ಮಹಿಳೆಯರ ಜೊತೆ ಅಸಭ್ಯ ವರ್ತನೆ; ಸಾರ್ವಜನಿಕರಿಂದ ಧರ್ಮದೇಟು

ಮಹಿಳೆಯರ ಜೊತೆ ಅಸಭ್ಯ ವರ್ತನೆ; ಸಾರ್ವಜನಿಕರಿಂದ ಧರ್ಮದೇಟು

ರಾಯಚೂರು: ಮಹಿಳೆಯರ ಜೊತೆ ಅಸಭ್ಯವಾಗಿ ವರ್ತಿಸುತ್ತಿದ್ದ ವ್ಯಕ್ತಿಯೋರ್ವನಿಗೆ ಸಾರ್ವಜನಿಕರು ಧರ್ಮದೇಟು ನೀಡಿದ ಘಟನೆ ನಗರದ ನಗರದ ಆಶಾಪುರ ರಸ್ತೆಯಲ್ಲಿ ನಡೆದಿದೆ.

ರಸ್ತೆಯಲ್ಲಿ ಒಂಟಿಯಾಗಿ ಓಡಾಡ್ತಿದ್ದ ಒಂಟಿ ಮಹಿಳೆಯರನ್ನು ಹಿಂಬಾಲಿಸುತ್ತಿದ್ದ ಅಪರಿಚಿತನೋರ್ವ, ಮಹಿಳೆಯರ ಸೀರೆ ಎಳೆಯಲು ಪ್ರಯತ್ನ ಮಾಡ್ತಿದ್ದ ಎನ್ನಲಾಗಿದೆ. ಇದರಿಂದ ಗಾಬರಿಗೊಂಡಿದ್ದ ಕೆಲವು ಮಹಿಳೆಯರು ಈತ ಮೇಲೆ ಆರೋಪ ಮಾಡಿದ್ದರು.

ವ್ಯಕ್ತಿಯ ಅಸಭ್ಯ ವರ್ತನೆಯಿಂದ ರೊಚ್ಚಿಗೆದ್ದ ಸ್ಥಳೀಯರು ಆತನನ್ನು ಮರಕ್ಕೆ ಕಟ್ಟಿ ಹಾಕಿ ಧರ್ಮದೇಟು ಕೊಟ್ಟು ಪೊಲೀಸ​ರ ವಶಕ್ಕೆ ನೀಡಿದ್ದಾರೆ.

The post ಮಹಿಳೆಯರ ಜೊತೆ ಅಸಭ್ಯ ವರ್ತನೆ; ಸಾರ್ವಜನಿಕರಿಂದ ಧರ್ಮದೇಟು appeared first on News First Kannada.

Source: newsfirstlive.com

Source link