದಿನಗಳು ಮಾತ್ರವೇ ಬಾಕಿಯಿದೆ. ಇದಕ್ಕಾಗಿ ಟೀಮ್ ಇಂಡಿಯಾ ಭರ್ಜರಿ ತಯಾರಿ ನಡೆಸಿಕೊಳ್ತಿದ್ರೆ, ಮತ್ತೊಂದೆಡೆ ಟೀಮ್ ಇಂಡಿಯಾಕ್ಕೆ ಸಮಸ್ಯೆಗಳ ಸರಮಾಲೆ ಬಿಟ್ಟು ಬಿಡದೇ ಕಾಡ್ತಿದೆ. ಶುಭ್​​ಮನ್​​ ಗಿಲ್, ವಾಷಿಂಗ್ಟನ್ ಇಂಜುರಿಯಿಂದ ಆರಂಭವಾದ ಈ ಸಮಸ್ಯೆ ರಿಪ್ಲೇಸ್​ಮೆಂಟ್​​ನಿಂದ ಬಗೆಹರಿತು ಎನ್ನುವಾಗಲೇ, ಮತ್ತೆ ಅದೇ ರಿಪ್ಲೇಸ್​​ಮೆಂಟ್ ಸಮಸ್ಯೆಗೆ ಬಂದು ನಿಂತಿದೆ.

blank

ಇದಕ್ಕೆ ಕಾರಣ ಕೃನಾಲ್ ಪಾಂಡ್ಯ ಕೊರೊನಾಗೆ ತುತ್ತಾಗಿರುವುದು. ಹೌದು..! ಕೊರೊನಾ ಎಫೆಕ್ಟ್​​ನಿಂದ ಟೀಮ್ ಇಂಡಿಯಾ ಲಂಕಾ ಸರಣಿ ಕೈಚೆಲ್ಲಿದ್ರೆ, ಇತ್ತ ಕೃನಾಲ್ ಸಂಪರ್ಕದಲ್ಲಿದ್ದ ಪೃಥ್ವಿ ಶಾ, ಸೂರ್ಯಕುಮಾರ್ ಇಂಗ್ಲೆಂಡ್ ಕನಸು ಕೂಡ ಭಗ್ನವಾಗೋ ಲಕ್ಷಣ ಕಾಣ್ತಿದೆ. ಅಷ್ಟೇ ಅಲ್ಲ..! ಈಗ ಬದಲಿ ಆಟಗಾರರಿಗೆ ರಿಪ್ಲೇಸ್​ಮೆಂಟ್ ಕಳುಹಿಸಿಕೊಡಬೇಕಾದ ಸಂಕಷ್ಟಕ್ಕೆ ಬಿಸಿಸಿಐ ಸಿಲುಕಿದೆ. ಇದಕ್ಕೆ ಕಾರಣ ಆಟಗಾರರ ಕಠಿಣ ಕ್ವಾರಂಟೀನ್ ರೂಲ್ಸ್.

blank

ಬದಲಿ ಆಟಗಾರರನ್ನಾಗಿ ಯಾರನ್ನ ಕಳುಹಿಸುತ್ತೆ ಬಿಸಿಸಿಐ..?
ಈಗಾಗಲೇ ಆಯ್ಕೆ ಮಾಡಲಾಗಿರುವ ಈ ಇಬ್ಬರು, ಆಗಸ್ಟ್ 6ರ ತನಕ ಕೊಲಂಬೋದಲ್ಲಿ ಐಸೋಲೆಷನ್​ನಲ್ಲಿ ಉಳಿಯಲಿದ್ದಾರೆ. ಹೀಗಾಗಿ ಆಗಸ್ಟ್ 7ರ ಬಳಿಕವೇ ಇವರು ಇಂಗ್ಲೆಂಡ್ ಫ್ಲೈಟ್​ ಹತ್ತಬೇಕಾಗುತ್ತೆ. ಅತ್ತ ಯುಕೆ ಸರ್ಕಾರ ಸೋಂಕಿತರ ಸಂಖ್ಯೆ ಗಣನೀಯ ಏರಿಕೆಯಿಂದ ಕಠಿಣ ನಿರ್ಬಂಧಗಳನ್ನ ಹೇರಿದೆ. ಹೀಗಾಗಿ ಕಡ್ಡಾಯ 10 ದಿನಗಳ ಕ್ವಾರಂಟೀನ್​ನಲ್ಲೇ ಇರಬೇಕಾಗುತ್ತೆ. ಇದರಿಂದಾಗಿ ಕನಿಷ್ಠ 3 ಪಂದ್ಯಗಳಿಗೆ ಅಲಭ್ಯರಾಗೋದು ಗ್ಯಾರಂಟಿ. ಇದರಿಂದಲೇ ಬಿಸಿಸಿಐ, ಬದಲಿ ಆಟಗಾರರನ್ನ ಕಳುಹಿಸಿಕೊಡಲು ಚಿಂತನೆ ನಡೆಸ್ತಿದೆ. ಆದರೆ  ಬದಲಿ ಆಟಗಾರನ್ನಾಗಿ ಯಾರನ್ನ ಕಳಿಸಬೇಕು ಅನ್ನೋದೇ ಬಿಸಿಸಿಐಗೆ ಬಿಗ್ ಚಾಲೆಂಜ್ ಆಗಿ ಮಾರ್ಪಟ್ಟಿದೆ.

ಒಟ್ಟಿನಲ್ಲಿ ರಿಪ್ಲೇಸ್​​ಮೆಂಟ್ ವಿಚಾರಲದಲ್ಲಿ ಮತ್ತೆ ಮತ್ತೆ, ಸುದ್ದಿಯಾಗ್ತಿರುವ ಬಿಸಿಸಿಐ, ಈಗ ಮತ್ತೆ ಯಾರನ್ನ ಕಳುಹಿಸಿಕೊಡುತ್ತೆ ಅನ್ನೋದಕ್ಕೆ ಇನ್ನೆರೆಡು ದಿನದಲ್ಲಿ ಸ್ಪಷ್ಟ ಉತ್ತರ ಸಿಗೋದು ಗ್ಯಾರಂಟಿ.

ಇದನ್ನೂ ಓದಿ: ಇಂಗ್ಲೆಂಡ್ ಟೆಸ್ಟ್​ ಸರಣಿಗೆ ಟೀಮ್ ಇಂಡಿಯಾ ಭರ್ಜರಿ ಸಮರಾಭ್ಯಾಸ

The post ಪೃಥ್ವಿ, ಸೂರ್ಯ ಇಂಗ್ಲೆಂಡ್​ ಕನಸು ಭಗ್ನ! -ಪಡಿಕ್ಕಲ್​​ ಅನುಭವ ಸಾಕಾಗಲ್ಲ ಎಂದಿದ್ದ BCCI ಆಯ್ಕೆ ಏನು? appeared first on News First Kannada.

Source: newsfirstlive.com

Source link