ಕಾಫಿ ತೋಟಕ್ಕೆ ಲಗ್ಗೆ ಇಟ್ಟ ಕಾಡುಕೋಣಗಳು; ಆತಂಕದಲ್ಲಿ ಬೆಳೆಗಾರರು

ಕಾಫಿ ತೋಟಕ್ಕೆ ಲಗ್ಗೆ ಇಟ್ಟ ಕಾಡುಕೋಣಗಳು; ಆತಂಕದಲ್ಲಿ ಬೆಳೆಗಾರರು

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಗುಂಪು ಗುಂಪಾಗಿ ಕಾಡು ಕೋಣಗಳು ಪ್ರತ್ಯಕ್ಷವಾಗಿದ್ದು ಸ್ಥಳೀಯ ಕಾಫಿ ಬೆಳೆಗಾರರಲ್ಲಿ ಆತಂಕವನ್ನುಂಟು ಮಾಡಿದೆ.

ಮೂಡಿಗೆರೆ ತಾಲೂಕಿನ ಕೆಳಗೂರು ಗ್ರಾಮದ ವ್ಯಾಪ್ತಿಯಲ್ಲಿ ಕೋಣಗಳ ಗುಂಪು ಓಡಾಡುತ್ತಿವೆ. ಕಾಫಿ ತೋಟಕ್ಕೆ ನುಗ್ಗಿ ಬೆಳೆ ನಾಶ ಮಾಡುತ್ತಿವೆ. ಮಲೆನಾಡ ಭಾಗದಲ್ಲಿ ಕಾಡು ಕೋಣಗಳ ಹಾವಳಿ ಹೆಚ್ಚಿದ್ದು, ಕಾಫಿ ಬೆಳೆಗಾರರು ಕಾಡು ಕೋಣಗಳ ಹಾವಳಿಗೆ ಕಂಗಾಲಾಗಿದ್ದಾರೆ. ಕಾಡುಕೋಣಗಳ ಹಾವಳಿ ಮೊಬೈಲ್​ನಲ್ಲಿ ಸೆರೆಯಾಗಿದೆ.

ಇದನ್ನೂ ಓದಿ: ರೌಡಿಗಳನ್ನೂ ಮೀರಿಸಿದ ಮಂಗಗಳ ಭಯಾನಕ ‘ಗ್ಯಾಂಗ್​ ವಾರ್​’ಗೆ ಕಾರಣವಾಯ್ತು ಕೊರೊನಾ!

The post ಕಾಫಿ ತೋಟಕ್ಕೆ ಲಗ್ಗೆ ಇಟ್ಟ ಕಾಡುಕೋಣಗಳು; ಆತಂಕದಲ್ಲಿ ಬೆಳೆಗಾರರು appeared first on News First Kannada.

Source: newsfirstlive.com

Source link